ಈ ರಾಜ್ಯದಲ್ಲಿ ರೆಸ್ಟೋರೆಂಟ್ ತೆರೆಯಲು ಇನ್ಮುಂದೆ ಅನಿವಾರ್ಯವಲ್ಲದ ಲೈಸನ್ಸ್ ಬೇಕಿಲ್ಲ

ಜೂನ್ 2003 ರ ಮೊದಲು, ಕೇಂದ್ರ ಪ್ರವಾಸೋದ್ಯಮ ಸಚಿವಾಲಯವು ದೇಶಾದ್ಯಂತ ರೆಸ್ಟೋರೆಂಟ್‌ಗಳನ್ನು ಅನುಮೋದಿಸುವ ಯೋಜನೆಯನ್ನು ಜಾರಿಗೆ ತಂದಿತ್ತು. ಈ ಯೋಜನೆಯನ್ನು 30 ಜೂನ್ 2003 ರಂದು ದೇಶಾದ್ಯಂತ ನಿಲ್ಲಿಸಲಾಯಿತು ಮತ್ತು ರಾಜ್ಯಗಳು ತಮ್ಮದೇ ಆದ ಮಾರ್ಗಸೂಚಿಗಳನ್ನು ರೂಪಿಸಿ ಯೋಜನೆಯನ್ನು ಅನುಷ್ಠಾನಗೊಳಿಸಬೇಕು ಎಂದು ರಾಜ್ಯ ಸರ್ಕಾರಗಳಿಗೆ ಸೂಚಿಸಲಾಗಿತ್ತು.

Last Updated : Nov 5, 2020, 12:34 PM IST
  • ದೆಹಲಿಯಲ್ಲಿ ರೆಸ್ಟೋರೆಂಟ್ ತೆರೆಯಲು ಇನ್ಮುಂದೆ ಅನಿವಾರ್ಯವಲ್ಲದ ಲೈಸನ್ಸ್ ಬೇಕಿಲ್ಲ.
  • ದೆಹಲಿ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಈ ಕುರಿತು ಅಧಿಸೂಚನೆ ಹೊರಡಿಸಿದೆ
  • ದೆಹಲಿ ಸಿಎಂ ಅರವಿಂದ್ ಕೆಜ್ರಿವಾಲ್, 2020 ರ ಅಕ್ಟೋಬರ್ 7 ರಂದು NRAI ನಿಯೋಗದೊಂದಿಗೆ ಈ ಕುರಿತು ಸಭೆ ನಡೆಸಿದ್ದರು.
ಈ ರಾಜ್ಯದಲ್ಲಿ ರೆಸ್ಟೋರೆಂಟ್ ತೆರೆಯಲು ಇನ್ಮುಂದೆ ಅನಿವಾರ್ಯವಲ್ಲದ ಲೈಸನ್ಸ್ ಬೇಕಿಲ್ಲ  title=

ನವದೆಹಲಿ: ದೆಹಲಿಯಲ್ಲಿ ಸ್ವತಂತ್ರ ರೆಸ್ಟೋರೆಂಟ್‌ಗಳನ್ನು ತೆರೆಯಲು, ಇನ್ನು ಮುಂದೆ ಪ್ರವಾಸೋದ್ಯಮ ಇಲಾಖೆಯ ಅನುಮೋದನೆಯ ಅಗತ್ಯವಿರುವುದಿಲ್ಲ. ದೆಹಲಿಯ ಸ್ವತಂತ್ರ ರೆಸ್ಟೋರೆಂಟ್‌ಗಳಿಗೆ ಅನುಮೋದನೆ ನೀಡುವ ಪ್ರಕ್ರಿಯೆಗೆ ಅಂತ್ಯ ಹಾಡಿರುವ ದೆಹಲಿ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಈ ಕುರಿತು ಅಧಿಸೂಚನೆ ಹೊರಡಿಸಿದೆ. ಕರೋನಾ ವೈರಸ್ ಮತ್ತು ಲಾಕ್‌ಡೌನ್‌ನಿಂದಾಗಿ ಆರ್ಥಿಕತೆಯು ಕುಸಿದ ನಂತರ ಈ ಕ್ರಮ ದೆಹಲಿಯ ರೆಸ್ಟೋರೆಂಟ್ ಉದ್ಯಮಕ್ಕೆ ಹೆಚ್ಚಿನ ಪರಿಹಾರ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.

ಇದನ್ನು ಓದಿ- ರಾಜಧಾನಿಯಲ್ಲಿ ಮೆಟ್ರೋ ಕಾರ್ಯಾಚರಣೆ ಯಾವಾಗ ಪುನರಾರಂಭ? ಸಿಎಂ ಹೇಳಿದ್ದೇನು?

ಅನಾವಶ್ಯಕ ಲೈಸನ್ಸ್ ಪಡೆಯುವ ಪ್ರಕ್ರಿಯೆ ಅಂತ್ಯ
ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೆಜ್ರಿವಾಲ್ (Arvind Kejriwal), 2020 ರ ಅಕ್ಟೋಬರ್ 7 ರಂದು ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಶನ್ ಆಫ್ ಇಂಡಿಯಾ (ಎನ್‌ಆರ್‌ಎಐ) ನಿಯೋಗದೊಂದಿಗೆ ಸಭೆ ನಡೆಸಿದ್ದರು. ಮುಖ್ಯಮಂತ್ರಿಯವರೊಂದಿಗಿನ ಈ  ಸಭೆಯಲ್ಲಿ, ರೆಸ್ಟೋರೆಂಟ್ ಮಾಲೀಕರು ಪರವಾನಗಿಗಳ ದೀರ್ಘ ಪಟ್ಟಿಯ ವಿಷಯವನ್ನು ಪ್ರಸ್ತಾಪಿಸಿದ್ದರು.

ಬಳಿಕ ದೆಹಲಿಯ ರೆಸ್ಟೋರೆಂಟ್ ಉದ್ಯಮದಲ್ಲಿ ಈಸ್ ಆಫ್ ಡೂಯಿಂಗ್ ಬಿಸಿನೆಸ್ ನಲ್ಲಿನ ತೊಂದರೆಗಳನ್ನು ನಿವಾರಿಸಲು ಮುಖ್ಯಮಂತ್ರಿಗಳು, ವಿವಿಧ ಇಲಾಖೆಗಳು ಮತ್ತು ಏಜೆನ್ಸಿಗಳ ಉನ್ನತ ಅಧಿಕಾರಿಗಳಿಗೆ ಈ ಕುರಿತಾದ ನಿರ್ದೇಶನಗಳನ್ನು ನೀಡಿದ್ದರು.

ರೆಸ್ಟೋರೆಂಟ್ ಉದ್ಯಮಕ್ಕೆ ಅನಿವಾರ್ಯವಲ್ಲದ ಪರವಾನಗಿಯನ್ನು ರದ್ದುಪಡಿಸಬೇಕು ಎಂದು ದೆಹಲಿ ಸಿಎಂ ಈ ವೇಳೆ ಆದೇಶ ನೀಡಿದ್ದರು. ಮುಖ್ಯಮಂತ್ರಿಯವರ ಆದೇಶದ ಮೇರೆಗೆ ಪ್ರವಾಸೋದ್ಯಮ ಇಲಾಖೆ ಜಾರಿಗೆ ತಂದ ಸ್ವತಂತ್ರ ರೆಸ್ಟೋರೆಂಟ್‌ಗಳಿಗೆ ಸ್ವಯಂಪ್ರೇರಿತ ಅನುಮತಿ ನೀಡುವ ಪ್ರಕ್ರಿಯೆಯನ್ನು ತಕ್ಷಣದಿಂದ ಜಾರಿಗೆ ತರಲಾಗಿದೆ.

ಇದನ್ನು ಓದಿ- Covid-19: ದೆಹಲಿಯ ಆಸ್ಪತ್ರೆಗಳಲ್ಲಿ 40% ಬೆಡ್‌ಗಳ ಹೆಚ್ಚಳ- ಸಿಎಂ ಅರವಿಂದ ಕೇಜ್ರಿವಾಲ್

ದೀರ್ಘಾವಧಿಯಿಂದ ನೆನೆಗುದಿಗೆ ಬಿದ್ದ ಪ್ರಕರಣ
ಜೂನ್ 2003 ರ ಮೊದಲು, ಕೇಂದ್ರ ಪ್ರವಾಸೋದ್ಯಮ ಸಚಿವಾಲಯವು ದೇಶಾದ್ಯಂತ ರೆಸ್ಟೋರೆಂಟ್‌ಗಳನ್ನು ಅನುಮೋದಿಸುವ ಯೋಜನೆಯನ್ನು ಜಾರಿಗೆ ತಂದಿತ್ತು. ಈ ಯೋಜನೆಯನ್ನು 30 ಜೂನ್ 2003 ರಂದು ದೇಶಾದ್ಯಂತ ನಿಲ್ಲಿಸಲಾಯಿತು ಮತ್ತು ರಾಜ್ಯಗಳು ತಮ್ಮದೇ ಆದ ಮಾರ್ಗಸೂಚಿಗಳನ್ನು ರೂಪಿಸಿ ಯೋಜನೆಯನ್ನು ಅನುಷ್ಠಾನಗೊಳಿಸಬೇಕು ಎಂದು ರಾಜ್ಯ ಸರ್ಕಾರಗಳಿಗೆ ಸೂಚಿಸಲಾಗಿತ್ತು.

ಈ ಯೋಜನೆಯನ್ನು ದೆಹಲಿ ಸರ್ಕಾರದ ಪ್ರವಾಸೋದ್ಯಮ ಇಲಾಖೆಯು ಅದೇ ವರ್ಷದಲ್ಲಿ ಅಂಗೀಕರಿಸಿತ್ತು ಹಾಗೂ 30 ಕ್ಕೂ ಹೆಚ್ಚು ಆಸನಗಳನ್ನು ಹೊಂದಿರುವ ಎಲ್ಲಾ ರೆಸ್ಟೋರೆಂಟ್‌ಗಳಿಗೆ 2004 ರಲ್ಲಿ ಈ ಪ್ರಕ್ರಿಯೆಯನ್ನು ಔಪಚಾರಿಕವಾಗಿ ಪ್ರಾರಂಭಿಸಿತ್ತು.  ಆದರೆ ಬಳಿಕ ರೆಸ್ಟೋರೆಂಟ್ ಅಸೋಸಿಯೇಷನ್ ಬೇಡಿಕೆಯ ಮೇರೆಗೆ ರಾಜ್ಯ ಪ್ರವಾಸೋದ್ಯಮ ಇಲಾಖೆ ಪ್ರತಿ ವರ್ಷ ವಿವಿಧ ಸಮೀಕ್ಷೆಗಳನ್ನು ನಡೆಸಿತ್ತು.

ಆದರೆ, ಕೊರೊನಾದಿಂದ ಉಂಟಾಗಿರುವ ಸನ್ನಿವೇಶಗಳನ್ನು ಪರಿಗಣಿಸಿರುವ ಸಿಎಂ ಅರವಿಂದ್ ಕೆಜ್ರಿವಾಲ್, ಸ್ವತಂತ್ರ ರೆಸ್ಟೋರೆಂಟ್ ಗಳಿಗೆ ಸ್ವಯಂಪ್ರೇರಿತ ಅನುಮತಿ ನೀಡುವ ಯೋಜನೆಯನ್ನು ತೆಗೆದುಹಾಕಲು ಆದೇಶ ನೀಡಿದ್ದಾರೆ.

Trending News