ನವದೆಹಲಿ: ಮಧ್ಯಪ್ರದೇಶದಲ್ಲಿ ರೈತರ ಸಾವಿನ ಬಗ್ಗೆ ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಗೋಪಾಲ್ ಭಾರ್ಗವ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ಮಧ್ಯಪ್ರದೇಶದಲ್ಲಿ ಹೆಚ್ಚುತ್ತಿರುವ ರೈತರ ಸಾವಿನ ಸಂಗತಿ ಕುರಿತಾಗಿ ಪ್ರತಿಕ್ರಯಿಸಿರುವ ಸಚಿವರು "ಶಾಸಕರು ಕೂಡಾ ಸಾಯುತ್ತಾರೆ, ಉದ್ಯಮಿಗಳು ತಮ್ಮ ವ್ಯಾಪಾರ ವೈಫಲ್ಯವಾದಾಗ ಸಾವನ್ನಪ್ಪುತ್ತಾರೆ, ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅನುತ್ತೀರ್ಣರಾದಾಗ ಸಾಯುತ್ತಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಹತ್ತು ಶಾಸಕರು ಮೃತಪಟ್ಟಿದ್ದಾರೆ, ಸಾವನ್ನು ಯಾರಾದ್ರು ತಡೆಯಲಿಕ್ಕೆ ಆಗುತ್ತದೆಯೇ ?ಶಾಸಕರೆನು ಅಮರರೇ ಎಂದು ಪ್ರಶ್ನಿಸಿದ್ದಾರೆ.
ಇತ್ತೀಚೆಗೆ ಮಧ್ಯಪ್ರದೇಶ ರೈತರು ಸಾಲದ ರದ್ದತಿ, ಕೃಷಿ ಉತ್ಪನ್ನಗಳ ಬೆಲೆಗಳು ಮತ್ತು ಇತರ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ಮಾಡಿದ್ದರು.ರಾಜ್ಯದಲ್ಲಿನ ಅಕಾಲಿಕ ಮಳೆಯಿಂದಾಗಿ ಈ ವರ್ಷ ಸಾಕಷ್ಟು ಬೆಳೆಗಳಿಗೆ ಹಾನಿಯಾಗಿದೆ. ಕನಿಷ್ಠ 984 ಗ್ರಾಮಗಳು ಇದರ ಪರಿಣಾಮವನ್ನು ಅನುಭವಿಸಿವೆ.