ಅಯೋಧ್ಯೆಯಲ್ಲಿ ಮಾತ್ರವಲ್ಲ, ದೇಶದ ಈ ನಗರಗಳಲ್ಲಿಯೂ ಶ್ರೀರಾಮನ ಭವ್ಯವಾದ ದೇವಾಲಯಗಳಿವೆ!

Ayodhya Ram Mandir: ಇತ್ತೀಚೆಗೆ ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರವನ್ನು ಉಧ್ಘಾಟಿಸಲಾಯಿತು.. ಈಗ ಎಲ್ಲರೂ ಆ ರಾಮಲಲ್ಲಾ ದರ್ಶನ ಮಾಡಲು ಯೋಚಿಸುತ್ತಿದ್ದಾರೆ.. ಆದರೆ ಆ ರಾಮಮಂದಿರದಂತೆ ಭವ್ಯವಾದ ದೇವಾಲಯಗಳು ಬೇರೆ ನಗರಗಳಲ್ಲಿಯೂ ಇವೆ ಎಂಬುದು ನಿಮಗೆ ಗೊತ್ತಾ?   

Written by - Savita M B | Last Updated : Jan 29, 2024, 01:30 PM IST
  • ಜನವರಿ 22 ರಂದು ರಾಮ ಜನ್ಮಭೂಮಿಯಲ್ಲಿ ರಾಮಲಲ್ಲಾ ಮಂದಿರದ ಉದ್ಘಾಟನೆಯಾಯಿತು
  • ಈಗ ಎಲ್ಲರೂ ಆ ರಾಮಲಲ್ಲಾ ದರ್ಶನ ಮಾಡಲು ಯೋಚಿಸುತ್ತಿದ್ದಾರೆ
  • ಇದೀಗ ದೇಶದಲ್ಲಿರುವ ಇತರ ರಾಮಮಂದಿರಗಳ ಬಗ್ಗೆ ತಿಳಿದುಕೊಂಡು ಅಲ್ಲಿಯೂ ಭೇಟಿ ನೀಡಿ
ಅಯೋಧ್ಯೆಯಲ್ಲಿ ಮಾತ್ರವಲ್ಲ, ದೇಶದ ಈ ನಗರಗಳಲ್ಲಿಯೂ ಶ್ರೀರಾಮನ ಭವ್ಯವಾದ ದೇವಾಲಯಗಳಿವೆ!  title=

Ram Mandir: ವರ್ಷಗಳ ಕಾಯುವಿಕೆಯ ನಂತರ, ಜನವರಿ 22 ರಂದು ರಾಮ ಜನ್ಮಭೂಮಿಯಲ್ಲಿ ರಾಮಲಲ್ಲಾ ಮಂದಿರದ ಉದ್ಘಾಟನೆಯಾಯಿತು... ಪ್ರತಿಯೊಬ್ಬರೂ ಈ ವಿಶೇಷ ಸಂದರ್ಭವನ್ನು ನೋಡಲು ಬಯಸಿದ್ದರು, ಆದರೆ ಆ ದಿನ ಅಯೋಧ್ಯೆಯಲ್ಲಿ ಎಲ್ಲರೂ ಹೋಗಲು ಸಾಧ್ಯವಾಗಲಿಲ್ಲ. ಹಾಗಾದರೆ ಇದೀಗ ದೇಶದಲ್ಲಿರುವ ಇತರ ರಾಮಮಂದಿರಗಳ ಬಗ್ಗೆ ತಿಳಿದುಕೊಂಡು ಅಲ್ಲಿಯೂ ಭೇಟಿ ನೀಡಿ.. 

ಇದನ್ನೂ ಓದಿ-ಅಯೋಧ್ಯೆಯಲ್ಲಿ ಅಪರೂಪದ ಘಟನೆ..! ʼರಾಮʼನನ್ನು ನೋಡಲು ಗರ್ಭಗುಡಿ ಪ್ರವೇಶಿಸಿದ ʼಮಾರುತಿʼ

ರಾಮಪುರಂ ರಾಮ ದೇವಾಲಯ, ತಮಿಳುನಾಡು: ಭಾರತದ ಅತ್ಯಂತ ಪ್ರಮುಖವಾದ ರಾಮಮಂದಿರಗಳಲ್ಲಿ ಒಂದಾದ ರಾಮಪುರಂನಲ್ಲಿರುವ ಈ ದೇವಾಲಯವು ರಾಮ ಭಕ್ತರಿಗೆ ಒಂದು ಪ್ರಮುಖ ತಾಣವಾಗಿದೆ.

ಭದ್ರಾಚಲಂ ರಾಮ ದೇವಾಲಯ ಆಂಧ್ರಪ್ರದೇಶ: ಇಲ್ಲಿರುವ ರಾಮ ಮಂದಿರವು ಪ್ರಮುಖ ಧಾರ್ಮಿಕ ಸ್ಥಳವಾಗಿದೆ, ಇದು ಆಂಧ್ರಪ್ರದೇಶದ ಭದ್ರಾಚಲಂ ಎಂಬ ಸ್ಥಳದಲ್ಲಿದೆ.

ರಾಮೇಶ್ವರಂ ರಾಮ ಮಂದಿರ, ತಮಿಳುನಾಡು: ರಾಮೇಶ್ವರಂ ಕೂಡ ಒಂದು ಪ್ರಮುಖ ಧಾರ್ಮಿಕ ಸ್ಥಳವಾಗಿದೆ ಮತ್ತು ಇಲ್ಲಿ ಪುರಾತನವಾದ ರಾಮ ಮಂದಿರವಿದ್ದು ಭೇಟಿ ನೀಡಲು ಯೋಗ್ಯವಾಗಿದೆ.

ರಾಮಮಂದಿರ, ಭುಜ್: ಗುಜರಾತಿನಲ್ಲಿರುವ ಈ ದೇವಾಲಯವು ರಾಮ ಭಕ್ತರಿಗೆ ಪ್ರಮುಖವಾದ ಒಂದು ಆಕರ್ಷಕ ಸ್ಥಳವಾಗಿದೆ.

ತ್ರಿಪ್ರಯಾರ್ ಶ್ರೀರಾಮ ದೇವಾಲಯ: ಕೇರಳವು ತನ್ನ ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಅಲ್ಲಿ ರಾಮನ ಬೃಹತ್ ದೇವಾಲಯವೂ ಇದೆ. ಇಲ್ಲಿರುವ ಪುರಾತನ ತ್ರಿಪ್ರಯಾರ್ ಶ್ರೀರಾಮ ದೇವಾಲಯವನ್ನು ಇಡೀ ದಕ್ಷಿಣ ಭಾರತದ ಹೆಮ್ಮೆ ಎಂದು ಪರಿಗಣಿಸಲಾಗಿದೆ. ಪ್ರತಿದಿನ ಸಾವಿರಾರು ಭಕ್ತರು ತಮ್ಮ ಇಚ್ಛೆಯೊಂದಿಗೆ ಇಲ್ಲಿಗೆ ಬರುತ್ತಾರೆ..

ಇದನ್ನೂ ಓದಿ-9ನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕಾರ

ರಾಮಸ್ವಾಮಿ ದೇವಸ್ಥಾನ: ದಕ್ಷಿಣ ಭಾರತದಲ್ಲಿ ಇಂತಹ ಅನೇಕ ದೇವಾಲಯಗಳಿವೆ, ಅವುಗಳು ದೇಶ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಬಹಳ ಪ್ರಸಿದ್ಧವಾಗಿವೆ. ಇವುಗಳಲ್ಲಿ ತಮಿಳುನಾಡಿನಲ್ಲಿರುವ ರಾಮಸ್ವಾಮಿ ದೇವಾಲಯವು ಒಂದಾಗಿದೆ.. ಇದು ವಿಶ್ವಪ್ರಸಿದ್ಧ ದೇವಾಲಯ ಮಾತ್ರವಲ್ಲದೆ ಅತ್ಯಂತ ಪವಿತ್ರವಾದ ದೇವಾಲಯವಾಗಿದೆ. ರಾಮನಿಗೆ ಅರ್ಪಿತವಾದ ಈ ದೇವಾಲಯವನ್ನು ರಾಮಾಯಣದಲ್ಲಿಯೂ ಉಲ್ಲೇಖಿಸಲಾಗಿದೆ ಎಂದು ಹೇಳಲಾಗುತ್ತದೆ. ಇಲ್ಲಿನ ಗೋಡೆಗಳ ಮೇಲಿನ ಅನೇಕ ಶಿಲ್ಪಗಳು ರಾಮಾಯಣ ಕಾಲದ ಎಲ್ಲಾ ಪ್ರಮುಖ ಘಟನೆಗಳನ್ನು ತೋರಿಸುತ್ತವೆ. ಇಲ್ಲಿ ರಾಮ, ಸೀತೆ ಮತ್ತು ಲಕ್ಷ್ಮಣರೊಂದಿಗೆ ಶತ್ರುಘ್ನನ ವಿಗ್ರಹವನ್ನು ಸಹ ಸ್ಥಾಪಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News