ಅಣುಬಾಂಬ್ ಇದೆ ಎಂದು ಹೆದರಿಸುತ್ತಿದ್ದ ಪಾಕ್ ಈಗ ಕಾಪಾಡಿ ಎನ್ನುತ್ತಿದೆ - ಪ್ರಧಾನಿ ಮೋದಿ

ಚುನಾವಣಾ ಪ್ರಚಾರಕ್ಕೆ ಇಲ್ಲಿಗೆ ಆಗಮಿಸಿದ ಪ್ರಧಾನಿ ಮೋದಿ ಮೈತ್ರಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.

Updated: Apr 18, 2019 , 05:40 PM IST
ಅಣುಬಾಂಬ್ ಇದೆ ಎಂದು ಹೆದರಿಸುತ್ತಿದ್ದ ಪಾಕ್ ಈಗ ಕಾಪಾಡಿ ಎನ್ನುತ್ತಿದೆ - ಪ್ರಧಾನಿ ಮೋದಿ
file photo

ಬಾಗಲಕೋಟೆ: ಚುನಾವಣಾ ಪ್ರಚಾರಕ್ಕೆ ಇಲ್ಲಿಗೆ ಆಗಮಿಸಿದ ಪ್ರಧಾನಿ ಮೋದಿ ಮೈತ್ರಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.

ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ್ ಪರವಾಗಿ ಪ್ರಚಾರ ಭಾಷಣ ಮಾಡಿದ ಮಾಡಿದ ಮೋದಿ ಕರ್ನಾಟಕ ಸರ್ಕಾರದ ರಿಮೋಟ್ ಕಂಟ್ರೋಲ್ ಇಲ್ಲಿಲ್ಲ ಬೇರೆ ಕಡೆ ಇದೆ ಎಂದು ವ್ಯಂಗ್ಯವಾಡಿದರು.ತಮ್ಮ ಭಾಷಣದುದ್ದಕ್ಕೂ ಕಾಂಗ್ರೆಸ್- ಜೆಡಿಎಸ್ ಸರ್ಕಾರದ ವಿರುದ್ದ ಕಿಡಿಕಾರಿದ ಮೋದಿ, ಐದು ವರ್ಷಗಳ ಹಿಂದೆ ಕೇಂದ್ರದಲ್ಲಿ ಈಗ ಕರ್ನಾಟಕದಲ್ಲಿರುವ ಸ್ಥಿತಿ ಇತ್ತು.ಈಗ ಅದೆಲ್ಲವೂ ಬದಲಾಗಿದೆ ಎಂದರು.ಇದೇ ವೇಳೆ ಈ ಚುನಾವಣೆಯಲ್ಲಿ ಬಿಜೆಪಿ ಪರ ಮತ ಹಾಕುವಂತೆ ವಿನಂತಿಸಿಕೊಂಡರು. 

ಪಾಕಿಸ್ತಾನದ ಬಾಲಾಕೋಟ ಮೇಲೆ ನಡೆದ ದಾಳಿಯನ್ನು ಪ್ರಸ್ತಾಪಿಸಿದ ಮೋದಿ," ಈ ದಾಳಿಯನ್ನು ಕಾಂಗ್ರೆಸ್ ನವರು ಒಪ್ಪಿಕೊಳ್ಳುತ್ತಿಲ್ಲ ಅವರಿಗೆ ಬರಿ ಮತ ಬ್ಯಾಂಕ್ ವೊಂದೇ ಬೇಕಾಗಿದೆ.ಆದ್ದರಿಂದ ಕಾಂಗ್ರೆಸ್-ಜೆಡಿಎಸ್ ನವರಿಗೆ ಮತ ಬ್ಯಾಂಕ್ ಇರುವುದು ಬಾಗಲಕೋಟೆಯಲ್ಲೋ ಅಥವಾ ಪಾಕಿಸ್ತಾನದ ಬಾಲಾಕೊಟ್ ನಲ್ಲೋ? ಎಂದು ಮೋದಿ ಪ್ರಶ್ನಿಸಿದರು.ಈ ಹಿಂದೆ ಕಾಂಗ್ರೆಸ್ ಅಧಿಕಾರವಿದ್ದ ಸಂದರ್ಭದಲ್ಲಿ ಪಾಕಿಸ್ತಾನವು ತನ್ನ ಬಳಿ ಅಣುಬಾಂಬ್ ಇದೆ ಎಂದು ಬೆದರಿಕೆ ಹಾಕಿತ್ತಿತ್ತು. ಆದರೆ ಈಗ ಮೋದಿ ನಮ್ಮನ್ನು ಥಳಿಸುತ್ತಿದ್ದಾರೆ ರಕ್ಷಿಸಿ ಎಂದು ಹೇಳುತ್ತಿದ್ದಾರೆ ಎಂದು ಮೋದಿ ಹೇಳಿದರು.

ಯುಪಿಎ ಸರ್ಕಾರದ ಹಗರಣಗಳನ್ನು ಪ್ರಸ್ತಾಪಿಸಿ ಮಾತನಾಡಿದ ಪ್ರಧಾನಿ ಮೋದಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಹೆಲಿಕಾಪ್ಟರ್ ನ್ನು ನುಂಗಿದರು.2 ಜಿ ತರಂಗ ಹಗರಣ,ಕಾಮನ್ ವೆಲ್ತ್  ಹೀಗೆ ಎಲ್ಲ ರೀತಿಯ ಹಗರಣದಿಂದ ಭಾರತಕ್ಕೆ ವಿಶ್ವದಾದ್ಯಂತ ಕೆಟ್ಟ ಹೆಸರು ಬಂದಿತ್ತು. ಆದರೆ ಈಗ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಎಲ್ಲ ಪರಿಸ್ಥಿತಿ ಬದಲಾಗಿದೆ ಎಂದು ಮೋದಿ ತಿಳಿಸಿದರು.