ಇನ್ನು ಮುಂದೆ ಭೀಮ್ ಆಪ್ ಮೂಲಕವು ರೈಲ್ವೆ ಟಿಕೆಟ್ ಬುಕಿಂಗ್ ಲಭ್ಯ

    

Last Updated : Dec 7, 2017, 05:28 PM IST
ಇನ್ನು ಮುಂದೆ ಭೀಮ್ ಆಪ್ ಮೂಲಕವು ರೈಲ್ವೆ ಟಿಕೆಟ್ ಬುಕಿಂಗ್ ಲಭ್ಯ  title=

ನವದೆಹಲಿ: ಸರ್ಕಾರವು ಈಗ ಡಿಜಿಟಿಲಿಕರಣ ಹಾಗೂ ಖಾಗದ ರಹಿತ ನಗಧಿಗೆ ಒತ್ತು ನೀಡುತ್ತಿರುವುದರಿಂದ ಅದರ ಭಾಗವಾಗಿ ಭಾರತೀಯ ರೈಲ್ವೆಯು ಕೂಡಾ ಆ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಿದೆ. ಸರ್ಕಾರ ಇತ್ತೀಚಿಗೆ ಬಿಡುಗಡೆ ಮಾಡಿದ್ದ ಭೀಮ್ ಆಪ್ ಅನ್ನು ಸರ್ಕಾರವು ಎಲ್ಲ ಹಣಕಾಸು ವರ್ಗಾವಣೆಗೆ ಉಪಯೋಗಿಸಲು ಪ್ರಾರಂಭಿಸಿದೆ. 

ಅದರ ಪ್ರತಿಫಲವಾಗಿ  ರೈಲ್ವೆ ಇದೆ ಡಿಸೆಂಬರ್ 1 ರಿಂದ ಪ್ರಯಾಣಿಕರು ಈ ಆಪ್ ಮೂಲಕ ರೈಲಿನ ಟಿಕೆಟ್ ಅನ್ನು ತಮ್ಮ ಮೊಬೈಲ್ ನಲ್ಲಿ ಈ ಆಪ್ ಅನ್ನು ಅಳವಡಿಸಿಕೊಳ್ಳುವುದರ ಮೂಲಕ ಕಾಯ್ದಿರಿಸಬಹುದು. ಮೂರು ತಿಂಗಳುಗಳ ಕಾಲ  ಈ ಸೌಲಭ್ಯಕ್ಕೆ ಯಾವುದೇ ಮೊತ್ತವನ್ನು ಪಾವತಿಸಬೇಕಾಗಿಲ್ಲ  ಮತ್ತು ಯಾವುದೇ ಬ್ಯಾಂಕ್ ಅಥವಾ ಕ್ರೆಡಿಟ್ ಖಾತೆಯ ನಂಬರ್ಗಳನ್ನು  ಸಹಿತ ಹಂಚಿಕೊಲ್ಲಬೇಕಾಗಿಲ್ಲ ಎಂದು ಹೇಳಲಾಗಿದೆ.

 ಭೀಮ್ ಆಪ್ ಮೂಲಕ ರೈಲ್ವೆ ಟಿಕೆಟ್ ಬುಕಿಂಗ್ ಮಾಡುವ ವಿಧಾನ 

  •   ಗ್ರಾಹಕರು ಕೌಂಟರ್ ನಲ್ಲಿ  ತಮ್ಮ ಪ್ರಯಾಣದ ಸಂಪೂರ್ಣ ಮಾಹಿತಿಯನ್ನು ನೀಡಬೇಕು ಆಗ ಅವರು       ಪಾವತಿಸಬೇಕಾದ     ಪ್ರಯಾಣದ ಮೊತ್ತವನ್ನು ತಿಳಿಸುತ್ತಾರೆ.
  •   ಒಂದು ವೇಳೆ ಪ್ರಯಾಣಿಕರು ಭೀಮ್ ಆಪ್ ನ್ನು ಪಾವತಿಸುವ ಆಯ್ಕೆಯನ್ನಾಗಿ ಮಾಡಿಕೊಂಡರೆ ಆಗ         ಅವರು ವಿಪಿಎ  ಅಡ್ರೆಸ್ ನ್ನು  ನೀಡಬೇಕಾಗುತ್ತದೆ. 
  •  ಆಗ ಕೌಂಟರ್ ನಲ್ಲಿ  ವಿಪಿಎ ಅಡ್ರೆಸ್ ಮೂಲಕ ಹಣಕಾಸಿನ ವ್ಯವಹಾರಕ್ಕೆ ಚಾಲನೆ ನೀಡಲಾಗುತ್ತದೆ.
  • ಆಗ ಪ್ರಯಾಣಿಕರ ಮೊಬೈಲ್ ಗೆ ಹಣಕಾಸಿನ ವ್ಯವಹಾರಕ್ಕೆ ಒಪ್ಪಿಗೆ ನೀಡಲು ಸಂದೇಶ ನೀಡಲಾಗುತ್ತದೆ.ಆಗ ಅವರು ಅದಕ್ಕೆ ಒಪ್ಪಿಗೆ ಸೂಚಿಸಿದರೆ ಅದಕ್ಕೆ ಲಿಂಕ್ ಮಾಡಿದ ಅಕೌಂಟ್ ನಿಂದ  ಪ್ರಯಾಣದ ಹಣವನ್ನು ಖಡಿತ ಗೊಳಿಸಲಾಗುತ್ತದೆ. 
  • ಈ ಪ್ರಯಾಣದ ಮೊತ್ತ  ಖಡಿತಗೊಂಡ ನಂತರ  ಟಿಕೆಟ್ ಅವನಿಗೆ ಲಭ್ಯವಾಗುತ್ತದೆ   

Trending News