ದೀಪಾವಳಿಯಂದು ದೇಶದ ಜನತೆಯೊಂದಿಗೆ ಪ್ರಧಾನಿ ಮೋದಿ 'ಮನ್ ಕಿ ಬಾತ್'

ಇದಕ್ಕೂ ಮೊದಲು ಸೆಪ್ಟೆಂಬರ್ 29 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಪ್ರಸಿದ್ಧ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್'ನಲ್ಲಿ ಮಾತನಾಡಿದ್ದರು.

Updated: Oct 15, 2019 , 12:54 PM IST
ದೀಪಾವಳಿಯಂದು ದೇಶದ ಜನತೆಯೊಂದಿಗೆ ಪ್ರಧಾನಿ ಮೋದಿ 'ಮನ್ ಕಿ ಬಾತ್'

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 27 ರಂದು ದೀಪಾವಳಿ ದಿನದಂದು ತಮ್ಮ ಜನಪ್ರಿಯ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್'ನಲ್ಲಿ ದೇಶದ ಜನತೆಯೊಂದಿಗೆ ಮಾತನಾಡಲಿದ್ದಾರೆ. ಈ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿರುವ ಪ್ರಧಾನಿ ಮೋದಿ, ದೇಶವಾಸಿಗಳ ಸಲಹೆಗಳನ್ನು ಕೋರಿದ್ದಾರೆ.

'ಈ ತಿಂಗಳು ಅಕ್ಟೋಬರ್ 27 ರಂದು ದೀಪಾವಳಿಯ ದಿನ' 'ಮನ್ ಕಿ ಬಾತ್' ಕಾರ್ಯಕ್ರಮ ನಡೆಯಲಿದೆ. ಈ ಬಗ್ಗೆ ಜನರು 1800-11-7800 ಸಂಖ್ಯೆಗೆ ಕರೆ ಮಾಡಿ ಅಥವಾ ನಮೋ ಆಪ್ ಅಥವಾ ಮೈಗೋವ್ ಓಪನ್ ಫೋರಂನಲ್ಲಿ ಬರೆಯುವ ಮೂಲಕ ತಮ್ಮ ಸಲಹೆಗಳನ್ನು ನೀಡಬಹುದು ಎಂದು ಪಿಎಂ ಟ್ವೀಟ್ ಮಾಡಿದ್ದಾರೆ.

ಇದಕ್ಕೂ ಮೊದಲು ಪಿಎಂ ಮೋದಿ ಅವರು ಸೆಪ್ಟೆಂಬರ್ 29 ರಂದು 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಮಾತನಾಡಿದ್ದರು. ಪ್ರಧಾನಿ ಮೋದಿ ಈ ಕಾರ್ಯಕ್ರಮದಲ್ಲಿ ವಿಶಿಷ್ಟ ಚಟುವಟಿಕೆ 'ಪ್ಲಾಗಿಂಗ್' ಅನ್ನು ಪ್ರಸ್ತಾಪಿಸಿದ್ದರು. ಜಾಗಿಂಗ್ ಮಾಡುವಾಗ ಕಸವನ್ನು ಸಂಗ್ರಹಿಸುವುದನ್ನು 'ಪ್ಲಾಗಿಂಗ್' ಎಂದು ಕರೆಯಲಾಗುತ್ತದೆ.

ಪ್ರಧಾನಮಂತ್ರಿಯವರು ಈ ವಿಚಾರದಿಂದ ಪ್ರಭಾವಿತರಾದರು ಮತ್ತು ಅಕ್ಟೋಬರ್ 2 ರಂದು ಎಲ್ಲಾ ದೇಶವಾಸಿಗಳು ಎರಡು ಕಿಲೋಮೀಟರ್ ನಡೆದು ಕಸ ಸಂಗ್ರಹಿಸಿ 'ಪ್ಲಾಗಿಂಗ್' ಪ್ರಕ್ರಿಯೆಯಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು.

ಏಕ ಬಳಕೆಯ ಪ್ಲಾಸ್ಟಿಕ್ ವಿರುದ್ಧದ ತಮ್ಮ ಬಲವಾದ ನಿಲುವನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಗಾಂಧಿ ಜಯಂತಿ ಪ್ರಯುಕ್ತ ಈ ಆಂದೋಲನದ ಭಾಗವಾಗಲು ಭಾರತೀಯರನ್ನು ಆಹ್ವಾನಿಸಿದರು.