ಮಹಿಳಾ ಕ್ರಿಕೆಟ್ ODI ನಂತರ ದಕ್ಷಿಣ ಆಫ್ರಿಕಾವನ್ನು ಟೆಸ್ಟ್‌ನಲ್ಲಿ ಮಣಿಸಿದ ಟೀಂ ಇಂಡಿಯಾ..!

Team India : ಭಾರತೀಯ ಮಹಿಳಾ ಕ್ರಿಕೆಟ್ ತಂಡ ಇಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ವಿರುದ್ಧ ನಡೆದ ದಕ್ಷಿಣ ಆಫ್ರಿಕಾ ಹಾಗೂ ಭಾರತ ತಂಡದ  ಟೆಸ್ಟ್‌ ನಲ್ಲಿ ಟೀಂ ಇಂಡಿಯಾ 10 ವಿಕೆಟ್‌ಗಳ ಜಯ ಸಾಧಿಸಿದೆ.

Written by - Zee Kannada News Desk | Last Updated : Jul 1, 2024, 10:28 PM IST
  • ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ ಪಡೆದ ಭಾರತದ ಮೊದಲ ಸ್ಪಿನ್ನರ್ ಎನಿಸಿಕೊಂಡರು
  • ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ವಿರುದ್ಧ ನಡೆದ ದಕ್ಷಿಣ ಆಫ್ರಿಕಾ ಹಾಗೂ ಭಾರತ ತಂಡದ ಟೆಸ್ಟ್‌ ನಲ್ಲಿ ಟೀಂ ಇಂಡಿಯಾ 10 ವಿಕೆಟ್‌ಗಳ ಜಯ ಸಾಧಿಸಿದೆ.
  • ಭಾರತ ತಂಡ ಗೆಲುವಿನ ಗುರಿಯನ್ನು ಯಾವುದೇ ವಿಕೆಟ್ ನಷ್ಟವಿಲ್ಲದೆ ಸಾಧಿಸಿತು
ಮಹಿಳಾ ಕ್ರಿಕೆಟ್ ODI ನಂತರ ದಕ್ಷಿಣ ಆಫ್ರಿಕಾವನ್ನು ಟೆಸ್ಟ್‌ನಲ್ಲಿ ಮಣಿಸಿದ ಟೀಂ ಇಂಡಿಯಾ..! title=

ಇಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ  ದಕ್ಷಿಣ ಆಫ್ರಿಕಾ ಹಾಗೂ ಭಾರತ ತಂಡದ ವಿರುದ್ಧ  ಟೆಸ್ಟ್‌ ನಲ್ಲಿ 10 ವಿಕೆಟ್‌ಗಳಿಂದ  ದಕ್ಷಿಣ ಆಫ್ರಿಕಾವನ್ನು ಟೀಂ ಇಂಡಿಯಾ ಸೋಲಿಸಿದೆ. 

 ಏಕೈಕ ಟೆಸ್ಟ್‌ನಲ್ಲಿ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಟಾಸ್ ಗೆದ್ದು, ಬ್ಯಾಟಿಂಗ್ ಮಾಡಲು ನಿರ್ಧರಿಸಿದರು.  ಟೀಂ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ 9 ವಿಕೆಟ್‌ಗೆ 603 ರನ್ ಗಳಿಸಿತ್ತು. ಎರಡನೇ ಇನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡ 266 ರನ್‌ಗಳಿಗೆ ಸೋಲನ್ನು ಅನುಭವಿಸಿತು, ಇದಾದ ಬಳಿಕ  ದಕ್ಷಿಣ ಆಫ್ರಿಕಾ  ತಂಡ  373 ರನ್‌ಗಳಿಗೆ ಆಲೌಟ್ ಆಗಿ , ಇದನ್ನು ಭಾರತ ತಂಡ ಗೆಲುವಿನ ಗುರಿಯನ್ನು ಯಾವುದೇ ವಿಕೆಟ್ ನಷ್ಟವಿಲ್ಲದೆ ಸಾಧಿಸಿತು

ಇದನ್ನು ಓದಿ : ಮೊದಲ ಬಾರಿಗೆ ಮಗನ ಜತೆ  ’Kalki 2898 AD’ ಸಿನಿಮಾ ವೀಕ್ಷಿಸಿದ ಬಿಗ್ ಬಿ...!

ಈ ಪಂದ್ಯದಲ್ಲಿ ಹಲವು ದಾಖಲೆಗಳನ್ನು ಮುರಿದು ಹಲವು ಮೈಲಿಗಲ್ಲುನ್ನು ಭಾರತ ತಂಡ ಸೃಷ್ಟಿಸಿದೆ ಮತ್ತು ಶೆಫಾಲಿ ಹಾಗೂ ಸ್ಮೃತಿ ಮಂಧಾನ ಮೊದಲ ಇನ್ನಿಂಗ್ಸ್‌ನಲ್ಲಿ ದಾಖಲೆ ನಿರ್ಮಿಸಿ 292 ರನ್‌ಗಳ ಜೊತೆಯಾಟವನ್ನು ಆಡಿದರು. ಇದು ವಿಶ್ವದ ಅತಿದೊಡ್ಡ ಆರಂಭಿಕ ಜೊತೆಯಾಟವಾಗಿದೆ ಮತ್ತು ಮಿಥಾಲಿ ರಾಜ್ ನಂತರ ಟೆಸ್ಟ್‌ನಲ್ಲಿ ದ್ವಿಶತಕ ಬಾರಿಸಿದ ಎರಡನೇ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಶೆಫಾಲಿ ಪಾತ್ರರಾದರು,  ಮೊದಲ ಇನ್ನಿಂಗ್ಸ್‌ನಲ್ಲಿ ಅತಿವೇಗದ ದ್ವಿಶತಕ ಗಳಿಸಿ ದಾಖಲೆ ನಿರ್ಮಿಸಿದರು. 

ಇದನ್ನು ಓದಿ : The Buckingham Murders : ಥ್ರಿಲ್ಲರ್ ಸಿನಿಮಾದಲ್ಲಿ ಕರೀನಾ: ದಿ ಬಕಿಂಗ್‌ಹ್ಯಾಮ್ ಮರ್ಡರ್ಸ್ ಬಿಡುಗಡೆ ಘೋಷಣೆ

113 ಎಸೆತಗಳಲ್ಲಿ ಶತಕ ಬಾರಿಸಿದ ಶೆಫಾಲಿ ಈಗ ಅತಿವೇಗದ ಶತಕ ಗಳಿಸಿದ ಆಟಗಾರ್ತಿಯಾಗಿ  1984 ರ ಜಾನೆಟ್ ಬ್ರಿಟಿನ್ ಅವರ ದಾಖಲೆಯನ್ನು ಮುರಿದರು. ಈ ಪಂದ್ಯದಲ್ಲಿ ಮಂಧಾನಾ ನಾಲ್ಕನೇ ಅಂತರಾಷ್ಟ್ರೀಯ ಶತಕವನ್ನು ಗಳಿಸಿದರು ಮತ್ತು ಭಾರತದ ಪರವಾಗಿ ಸ್ನೇಹ್ ರಾಣಾ ಮೊದಲ ಇನ್ನಿಂಗ್ಸ್‌ನಲ್ಲಿ ಎಂಟು ವಿಕೆಟ್‌ಗಳನ್ನು ಪಡೆದು, ಎಂಟು ವಿಕೆಟ್‌ಗಳನ್ನು ಪಡೆದ ಮೂರನೇ ಮಹಿಳಾ ಆಟಗಾರ್ತಿಯಾದರು ಮತ್ತು ಈ ಮೂಲಕ  ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ ಪಡೆದ ಭಾರತದ ಮೊದಲ ಸ್ಪಿನ್ನರ್ ಎನಿಸಿಕೊಂಡರು

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News