ಬಂಡಿಪೋರಾ (ಜಮ್ಮು ಮತ್ತು ಕಾಶ್ಮೀರ): ಬಂಡಿಪೋರಾದಲ್ಲಿ (Bandipora) ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮತ್ತು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮೇಲೆ ಭಯೋತ್ಪಾದಕರು ಶುಕ್ರವಾರ ಗ್ರೆನೇಡ್ ದಾಳಿ ಮಾಡಿದ್ದಾರೆ.
ಇದನ್ನೂ ಓದಿ: Building Collapse: ರಾಷ್ಟ್ರ ರಾಜಧಾನಿಯ ಬವಾನಾ ಪ್ರದೇಶದಲ್ಲಿ ಕಟ್ಟಡ ಕುಸಿತ, ನಾಲ್ವರ ದುರ್ಮರಣ
ಈ ವೇಳೆ ನಾಲ್ವರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದು, ಓರ್ವ ಪೊಲೀಸ್ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಗಾಯಗೊಂಡಿರುವ ಎಲ್ಲ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಬಂಡಿಪೋರಾದ ನಿಶಾತ್ ಪಾರ್ಕ್ ಬಳಿ ಭಯೋತ್ಪಾದಕರು ನಾಕಾ ಪಾರ್ಟಿಯ ಮೇಲೆ ಗ್ರೆನೇಡ್ ದಾಳಿ (grenade attack) ನಡೆದಿದೆ ಎಂದು ಪೊಲೀಸರು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
#Just_in:
Millitants attacked on a Naka Party near Nishat Park area of District #Bandipora, in which more than 5 cops recieved injuries.
Moreover, the area has been cordoned off and joint operation has been launched to nab the attackers.— Muqeet Mubashir (@muqeetmubashir) February 11, 2022
ಪೊಲೀಸರು ಮತ್ತು ಕೇಂದ್ರೀಯ ಮೀಸಲು ಅರೆಸೇನಾ ಪಡೆಗಳ (CRPF) ಜಂಟಿ ತಂಡದ ಮೇಲೆ ದಾಳಿ ನಡೆಸಲಾಯಿತು. ಗಾಯಗೊಂಡವರಲ್ಲಿ ಸಿಆರ್‌ಪಿಎಫ್‌ನ ಇಬ್ಬರು ಯೋಧರೂ ಸೇರಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Karnataka hijab row: ಹಿಜಾಬ್ ವಿವಾದದ ಕುರಿತು ಕವಿತೆ ಬರೆದ ತೆಲಂಗಾಣ ಸಿಎಂ ಪುತ್ರಿ ಕವಿತಾ
ಪೊಲೀಸ್ ಸಿಬ್ಬಂದಿ ಜುಬೈರ್ ಅಹ್ಮದ್ ಅವರು ಹುತಾತ್ಮರಾಗಿದ್ದಾರೆ. ಇತರ ಗಾಯಗೊಂಡ ಸಿಬ್ಬಂದಿಗಳ ಸ್ಥಿತಿ ಸ್ಥಿರವಾಗಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಈ ಪ್ರದೇಶದಲ್ಲಿ ಉಗ್ರರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.