ವಯನಾಡ್: ಬುಧವಾರ ರಾತ್ರಿ ಉತ್ತರ ಕೇರಳದ ವಯನಾಡ್ ಜಿಲ್ಲೆಯ ವೈಥಿರಿಯಲ್ಲಿ ಪೊಲೀಸರು ಮತ್ತು ಮಾವೋವಾದಿಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಮಾವೋವಾದಿ ಮೃತಪಟ್ಟಿದ್ದಾರೆ.
ಸ್ಥಳೀಯ ಮೂಲಗಳ ಪ್ರಕಾರ, ನಾಲ್ಕು ಸದಸ್ಯ ಮಾವೋವಾದಿಗಳು ವಯನಾಡ್ ಜಿಲ್ಲೆಯ ಕೋಳಿಕೋಡದಿಂದ ಕೋಳಿಕೋಡು - ಕೊಳ್ಳೆಗಾಲ (ಕರ್ನಾಟಕ) NH 766 ಸಮೀಪದ ಉಪವಾನ್ ರೆಸಾರ್ಟ್ಗೆ ಸುಮಾರು 9 ಗಂಟೆಗೆ ಪ್ರವೇಶಿಸಿದ್ದಾರೆ. ಬಳಿಕ ಪೊಲೀಸರು ಮತ್ತು ಮಾವೋವಾದಿಗಳ ನಡುವೆ ಈ ಗುಂಡಿನ ಕಾಳಗ ನಡೆದಿದೆ. ಸತತ ಎರಡು ಗಂಟೆಗಳ ಕಾಲ ನಡೆದ ಈ ಗುಂಡಿನ ಕಾಳಗದಲ್ಲಿ ಓರ್ವ ಮಾವೋವಾದಿ ಮೃತಪಟ್ಟಿದ್ದು, ಇಬ್ಬರು ಪೊಲೀಸರಿಗೆ ಗಂಭೀರ ಗಾಯಗಳಾಗಿವೆ ಎನ್ನಲಾಗಿದೆ.
ಗುಪ್ತಚರ ಮಾಹಿತಿ ಪ್ರಕಾರ ಮಾವೋವಾದಿ ನಾಯಕ ವೆಲ್ಮುರುಗನ್ ಎನ್ಕೌಂಟರ್ನಲ್ಲಿ ಸಾವನ್ನಪ್ಪಿದ್ದಾನೆ. ಅದಾಗ್ಯೂ, ಪೊಲೀಸರು ಇನ್ನೂ ಸುದ್ದಿ ದೃಢಪಡಿಸಿಲ್ಲ.