ಮುಂಬೈ: ಕಾಂಗ್ರೇಸ್ ಪಕ್ಷಕ್ಕೆ ಮಾತ್ರ ಬಿಜೆಪಿಗೆ ಸವಾಲೊಡ್ಡುವ ಶಕ್ತಿ ಇದೆ ಎಂದು ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅಭಿಪ್ರಾಯಪಟ್ಟಿದ್ದಾರೆ.
ಪುಣೆಯ ಬ್ರಿಹಾನ್ ಮಹಾರಾಷ್ಟ್ರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆಯವರು ನಡೆಸಿ ಕೊಟ್ಟ ಸಂದರ್ಶನದಲ್ಲಿ ಉತ್ತರಿಸಿದ ಪವಾರ್ " ಕಾಂಗ್ರೆಸ್ ಪಕ್ಷವು ಮಾತ್ರ ಬಿಜೆಪಿಯನ್ನು ತಡೆಗಟ್ಟಬಲ್ಲದು ಎಂದರು. ಸದ್ಯ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಸಹಿತ ಬದಲಾಗುತ್ತಿದ್ದಾರೆ ಜೊತೆಗೆ ಅವರು ಕಲಿಯುವ ಉತ್ಸಾಹವನ್ನು ಹೊಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
We all are proud of our beloved National Leader. Hats off to Saheb and hats off to Raj Thackeray as well.@PawarSpeaks pic.twitter.com/36YugyD3JI
— Sunil Tatkare (@SunilTatkare) 22 February 2018
ಶರದ್ ಪವಾರ್ ತಮ್ಮ 50 ವರ್ಷದ ಚುನಾವಣಾ ರಾಜಕೀಯ ಪಯಣಕ್ಕೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಹಲವಾರು ಸಂಗತಿಗಳನ್ನು ಮೆಲುಕು ಹಾಕಿದರು.ಇದೆ ಸಂದರ್ಭದಲ್ಲಿ ರಾಜ್ ಠಾಕ್ರೆ ಯವರೆಗೆ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಬಾಳ್ ಠಾಕ್ರೆ ಕುರಿತಾಗಿ ಮೆಚ್ಚುಗೆ ವ್ಯಕ್ತಪಡಿಸಿದ ಪವಾರ್, ಠಾಕ್ರೆ ಅವರಿಗೆ ಎಂದಿಗೂ ಕೂಡಾ ಜಾತಿ, ಸಮುದಾಯಗಳ ಬಗ್ಗೆ ಯಾವುದೇ ನಂಬಿಕೆ ಇದ್ದಿರಲಿಲ್ಲ, ಆದರೆ ಅವರೊಬ್ಬ ಪ್ರಖರ ರಾಷ್ಟ್ರೀಯವಾದಿ ಎಂದು ತಿಳಿಸಿದರು.