ಕರ್ನಾಟಕದ ಚುನಾವಣೆ ಮುಗಿದ ಬೆನ್ನಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳ

ದೆಹಲಿಯಲ್ಲಿ ಪೆಟ್ರೋಲ್ ಬೆಲೆ 74.63 ರೂ.ನಿಂದ 74.80 ರೂ.ಗೆ ಏರಿಕೆಯಾಗಿದೆ. ಡೀಸೆಲ್ ದರ 65.93 ರೂ.ನಿಂದ 66.14 ರೂ.ಗೆ ಏರಿಕೆಯಾಗಿದೆ. 

Last Updated : May 14, 2018, 11:57 AM IST
ಕರ್ನಾಟಕದ ಚುನಾವಣೆ ಮುಗಿದ ಬೆನ್ನಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳ title=

ನವದೆಹಲಿ: 19 ದಿನಗಳ ನಂತರ ಕರ್ನಾಟಕದ ಚುನಾವಣೆ ಮುಗಿದ ಬೆನ್ನಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗಿದೆ. ಸಾರ್ವಜನಿಕ ಇಂಧನ ಸಂಸ್ಥೆಗಳು ಗ್ರಾಹಕರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ತೈಲ ದರವನ್ನು ಹೆಚ್ಚಿಸಿವೆ.

 ತೈಲ ಮಾರ್ಕೆಟಿಂಗ್ ಕಂಪೆನಿಗಳು ನೀಡಿರುವ ದರ ಪ್ರಕಟಣೆ ಪ್ರಕಾರ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 74.63 ರೂ.ಗೆ 74.80 ರೂ.ಗೆ ಏರಿಕೆಯಾಗಿದೆ. ಡೀಸೆಲ್ ದರ 65.93 ರೂ.ನಿಂದ 66.14 ರೂ.ಗೆ ಏರಿಕೆಯಾಗಿದೆ. ಇದರೊಂದಿಗೆ, ಡೀಸೆಲ್ ಬೆಲೆಗಳು ದಾಖಲೆಯ ಗರಿಷ್ಠ ಮಟ್ಟದಲ್ಲಿದೆ ಮತ್ತು ಪೆಟ್ರೋಲ್ 56 ತಿಂಗಳಲ್ಲೇ ಗರಿಷ್ಠ ಮಟ್ಟ ತಲುಪಿದೆ.

ಆಯಿಲ್ ಪಿಎಸ್ಯುಗಳು ಸುಮಾರು ಮೂರು ವಾರಗಳವರೆಗೆ ಬದಲಾಗದೆ ಇದ್ದರೂ, ಇನ್ಪುಟ್ ವೆಚ್ಚ ಹೆಚ್ಚಳದ ಹೊರತಾಗಿಯೂ ಕರ್ನಾಟಕ ಚುನಾವಣೆ ನಂತರ, ದಿನನಿತ್ಯದ ಪರಿಷ್ಕರಣೆಗೆ ಮರಳಿತು. ಕರ್ನಾಟಕದಲ್ಲಿ ಶನಿವಾರ(ಮೇ 12)ರಂದು ವಿಧಾನಸಭಾ ಚುನಾವಣೆಗೆ ಮತದಾನ ನಡೆಯಿತು.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಜಾಗತಿಕ ಕಚ್ಚಾ ತೈಲದ ಬೆಲೆಗಳೊಂದಿಗೆ ಸಮನ್ವಯದಲ್ಲಿ ಪ್ರತಿದಿನವೂ ಪರಿಷ್ಕರಿಸಲಾಗುತ್ತದೆ. ಆದರೆ, ತೈಲ ಮಾರ್ಕೆಟಿಂಗ್ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ದಿನನಿತ್ಯದ ಪರಿಷ್ಕರಣೆಗಳನ್ನು ಏಪ್ರಿಲ್ 24 ರಿಂದ ಸ್ಥಿರವಾಗಿರಿಸಿದ್ದವು. 

ಕಳೆದ ವಾರ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಅಧ್ಯಕ್ಷ ಸಂಜೀವ್ ಸಿಂಗ್ ಮಾತನಾಡುತ್ತಾ, ಸರಕಾರಿ ಸ್ವಾಮ್ಯದ ಕಂಪನಿಗಳು ಗ್ರಾಹಕರಲ್ಲಿ ತೀವ್ರವಾದ ಸ್ಪೈಕ್ ಮತ್ತು ಗಾಬರಿಯನ್ನು ತಪ್ಪಿಸಲು ಬೆಲೆಗಳನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಿವೆ ಎಂದು ಹೇಳಿದರು.

ಏಪ್ರಿಲ್ 24 ರಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಅಂತಿಮವಾಗಿ 13 ಪೈಸೆ ಏರಿಕೆಯಾಗಿತ್ತು. ಆದರೆ ನಂತರದ ಬೆಲೆಗಳು ಸ್ಥಗಿತಗೊಂಡಿತು. ಪೆಟ್ರೋಲ್ ಪ್ರತಿ ಬ್ಯಾರೆಲ್ಗೆ 78.84 ಡಾಲರ್ನಿಂದ ಏರಿಕೆಯಾಗುತ್ತಿದ್ದು, ಏಪ್ರಿಲ್ 24 ರಂದು ಲೀಟರ್ಗೆ 74.63 ರೂ.ಗೆ ಇತ್ತು.

ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಪೆಟ್ರೋಲ್​-ಡೀಸೆಲ್​ ದರ ಇಂತಿದೆ

 

ನಗರಗಳು  ಪೆಟ್ರೋಲ್(ರೂ / ಲೀಟರ್) ಡೀಸೆಲ್ (ರೂ / ಲೀಟರ್)
ನವದೆಹಲಿ 74.80 66.14
ಕೋಲ್ಕತ್ತಾ 77.50 68.68
ಮುಂಬೈ 82.65 70.43
ಚೆನ್ನೈ 77.61 69.79
ಬೆಂಗಳೂರು 76.01 67.27
ಹೈದರಾಬಾದ್ 79.23 71.89
ತಿರುವನಂತಪುರಂ 78.85 71.81

ದೇಶಾದ್ಯಂತ ಎಲ್ಲಾ ರಾಜ್ಯಗಳ ಪೆಟ್ರೋಲ್-ಡೀಸೆಲ್ ಬೆಲೆ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ: https://www.iocl.com/TotalProductList.aspx

Trending News