ಆರ್‌ಟಿಐ ಅಡಿ ಮಾಹಿತಿ ನೀಡದ ಆರೋಪ.. ತಾಲೂಕು ಆಡಳಿತದ ವಿರುದ್ದ ಏಕಾಂಗಿ ಪ್ರತಿಭಟನೆ

Tumkuru Protest: ತುರುವೇಕೆರೆ ತಾಲೂಕು ಕಚೇರಿಯ ಮುಂಭಾಗ ವಿಜಿಕುಮಾರ್ ಎಂಬ ಯುವಕ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.‌ 

Written by - Zee Kannada News Desk | Last Updated : May 18, 2024, 10:54 AM IST
  • ಯುವಕನ ಉಪವಾಸ ಸತ್ಯಾಗ್ರಹ
  • ಆರ್‌ಟಿಐ ಅಡಿ ಮಾಹಿತಿ ನೀಡದ ಆರೋಪ
  • ತಾಲೂಕು ಆಡಳಿತದ ವಿರುದ್ದ ಏಕಾಂಗಿ ಪ್ರತಿಭಟನೆ
ಆರ್‌ಟಿಐ ಅಡಿ ಮಾಹಿತಿ ನೀಡದ ಆರೋಪ.. ತಾಲೂಕು ಆಡಳಿತದ ವಿರುದ್ದ ಏಕಾಂಗಿ ಪ್ರತಿಭಟನೆ title=

ತುಮಕೂರು: ರೈತ ಹೋರಾಟಗಾರ ನಂಜುಂಡಸ್ವಾಮಿ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರವನ್ನು ಇಟ್ಟುಕೊಂಡು, ತುರುವೇಕೆರೆ ತಾಲೂಕು ಕಚೇರಿಯ ಮುಂಭಾಗ ವಿಜಿಕುಮಾರ್ ಎಂಬ ಯುವಕ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.‌ 

ಇದನ್ನೂ ಓದಿ: ನೀವು ಅಧಿಕ ರಕ್ತದೊತ್ತಡದ ಬಗ್ಗೆ ಚಿಂತಿತರಾಗಿದ್ದಿರಾ? ಇಲ್ಲಿದೆ ತಜ್ಞರಿಂದ ಸುಲಭ ಪರಿಹಾರ 

ತಾಲೂಕು ಕಚೇರಿ ಆಫೀಸ್ ಬಗ್ಗೆ ದಾಖಲೆ ಪತ್ರಗಳನ್ನು ಮಾಹಿತಿ ಹಕ್ಕು ನಿಯಮದಡಿ ಮಾಹಿತಿ ನೀಡುವಂತೆ ಕೇಳಿದ್ದ ಯುವಕ, ಬಳಿಕ ಮಾಹಿತಿ ಹಕ್ಕು ಅಧಿನಿಯಮದ ಅರ್ಜಿ ಗೆ ಪುಟಕ್ಕೆ 2ರೂನಂತೆ 50ಪುಟಗಳಿಗೆ ಹಣ ಸಂದಾಯ ಮಾಡುವಂತೆ ಅರ್ಜಿದಾರನಿಗೆ ತಾಲೂಕು ಕಚೇರಿ ವತಿಯಿಂದ ನೋಟೀಸ್ ನೀಡಿತ್ತು. ಅದರಂತೆ ನೋಟೀಸ್ ಪಡೆದು ಕೊಂಡು ಪುಟಕ್ಕೆ 2 ರೂ ನಂತೆ ಹಣ ಸಂದಾಯ ಮಾಡಿ, ಒಂದು ವಾರ ಕಳೆದರು, ಅರ್ಜಿದಾರನು ಕೇಳಿದ್ದ ಯಾವುದೇ ದಾಖಲೆಗಳನ್ನು ನೀಡಿರಲಿಲ್ಲ ಎಂದು ಆರೋಪಿಸಲಾಗಿದೆ.

ಇನ್ನು ತಾಲೂಕು ಕಚೇರಿಯಲ್ಲಿ ಸಂಬಂದ ಪಟ್ಟ ಸಿಬ್ಬಂದಿಗಳನು ವಿಚಾರಿಸಿದರೆ ಒಬ್ಬರ ಮೇಲೆ ಒಬ್ಬರು ನೆಪಹೇಳಿಕೊಂಡು ನುಣುಚಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ತಾಲೂಕು ಕಚೇರಿಯಲ್ಲಿ ಮಾಹಿತಿ ಹಕ್ಕಿನಡಿ ಕೇಳಿದ್ದ ಮಾಹಿತಿ ಸಿಗದ ಹಿನ್ನಲೆ ವಿಜಿ ಕುಮಾರ್ ಉಪವಾಸ  ಸತ್ಯಾಗ್ರಹದ ಮೊರೆ ಹೋಗಿದ್ದಾನೆ. ತಾಲೂಕು ಆಡಳಿತದ ವಿರುದ್ದ ಅಸಮಧಾನ ಹೊರಹಾಕಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾನೆ. 

ಇದನ್ನೂ ಓದಿ: ರಣ ಮಳೆಗೆ ತತ್ತರಿಸಿದ ಕರುನಾಡು... ಜನಶತಾಬ್ದಿ ರೈಲಿನ ಬೋಗಿಯಲ್ಲಿ ನೀರು ಸೋರಿಕೆ, ಜನಜೀವನ ಅಸ್ತವ್ಯಸ್ತ! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News