ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಹೆಚ್ಚಳ

ಮಂಗಳವಾರ, ದೆಹಲಿಯಲ್ಲಿ ಪೆಟ್ರೋಲ್ 14 ಪೈಸೆ ಹೆಚ್ಚಳವಾಗಿ 80.87 ರೂಪಾಯಿಗಳಿಗೆ ತಲುಪಿದೆ. ಮುಂಬೈನಲ್ಲಿ ಪೆಟ್ರೋಲ್ ದರ ಲೀಟರ್ಗೆ 88.26 ರೂ.

Last Updated : Sep 11, 2018, 07:56 AM IST
ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಹೆಚ್ಚಳ title=

ನವದೆಹಲಿ: ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಂಗಳವಾರ ಸಹ ಮುಂದುವರೆದಿದೆ. ಮಂಗಳವಾರ, ದೆಹಲಿಯಲ್ಲಿ ಪೆಟ್ರೋಲ್ 14 ಪೈಸೆ ಹೆಚ್ಚಳವಾಗಿ 80.87 ರೂಪಾಯಿಗಳಿಗೆ ತಲುಪಿದೆ. ಡೀಸೆಲ್ಗೆ ಲೀಟರ್ಗೆ 14 ಪೈಸೆ ಏರಿಕೆಯಾಗಿ ಬೆಲೆ ಲೀಟರ್ಗೆ 72.97 ರೂ. ಆಗಿದೆ. ಮತ್ತೊಂದೆಡೆ ಮುಂಬೈನಲ್ಲಿ ಪೆಟ್ರೋಲ್ ದರ 14 ಪೈಸೆ ಏರಿಕೆ ಕಂಡು 88.26 ರೂಪಾಯಿಗಳಿಗೆ ತಲುಪಿದೆ. ಮುಂಬೈನಲ್ಲಿ ಡೀಸೆಲ್ 15 ಪೈಸೆ ಏರಿಕೆಯಾಗಿದ್ದು, ಪ್ರತಿ ಲೀಟರ್ಗೆ 77.47 ರೂ. ಆಗಿದೆ.

ಸೋಮವಾರವೂ ದಾಖಲೆ ನಿರ್ಮಿಸಿದ್ದ ತೈಲ ಬೆಲೆ:
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸೋಮವಾರದಂದು ದಾಖಲೆ ನಿರ್ಮಿಸಿತ್ತು. ಸೋಮವಾರ ದೆಹಲಿಯಲ್ಲಿ ಪೆಟ್ರೋಲ್ 23 ಪೈಸೆ ಏರಿಕೆಯಾಗಿ 80.73 ರೂಪಾಯಿಗಳಿಗೆ ತಲುಪಿದೆ. ಅದೇ ಸಮಯದಲ್ಲಿ ಡೀಸೆಲ್ ದರ 22 ಪೈಸೆ ಏರಿಕೆಯಾಗಿ ಪ್ರತಿ ಲೀಟರ್ಗೆ 72.83 ರೂ.ಗೆ ಏರಿಕೆಯಾಗಿದೆ. ಶನಿವಾರ ದೆಹಲಿಯಲ್ಲಿ ಮೊದಲ ಬಾರಿಗೆ ಪೆಟ್ರೋಲ್ ದರ ಲೀಟರ್ಗೆ 80 ರೂ.ಗಳನ್ನು ದಾಟಿದೆ. ಇದು ಭಾನುವಾರ ಪ್ರತಿ ಲೀಟರ್ಗೆ 80.50 ರೂ. ತಲುಪಿತ್ತು.

ಮುಂಬೈನಲ್ಲಿ ವೇಗವಾಗಿ ಹೆಚ್ಚುತ್ತಿರುವ ತೈಲ ದರ:
ಮುಂಬೈನಲ್ಲಿ ಪೆಟ್ರೋಲ್ ಈಗ 88.26 ರೂಪಾಯಿ ಮತ್ತು ಡೀಸೆಲ್ಗೆ ಲೀಟರ್ಗೆ 77.47 ರೂ. ಮುಂಬೈನಲ್ಲಿ ಸೋಮವಾರ ಪೆಟ್ರೋಲ್ ಬೆಲೆ 23 ಪೈಸೆ ಏರಿಕೆ ಕಂಡು 88.12 ರೂ. ಲೀಟರ್ಗೆ ಡೀಸೆಲ್ 23 ಪೈಸೆ ಏರಿಕೆಯಾಗಿ, ಪ್ರತಿ ಲೀಟರ್ಗೆ 77.32 ರೂ. ಮುಟ್ಟಿತ್ತು. 

ಮತ್ತಷ್ಟು ಹೆಚ್ಚಳದ ಭೀತಿ:
ಮುಂಬರುವ ದಿನಗಳಲ್ಲಿ, ಭಾರತೀಯ ಮಾರುಕಟ್ಟೆಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಏರಿಕೆಯಾಗಲಿವೆ ಎಂದು ತಜ್ಞರು ನಂಬಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯ ಹೆಚ್ಚಳಕ್ಕೆ ಕಾರಣ ಡಾಲರ್‌ ಎದುರು ರೂಪಾಯಿ ಸಾರ್ವಕಾಲಿಕ ಕುಸಿತ ಕಾರಣ. ತೈಲ ಕಂಪನಿಗಳು ನಿರಂತರವಾಗಿ ಬೆಲೆಗಳನ್ನು ಬದಲಾಯಿಸುತ್ತಿವೆ. ವಾಸ್ತವವಾಗಿ, ಕಂಪನಿಗಳು ಡಾಲರ್ಗಳಲ್ಲಿ ತೈಲವನ್ನು ಪಾವತಿಸುತ್ತವೆ, ಇದರಿಂದಾಗಿ ಅವರು ತಮ್ಮ ಅಂಚುಗಳನ್ನು ಪೂರೈಸಲು ತೈಲ ಬೆಲೆಗಳನ್ನು ಹೆಚ್ಚಿಸಬೇಕು. 

ಪೆಟ್ರೋಲ್ ಡೀಸೆಲ್ ದರ ಕಡಿಮೆಯಾಗದಿರಲು ಇಲ್ಲಿವೆ ನಾಲ್ಕು ಪ್ರಮುಖ ಕಾರಣ

Trending News