ದೇಶದ ಮೊದಲ ಲೋಕಪಾಲ್ ಆಗಿ ನಿವೃತ್ತ ನ್ಯಾಯಮೂರ್ತಿ ಪಿನಾಕಿ ಚಂದ್ರ ಘೋಸ್ ನೇಮಕ ಸಾಧ್ಯತೆ

ದೇಶದ ಮೊದಲ ಲೋಕಪಾಲ್ ಸಂಸ್ಥೆ ಮುಖ್ಯಸ್ಥ ಹುದ್ದೆಗೆ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪಿನಾಕಿ ಚಂದ್ರ ಘೋಸ್ ಅವರನ್ನು ಪರಿಗಣಿಸುವ ಸಾಧ್ಯತೆ ಎಂದು ಸುದ್ದಿಮೂಲಗಳು ತಿಳಿಸಿವೆ.

Last Updated : Mar 17, 2019, 04:46 PM IST
ದೇಶದ ಮೊದಲ ಲೋಕಪಾಲ್ ಆಗಿ ನಿವೃತ್ತ  ನ್ಯಾಯಮೂರ್ತಿ ಪಿನಾಕಿ ಚಂದ್ರ ಘೋಸ್ ನೇಮಕ ಸಾಧ್ಯತೆ  title=
Photo courtesy: Twitter

ನವದೆಹಲಿ: ದೇಶದ ಮೊದಲ ಲೋಕಪಾಲ್ ಸಂಸ್ಥೆ ಮುಖ್ಯಸ್ಥ ಹುದ್ದೆಗೆ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪಿನಾಕಿ ಚಂದ್ರ ಘೋಸ್ ಅವರನ್ನು ಪರಿಗಣಿಸುವ ಸಾಧ್ಯತೆ ಎಂದು ಸುದ್ದಿಮೂಲಗಳು ತಿಳಿಸಿವೆ.

ಮೇ 2017 ರಲ್ಲಿ ಸುಪ್ರೀಂ ಕೋರ್ಟ್ ನಿಂದ ನಿವೃತ್ತರಾದ ಬಳಿಕ ನ್ಯಾಯಮೂರ್ತಿ ಘೋಸ್ ಅವರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್ಎಚ್ಆರ್ಸಿ)ದಲ್ಲಿ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಲೋಕಪಾಲ್ ಆಯ್ಕೆ ಸಮಿತಿಯಲ್ಲಿ ಉನ್ನತ ಹುದ್ದೆಗೆ ಘೋಸ್ ಅವರ ಹೆಸರನ್ನು ಪರಿಗಣಿಸಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಶುಕ್ರವಾರದಂದು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಲೋಕಪಾಲ್ ನಡೆದ ಆಯ್ಕೆ ಸಮಿತಿ ಸಭೆಯನ್ನು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು ಬಹಿಷ್ಕರಿಸಿದ್ದರು.ಒಂದು ವೇಳೆ ಈ ನೇಮಕಾತಿಯನ್ನು ಮಾಡಿದರೆ ವಿವಾದ ಉಂಟಾಗಬಹುದು ಎಂದು ಸರ್ಕಾರ ಇದುವರೆಗೆ ಯಾವುದೇ ಅಧಿಕೃತ ಘೋಷಣೆಯನ್ನು ಪ್ರಕಟಿಸಿಲ್ಲ ಎನ್ನಲಾಗಿದೆ. 

ಲೋಕಪಾಲ್ ಕಾಯಿದೆ ಅನುಸಾರವಾಗಿ ಈ ಸಂಸ್ಥೆ ಕೇಂದ್ರದಲ್ಲಿ ಲೋಕಪಾಲ್ ರಿಗೆ ಹಾಗೂ ರಾಜ್ಯದಲ್ಲಿ ಲೋಕಾಯುಕ್ತರಿಗೆ ಸಾರ್ವಜನಿಕ ಸೇವಕರ ವಿರುದ್ಧ ಭ್ರಷ್ಟಾಚಾರದ ಪ್ರಕರಣಗಳನ್ನು ಪರಿಶೀಲಿಸಲು ಅನುಕೂಲವಾಗುತ್ತದೆ.

Trending News