ಕೆಸಿಆರ್ ರಿಮೋಟ್ ಕಂಟ್ರೋಲ್ ಪ್ರಧಾನಿ ಮೋದಿ ಬಳಿ ಇದೆ-ರಾಹುಲ್ ಗಾಂಧಿ ವಾಗ್ದಾಳಿ 

ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೆಸಿಆರ್ ಅವರ ರಿಮೋಟ್ ಕಂಟ್ರೋಲ್ ಪ್ರಧಾನಿ ನರೇಂದ್ರ ಮೋದಿ ಬಳಿ ಇದೆ ಎಂದು ಭಾನುವಾರ ವಾಗ್ದಾಳಿ ನಡೆಸಿದರು ಮತ್ತು ರಾಜ್ಯದ ಆಡಳಿತ ಪಕ್ಷವನ್ನು "ಬಿಜೆಪಿಯ ಬಿ-ಟೀಮ್" ಮತ್ತು ಅದರ ಹೊಸ ಹೆಸರು ಬಿಆರ್ಎಸ್ ಎಂದು ಬಣ್ಣಿಸಿದರು.

Written by - Manjunath N | Last Updated : Jul 2, 2023, 11:32 PM IST
  • ಕಾಂಗ್ರೆಸ್ ಕಾರ್ಯಕರ್ತರನ್ನು 'ಬಬ್ಬರ್ ಶೇರ್' (ಸಿಂಹಗಳು) ಮತ್ತು ಪಕ್ಷದ ಬೆನ್ನೆಲುಬು ಎಂದು ರಾಹುಲ್ ಗಾಂಧಿ ಬಣ್ಣಿಸಿದರು.
  • ನಿಮ್ಮ ಬೆಂಬಲದಿಂದ ಕರ್ನಾಟಕದಲ್ಲಿ ಬಿಆರ್‌ಎಸ್‌ ಸೋಲಿಸಿದಂತೆ ನಾವು ಸೋಲಿಸಬಹುದು ಎಂದು ಪಕ್ಷದ ಕಾರ್ಯಕರ್ತರಿಗೆ ತಿಳಿಸಿದರು.
  • ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ನಮಗೆ ಇಲ್ಲಿಂದ (ತೆಲಂಗಾಣ) ಭಾರಿ ಬೆಂಬಲ ಸಿಕ್ಕಿದೆ
ಕೆಸಿಆರ್ ರಿಮೋಟ್ ಕಂಟ್ರೋಲ್ ಪ್ರಧಾನಿ ಮೋದಿ ಬಳಿ ಇದೆ-ರಾಹುಲ್ ಗಾಂಧಿ ವಾಗ್ದಾಳಿ  title=

ಕಮ್ಮಂ: ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೆಸಿಆರ್ ಅವರ ರಿಮೋಟ್ ಕಂಟ್ರೋಲ್ ಪ್ರಧಾನಿ ನರೇಂದ್ರ ಮೋದಿ ಬಳಿ ಇದೆ ಎಂದು ಭಾನುವಾರ ವಾಗ್ದಾಳಿ ನಡೆಸಿದರು ಮತ್ತು ರಾಜ್ಯದ ಆಡಳಿತ ಪಕ್ಷವನ್ನು "ಬಿಜೆಪಿಯ ಬಿ-ಟೀಮ್" ಮತ್ತು ಅದರ ಹೊಸ ಹೆಸರು ಬಿಆರ್ಎಸ್ ಎಂದು ಬಣ್ಣಿಸಿದರು.

ಇಲ್ಲಿನ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ರಾಹುಲ್ ಗಾಂಧಿ ಮಾತನಾಡುತ್ತಿದ್ದರು.

ಬಿಜೆಪಿ ರಿಷ್ಟೇದಾರ್ ಸಮಿತಿ'. ರಾವ್ ಮತ್ತು ಅವರ ಪಕ್ಷದ ನಾಯಕರ ವಿರುದ್ಧದ ಭ್ರಷ್ಟಾಚಾರ ಆರೋಪಗಳು ಬಿಜೆಪಿಗೆ ಅಧೀನವಾಗುವಂತೆ ಮಾಡಿದೆ ಎಂದು ಆರೋಪಿಸಿದ ರಾಹುಲ್ ಗಾಂಧಿ, ಬಿಆರ್‌ಎಸ್ (ಭಾರತ್ ರಾಷ್ಟ್ರ ಸಮಿತಿ) ಭಾಗಿಯಾಗಿರುವ ಯಾವುದೇ ಬಣವನ್ನು ಕಾಂಗ್ರೆಸ್ ಸೇರುವುದಿಲ್ಲ ಎಂದು ಇತರ ಎಲ್ಲ ವಿರೋಧ ಪಕ್ಷದ ನಾಯಕರಿಗೆ ಹೇಳಿದ್ದೇನೆ.ಬಿಆರ್‌ಎಸ್ ಬಿಜೆಪಿ ರಿಷ್ಟೇದಾರ್ ಸಮಿತಿಯಂತೆ, ಕೆಸಿಆರ್ ಅವರು ರಾಜ ಮತ್ತು ತೆಲಂಗಾಣ ಅವರ ಸಾಮ್ರಾಜ್ಯ ಎಂದು ಭಾವಿಸುತ್ತಾರೆ" ಎಂದು ಹೇಳಿದರು.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯನವರೇ 10 ಕೆಜಿ ಅಕ್ಕಿ ಎಲ್ಲಿ: ಬಿಜೆಪಿ ಪ್ರಶ್ನೆ

ಸಂಸತ್ತಿನಲ್ಲಿ ಕಾಂಗ್ರೆಸ್ ಯಾವಾಗಲೂ ಬಿಜೆಪಿ ವಿರುದ್ಧ ನಿಂತಿದೆ, ಆದರೆ ರಾವ್ ಅವರ ಪಕ್ಷವು "ಬಿಜೆಪಿಯ ಬಿ-ಟೀಮ್" ಇದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ರಿಮೋಟ್ ಕಂಟ್ರೋಲ್ ಅನ್ನು ಹೊಂದಿದ್ದಾರೆ" ಎಂದು ಟೀಕಾಪ್ರಹಾರ ನಡೆಸಿದರು.ಭ್ರಷ್ಟ ಮತ್ತು ಬಡವರ ವಿರೋಧಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಇತ್ತೀಚೆಗೆ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಹೋರಾಡಿದೆ ಮತ್ತು ನಾವು ರಾಜ್ಯದಲ್ಲಿ ಬಡವರು, ಒಬಿಸಿಗಳು, ಅಲ್ಪಸಂಖ್ಯಾತರು ಮತ್ತು ತುಳಿತಕ್ಕೊಳಗಾದವರ ಬೆಂಬಲದೊಂದಿಗೆ ಅವರನ್ನು ಸೋಲಿಸಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಿದರು.

ಒಂದು ಕಡೆ ರಾಜ್ಯದ ಶ್ರೀಮಂತರು ಮತ್ತು ಶಕ್ತಿಯುತರು ಇರುತ್ತಾರೆ ಮತ್ತು ಇನ್ನೊಂದು ಬದಿಯಲ್ಲಿ ನಮ್ಮೊಂದಿಗೆ ಬಡವರು, ಬುಡಕಟ್ಟುಗಳು, ಅಲ್ಪಸಂಖ್ಯಾತರು, ರೈತರು ಮತ್ತು ಸಣ್ಣ ಅಂಗಡಿಗಳವರು ಇರುತ್ತಾರೆ. ಕರ್ನಾಟಕದಲ್ಲಿ ಏನಾಯಿತು, ತೆಲಂಗಾಣದಲ್ಲಿ ಪುನರಾವರ್ತನೆಯಾಗುತ್ತದೆ ಎಂದು ರಾಹುಲ್ ಗಾಂಧಿ ಹೇಳಿದರು.ತೆಲಂಗಾಣದಲ್ಲಿ ಟಿಆರ್‌ಎಸ್ (ಈಗ ಬಿಆರ್‌ಎಸ್ ಆಗಿರುವ ತೆಲಂಗಾಣ ರಾಷ್ಟ್ರ ಸಮಿತಿ), ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತ್ರಿಕೋನ ಹೋರಾಟವಿದೆ ಎಂದು ಈ ಹಿಂದೆ ಹೇಳಲಾಗಿತ್ತು.ಆದರೆ ತೆಲಂಗಾಣದಲ್ಲಿ ಬಿಜೆಪಿ ಅಸ್ತಿತ್ವದಲ್ಲಿಲ್ಲ, ಅವರ ಎಲ್ಲಾ ನಾಲ್ಕು ಟೈರ್‌ಗಳು ಪಂಕ್ಚರ್ ಆಗಿವೆ. ಈಗ ಇದು ಕಾಂಗ್ರೆಸ್ ಮತ್ತು ಬಿಜೆಪಿಯ ಬಿ-ಟೀಮ್ ನಡುವೆ ಜಗಳವಾಗಿದೆ" ಎಂದು ಅವರು ಹೇಳಿದರು.

ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆಗೆ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಬೆಂಬಲ

2024ರ ಲೋಕಸಭೆ ಚುನಾವಣೆಗೆ ಬಿಜೆಪಿ ವಿರುದ್ಧ ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಇತ್ತೀಚಿನ ಪ್ರಯತ್ನಗಳನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, "ಟಿಆರ್‌ಎಸ್ ಸಭೆಯಲ್ಲಿ ಭಾಗವಹಿಸಿದರೆ ನಾವು ಇತರ ಪ್ರತಿಪಕ್ಷಗಳ ನಾಯಕರಿಗೆ ಹೇಳಿದ್ದೇವೆ, ಕಾಂಗ್ರೆಸ್ ಭಾಗವಹಿಸುವುದಿಲ್ಲ, ಕಾಂಗ್ರೆಸ್ ಟಿಆರ್‌ಎಸ್‌ನೊಂದಿಗೆ ವೇದಿಕೆ ಹಂಚಿಕೊಳ್ಳಲು ಸಾಧ್ಯವಿಲ್ಲ" ಎಂದು ಹೇಳಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ಕಾಂಗ್ರೆಸ್ ಕಾರ್ಯಕರ್ತರನ್ನು 'ಬಬ್ಬರ್ ಶೇರ್' (ಸಿಂಹಗಳು) ಮತ್ತು ಪಕ್ಷದ ಬೆನ್ನೆಲುಬು ಎಂದು ರಾಹುಲ್ ಗಾಂಧಿ ಬಣ್ಣಿಸಿದರು. ನಿಮ್ಮ ಬೆಂಬಲದಿಂದ ಕರ್ನಾಟಕದಲ್ಲಿ ಬಿಆರ್‌ಎಸ್‌ ಸೋಲಿಸಿದಂತೆ ನಾವು ಸೋಲಿಸಬಹುದು ಎಂದು ಪಕ್ಷದ ಕಾರ್ಯಕರ್ತರಿಗೆ ತಿಳಿಸಿದರು.ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ನಮಗೆ ಇಲ್ಲಿಂದ (ತೆಲಂಗಾಣ) ಭಾರಿ ಬೆಂಬಲ ಸಿಕ್ಕಿದೆ ಮತ್ತು ಅದಕ್ಕಾಗಿ ನಾನು ನಿಮಗೆಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಅವರು ಹೇಳಿದರು.

ಯಾತ್ರೆಯ ಸಂದರ್ಭದಲ್ಲಿ ನಾವು ದೇಶವನ್ನು ಒಗ್ಗೂಡಿಸುವ ಬಗ್ಗೆ ಮಾತನಾಡಿದ್ದೇವೆ, ಒಂದು ಕಡೆ ದೇಶವನ್ನು ಒಗ್ಗೂಡಿಸಲು ಒಂದು ಸಿದ್ಧಾಂತವನ್ನು ಅನುಸರಿಸುತ್ತೇವೆ ಮತ್ತು ಇನ್ನೊಂದು ಕಡೆ ದೇಶವನ್ನು ಒಡೆಯಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು.

ಇಡೀ ದೇಶವೇ ಯಾತ್ರೆಗೆ ಬೆಂಬಲ ನೀಡಿದ್ದು, ಈ ದೇಶದಲ್ಲಿ ದ್ವೇಷ ಸಾಧಿಸಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ನಮ್ಮ ಸಿದ್ಧಾಂತದಲ್ಲಿ ನಂಬಿಕೆ ಇಟ್ಟಿರುವ ಕಾಂಗ್ರೆಸ್‌ಗೆ ಖಮ್ಮಂ ಯಾವಾಗಲೂ ಬೆಂಬಲ ನೀಡುತ್ತಿದೆ. ಇಂದು ಕಾಂಗ್ರೆಸ್ ಸೇರಲು ನಿರ್ಧರಿಸಿರುವ ನಾಯಕರನ್ನು ನಾನು ಸ್ವಾಗತಿಸುತ್ತೇನೆ. ಆದರೆ ಮುಖ್ಯವಾಗಿ ನಾನು ನಮ್ಮ ಸಿಂಹಗಳಂತಿರುವ (ಬಬ್ಬರ್ ಶೇರ್) ಪಕ್ಷದ ಕಾರ್ಯಕರ್ತರಿಗೆ ಧನ್ಯವಾದ ಹೇಳಲು ಬಯಸುತ್ತೇನೆ" ಎಂದು ಅವರು ಹೇಳಿದರು.

 

Trending News