ಸಿಎಂ ಸಿದ್ದರಾಮಯ್ಯನವರೇ 10 ಕೆಜಿ ಅಕ್ಕಿ ಎಲ್ಲಿ: ಬಿಜೆಪಿ ಪ್ರಶ್ನೆ

Anna Bhagya Scheme: ಸಿದ್ದರಾಮಯ್ಯನವರೇ ಜುಲೈ 1ಕ್ಕೆ ಪ್ರಧಾನಿ ಮೋದಿ ಸರ್ಕಾರದ 5 ಕೆಜಿ ಉಚಿತ ಅಕ್ಕಿ ಕರ್ನಾಟಕದ ಜನರಿಗೆ ಈಗಾಗಲೇ ಸಿಕ್ಕಿದೆ. #ATMSarkaraದ 10 ಕೆಜಿ ಅಕ್ಕಿ ಎಲ್ಲಿದೆ?’ ಎಂದು ಬಿಜೆಪಿ ಪ್ರಶ್ನಿಸಿದೆ

Written by - Puttaraj K Alur | Last Updated : Jul 1, 2023, 01:19 PM IST
  • ಇಂದಿನಿಂದಲೇ ಕಾಂಗ್ರೆಸ್ ಸರ್ಕಾರದ ‘ಅನ್ನಭಾಗ್ಯ’ ಯೋಜನೆ ಜಾರಿಯಾಗಲಿದೆ
  • 5 ಕೆಜಿ ಅಕ್ಕಿ ಜೊತೆ ಪಡಿತರ ಚೀಟಿ ಹೊಂದಿರುವವರ ಬ್ಯಾಂಕ್ ಖಾತೆಗೆ 170 ರೂ. ಹಣ ವರ್ಗಾವಣೆ
  • ಸಿಎಂ ಸಿದ್ದರಾಮಯ್ಯ ನೇತೃತ್ವದ #ATMSarkaraದ 10 ಕೆಜಿ ಅಕ್ಕಿ ಎಲ್ಲಿದೆ? ಎಂದು ಪ್ರಶ್ನಿಸಿದ ಬಿಜೆಪಿ
ಸಿಎಂ ಸಿದ್ದರಾಮಯ್ಯನವರೇ 10 ಕೆಜಿ ಅಕ್ಕಿ ಎಲ್ಲಿ: ಬಿಜೆಪಿ ಪ್ರಶ್ನೆ title=
ಇಂದಿನಿಂದಲೇ ‘ಅನ್ನಭಾಗ್ಯ’ ಯೋಜನೆ ಜಾರಿ

ಬೆಂಗಳೂರು: ಇಂದಿನಿಂದಲೇ(ಜುಲೈ 1) ಅನ್ನಭಾಗ್ಯ ಯೋಜನೆ ಜಾರಿಯಾಗಲಿದೆ. 5 ಕೆಜಿ ಅಕ್ಕಿ ಜೊತೆಗೆ ಪಡಿತರ ಚೀಟಿ ಹೊಂದಿರುವವರ ಬ್ಯಾಂಕ್ ಖಾತೆಗಳಿಗೆ 170 ರೂ. ಹಣ ವರ್ಗಾವಣೆಯಾಗಲಿದೆ. ಅಕ್ಕಿ‌ ದಾಸ್ತಾನು ಸಂಗ್ರಹವಾಗುವವರೆಗೂ ಮಾತ್ರ ಕೆಜಿಗೆ 34 ರೂ.ನಂತೆ ಹಣ ನೀಡಲಾಗುತ್ತದೆ. ಅಕ್ಕಿ ಸಿಗುವವರೆಗೂ ಹಣ ವರ್ಗಾವಣೆಯಾಗಲಿದ್ದು, ಬಳಿಕ ಅಕ್ಕಿ ನೀಡಲಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಈಗಾಗಲೇ ತಿಳಿಸಿದೆ.

ಕಾಂಗ್ರೆಸ್ ಸರ್ಕಾರದ ‘ಅನ್ನಭಾಗ್ಯ’ ಯೋಜನೆಯನ್ನು ಬಿಜೆಪಿ ಟೀಕಿಸಿದೆ. ‘10 ಕೆಜಿ ಅಕ್ಕಿ ಬೇಕೋ ಬೇಡ್ವೋ..? ಜನರ ಕಿವಿ ಮೇಲೆ ಕಲರ್ ಕಲರ್ ಹೂ ಇಡಲಾಗುತ್ತಿದೆ. ಸಿದ್ದರಾಮಯ್ಯನವರೇ ಜುಲೈ 1ಕ್ಕೆ ಪ್ರಧಾನಿ ಮೋದಿ ಸರ್ಕಾರದ 5 ಕೆಜಿ ಉಚಿತ ಅಕ್ಕಿ ಕರ್ನಾಟಕದ ಜನರಿಗೆ ಈಗಾಗಲೇ ಸಿಕ್ಕಿದೆ. #ATMSarkaraದ 10 ಕೆಜಿ ಅಕ್ಕಿ ಎಲ್ಲಿದೆ?’ ಎಂದು ಪ್ರಶ್ನಿಸಿದೆ.

ಇದನ್ನೂ ಓದಿ: 'RSS ಕೈಗೊಂಬೆಯಾಗದವರು, ಕೋಮುವಾದಿ ಅಲ್ಲದವರು' ವಿಪಕ್ಷ ನಾಯಕ ಬೇಕಾಗಿದ್ದಾರೆ- ಕಾಂಗ್ರೆಸ್

#ATMSarkara ಎಫೆಕ್ಟ್‍ನಿಂದ ತೊಗರಿ ಬೆಲೆ ಏರಿಕೆ!

‘ಮುಂಗಾರು ಕೈಕೊಟ್ಟಿರುವ ಕಾರಣ ರೈತರು ಕಂಗಾಲಾಗಿದ್ದಾರೆ. ರಾಜ್ಯದಲ್ಲಿ ಅನಾವೃಷ್ಟಿಯ ಕರಿಛಾಯೆ ಆವರಿಸಿದೆ. ಆದರೂ #ATMSarkara ಕುಂಭಕರ್ಣ ನಿದ್ದೆಯಲ್ಲಿದೆ. ತರಕಾರಿ, ದಿನಸಿ ಬೆಲೆಗಳು ಬಡವರು, ಮಧ್ಯಮ ವರ್ಗದವರ ಕಣ್ಣಲ್ಲಿ ನೀರು ತರಿಸುತ್ತಿದೆ. ನಾನು ಮುಖ್ಯಮಂತ್ರಿ, ತಾನು ಮುಖ್ಯಮಂತ್ರಿ ಎಂಬ ಗುದ್ದಾಟದಲ್ಲಿಯೇ ನಿರತವಾಗಿರುವ ಸಿದ್ದರಾಮಯ್ಯ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಇಂದು ತೊಗರಿ ಬೇಳೆ ಬೆಲೆಯೂ ಕೈಗೆಟುಕದಂತಾಗಿದೆ’ ಎಂದು ಬಿಜೆಪಿ ಟೀಕಿಸಿದೆ.

ಪಡಿತರ ಕಾರ್ಡ್ ಹೊಂದಿರುವವರ ಮಾಹಿತಿ:

ರಾಜ್ಯದಲ್ಲಿ ಒಟ್ಟು 1 ಕೋಟಿ 28 ಲಕ್ಷ ಪಡಿತರ ಕಾರ್ಡ್‌ ಹೊಂದಿರುವವರಿದ್ದು, ಈ ಪೈಕಿ 4 ಕೋಟಿ 42 ಲಕ್ಷ ಫಲಾನುಭವಿಗಳಿದ್ದಾರೆ. ಈ ಪೈಕಿ ಶೇ.99.99ರಷ್ಟು ಆಧಾರ್ ಕಾರ್ಡ್ ಜೋಡಣೆ ಆಗಿದೆ. ಶೇ.1.22ರಷ್ಟು ಕಾರ್ಡ್‌ದಾರರ ಬ್ಯಾಂಕ್ ಅಕೌಂಟ್ ಲಿಂಕ್ ಆಗಿದೆ. ಬಾಕಿ ಉಳಿದಿರುವ 6 ಲಕ್ಷ ಕಾರ್ಡ್‌ಗಳು ಆಧಾರ್ ಲಿಂಕ್ ಆಗಬೇಕಿದೆ. ಆಧಾರ್ ಲಿಂಕ್ ಆಗುತ್ತಿದ್ದ ಹಾಗೆ ಬ್ಯಾಂಕ್ ಅಕೌಂಟ್ ಕೂಡ ಕಾರ್ಡ್‍ಗಳಿಗೆ ಅಪ್‍ಡೇಟ್ ಆಗಲಿದೆ.

ಇದನ್ನೂ ಓದಿಉತ್ತಮ ಆಡಳಿತ; ಜನಪರ ಯೋಜನೆಗಳಿಗೆ ಸರ್ಕಾರದ ಆದ್ಯತೆ: ಕಂದಾಯ ಸಚಿವ ಕೃಷ್ಣ ಭೈರೇಗೌಡ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News