Corona ದಿಂದ ಬಚಾವ್ ಆಗಲು ಪ್ರಧಾನಿ ಮೋದಿ ನೀಡಿದ ಸಲಹೆ ಇದು

'ಜನೌಷಧಿ ದಿನವು ಕೇವಲ ಒಂದು ಯೋಜನೆಯನ್ನು ಆಚರಿಸುವ ದಿನವಲ್ಲ, ಆದರೆ ಈ ಯೋಜನೆಯಿಂದ ಹೆಚ್ಚಿನ ಪರಿಹಾರವನ್ನು ಪಡೆದ ಲಕ್ಷಾಂತರ ಭಾರತೀಯರು, ಲಕ್ಷಾಂತರ ಕುಟುಂಬಗಳೊಂದಿಗೆ ಸಂಪರ್ಕ ಸಾಧಿಸುವ ದಿನವಾಗಿದೆ'. - ಪ್ರಧಾನಿ ನರೇಂದ್ರ ಮೋದಿ  

Last Updated : Mar 7, 2020, 12:46 PM IST
Corona ದಿಂದ ಬಚಾವ್ ಆಗಲು ಪ್ರಧಾನಿ ಮೋದಿ ನೀಡಿದ ಸಲಹೆ ಇದು title=

ನವದೆಹಲಿ: ಜನೌಷಧಿ ದಿನದ ಆಚರಣೆ ಸಂದರ್ಭದಲ್ಲಿ ಜನೌಷಧಿ ಕೇಂದ್ರದಲ್ಲಿ ಫಲಾನುಭವಿಗಳೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಪಿಎಂ ಮೋದಿ ಕರೋನಾ ವೈರಸ್ ತಪ್ಪಿಸುವ ಮಾರ್ಗಗಳನ್ನು ಜನರಿಗೆ ತಿಳಿಸಿದರು.

'ಜನೌಷಧಿ ದಿನವು ಕೇವಲ ಒಂದು ಯೋಜನೆಯನ್ನು ಆಚರಿಸುವ ದಿನವಲ್ಲ, ಆದರೆ ಈ ಯೋಜನೆಯಿಂದ ಹೆಚ್ಚಿನ ಪರಿಹಾರವನ್ನು ಪಡೆದ ಲಕ್ಷಾಂತರ ಭಾರತೀಯರು, ಲಕ್ಷಾಂತರ ಕುಟುಂಬಗಳೊಂದಿಗೆ ಸಂಪರ್ಕ ಸಾಧಿಸುವ ದಿನವಾಗಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

'ಪ್ರಧಾನಮಂತ್ರಿ ಭಾರತೀಯ ಜನೌಷಧಿ ಯೋಜನೆಯು ದೇಶದ ಪ್ರತಿ ನಾಗರೀಕರಿಗೂ ಅಗ್ಗದ ಮತ್ತು ಉತ್ತಮ ಚಿಕಿತ್ಸೆ ನೀಡುವ ಪ್ರತಿಜ್ಞೆಯಾಗಿದೆ. ಇಡೀ ದೇಶದಲ್ಲಿ ಈವರೆಗೆ 6 ಸಾವಿರಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ನನಗೆ ತುಂಬಾ ತೃಪ್ತಿ ಇದೆ' ಎಂದರು.

ಈ ಜನಪ್ರಿಯ ಜನೌಷಧಿ ಕೇಂದ್ರಗಳಿಂದಾಗಿ ಬಡ ಮತ್ತು ಮಧ್ಯಮ ವರ್ಗದ ಕೋಟ್ಯಾಂತರ ಜನರು 2000-2500 ಕೋಟಿ ರೂ.ಗಳನ್ನು ಉಳಿಸಿದ್ದಾರೆ ಎಂದು ಅಂಕಿ-ಅಂಶಗಳಿಂದ ತಿಳಿದುಬಂದಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.

'ಕರೋನಾದ ವದಂತಿಗಳನ್ನು ತಪ್ಪಿಸಿ'
ಇದೇ ಸಂದರ್ಭದಲ್ಲಿ ಕರೋನಾ ವೈರಸ್‌ನಿಂದ ಜನರು ತುಂಬಾ ಅಸಮಾಧಾನಗೊಂಡಿದ್ದಾರೆ ಎಂದು ತಿಳಿಸಿದ ಪ್ರಧಾನಿ ನರೇಂದ್ರ ಮೋದಿ, 'ಅಂತಹ ಸಮಯದಲ್ಲಿ ವದಂತಿಗಳು ಸಹ ಶೀಘ್ರವಾಗಿ ಹರಡುತ್ತವೆ. ಕೆಲವರು ಇದನ್ನು ತಿನ್ನಬಾರದು, ಅದನ್ನು ಮಾಡಬಾರದು ಎಂದು ಹೇಳುತ್ತಾರೆ. ಕೆಲವರು ಇದನ್ನು ತಿನ್ನುವುದರಿಂದ ಕರೋನಾ ವೈರಸ್ ಅನ್ನು ತಪ್ಪಿಸಬಹುದಾದ ನಾಲ್ಕು ಹೊಸ ವಿಷಯಗಳನ್ನು ತರುತ್ತಾರೆ. ಈ ವದಂತಿಗಳನ್ನೂ ನಾವು ತಪ್ಪಿಸಬೇಕು. ನೀವು ಏನೇ ಮಾಡಿದರೂ ಅದನ್ನು ನಿಮ್ಮ ವೈದ್ಯರ ಸಲಹೆ ಪಡೆದು ಮಾಡಿ ಎಂದು ಸಲಹೆ ನೀಡಿದರು.
 
ಇದರ ಜೊತೆಗೆ ಶೇಕ್ ಹ್ಯಾಂಡ್ ಮಾಡುವ ಬದಲು ನಮ್ಮ ದೇಶದ ಸಂಸ್ಕೃತಿಯನ್ನು ಸಾರುವ ಕೈ ಮುಗಿದು ನಮಸ್ತೆ ಎಂದು ಹೇಳುವ ಅಭ್ಯಾಸವನ್ನು ಪರಿಚಯಿಸಲು ಇದು ಸರಿಯಾದ ಸಮಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

Trending News