ಪ್ರಧಾನಿ ಮೋದಿ ಮಿಷನ್ 'APPLE', ಸೇಬಿನಿಂದ ಕಾಶ್ಮೀರಿಗಳ ಜೇಬು ತುಂಬಿಸಲು ಸರ್ಕಾರದ ಪ್ಲಾನ್!

ಜಮ್ಮು ಮತ್ತು ಕಾಶ್ಮೀರದ ಶ್ರೀನಗರ, ಶೋಪಿಯಾನ್, ಸೊಪೋರ್ ಮಂಡಳಿಗಳಿಂದ ನಾಫೆಡ್(NAFED) ಮೂಲಕ ಸೇಬುಗಳನ್ನು ಖರೀದಿಸಲಿದೆ.

Last Updated : Sep 11, 2019, 09:50 AM IST
ಪ್ರಧಾನಿ ಮೋದಿ ಮಿಷನ್ 'APPLE', ಸೇಬಿನಿಂದ ಕಾಶ್ಮೀರಿಗಳ ಜೇಬು ತುಂಬಿಸಲು ಸರ್ಕಾರದ ಪ್ಲಾನ್! title=

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಿಂದ 370 ನೇ ವಿಧಿಯನ್ನು ತೆಗೆದುಹಾಕಿದ ನಂತರ, ಈಗ ಕೇಂದ್ರ ಸರ್ಕಾರವು ರಾಜ್ಯದ ಸೇಬು ರೈತರಿಗೆ ದೊಡ್ಡ ಉಡುಗೊರೆಯನ್ನು ನೀಡಲು ಮುಂದಾಗಿದೆ. ಜಮ್ಮು ಮತ್ತು ಕಾಶ್ಮೀರದ ರೈತರ ಜೇಬು ತುಂಬಿಸುವುದು ಮತ್ತು ಅವರ ನಷ್ಟವನ್ನು ಕಡಿಮೆ ಮಾಡುವುದು ಸರ್ಕಾರದ ಯೋಜನೆಯಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಕಾಶ್ಮೀರಕ್ಕಾಗಿ 'ಆಪಲ್' ಮಿಷನ್ ತರಲು ಹೊರಟಿದೆ. ಈ ಯೋಜನೆಯಡಿ ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರದ ರೈತರಿಂದ ನೇರವಾಗಿ ಸೇಬುಗಳನ್ನು ಖರೀದಿಸುತ್ತದೆ. ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ(National Agricultural Cooperative Marketing Federation of India)ವು ರೈತರಿಂದ ಸೇಬನ್ನು ಖರೀದಿ ಮಾಡಲಿದೆ.

ಡಿಸೆಂಬರ್ 15 ರ ವೇಳೆಗೆ ರೈತರಿಂದ ಸೇಬು ಖರೀದಿಸುವ ಕೆಲಸ ಪೂರ್ಣಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಇದರೊಂದಿಗೆ ರೈತರಿಗೆ ನೇರವಾಗಿ ಅವರ ಖಾತೆಗಳಲ್ಲಿ ಹಣವನ್ನು ನೀಡಲಾಗುವುದು.

ಜಮ್ಮು ಮತ್ತು ಕಾಶ್ಮೀರದ ಶ್ರೀನಗರ, ಶೋಪಿಯಾನ್, ಸೊಪೋರ್ ಮಂಡಳಿಗಳಿಂದ ನಾಫೆಡ್(NAFED) ಮೂಲಕ ಸೇಬುಗಳನ್ನು ಖರೀದಿಸಲಿದೆ.  ಇದರ ನಂತರ, ಆಪಲ್ ಪ್ರಭೇದಗಳ ಶ್ರೇಣಿಯನ್ನು ಗುಣಮಟ್ಟದ ಸಮಿತಿ ನಿರ್ಧರಿಸುತ್ತದೆ. ಈ ಬೆಲೆ ಸಮಿತಿಯು ಎಲ್ಲಾ ವರ್ಗಗಳ ಸೇಬುಗಳ ಬೆಲೆಯನ್ನು ನಿರ್ಧರಿಸುತ್ತದೆ. ಈ ಸಂಪೂರ್ಣ ಪ್ರಕ್ರಿಯೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಮುಖ್ಯ ಕಾರ್ಯದರ್ಶಿ ಸಮನ್ವಯ ಸಾಧಿಸಲಿದ್ದು, ಸಂಪೂರ್ಣ ಕಾರ್ಯಗಳು ಕೃಷಿ ಮತ್ತು ಗೃಹ ವ್ಯವಹಾರಗಳ ಸಚಿವಾಲಯದ ಮೇಲ್ವಿಚಾರಣೆಯಲ್ಲಿ ನಡೆಯಲಿದೆ.

ಕಾಶ್ಮೀರದಲ್ಲಿ ಸಮೃದ್ಧಿಯ ಆಪಲ್:
ಜಮ್ಮು ಮತ್ತು ಕಾಶ್ಮೀರದಲ್ಲಿ 67% ಕಾಶ್ಮೀರಿಗಳು ಅಂದರೆ 7 ಲಕ್ಷ ಕುಟುಂಬಗಳು ಸೇಬು ವ್ಯಾಪಾರವನ್ನು ಅವಲಂಬಿಸಿವೆ. ಇದು ದೇಶದ ಒಟ್ಟು ಸೇಬು ಉತ್ಪಾದನೆಯಲ್ಲಿ 79.3% ನಷ್ಟಿದೆ. ವಾರ್ಷಿಕವಾಗಿ 6,500 ಕೋಟಿ ರೂಪಾಯಿಗಳಷ್ಟು ಮೌಲ್ಯದ ಆಪಲ್ ಅನ್ನು ಜಮ್ಮು ಮತ್ತು ಕಾಶ್ಮೀರದಿಂದ ರಫ್ತು ಮಾಡುತ್ತದೆ. ಕಳೆದ ವರ್ಷ ಕಾಶ್ಮೀರದಲ್ಲಿ 20 ಲಕ್ಷ ಮೆಟ್ರಿಕ್ ಟನ್ ಸೇಬುಗಳನ್ನು ಉತ್ಪಾದಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ಸಾಲದಲ್ಲಿ ಪರಿಹಾರ!
ಶ್ರೀನಗರದಲ್ಲಿ ರಾಜ್ಯಮಟ್ಟದ ಬ್ಯಾಂಕರ್‌ಗಳ ಸಮಿತಿಯ (ಎಸ್‌ಎಲ್‌ಬಿಸಿ) ಮಹತ್ವದ ಸಭೆಯಲ್ಲಿ ಎಸ್‌ಎಲ್‌ಬಿಸಿಯ ಸಾಲಗಳಿಗೆ ಪರಿಹಾರ ನೀಡಲು ದೊಡ್ಡ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಸಭೆಯಲ್ಲಿ, ಮರುಪಾವತಿ ಅವಧಿಯನ್ನು 90 ದಿನಗಳವರೆಗೆ ವಿಸ್ತರಿಸಲು ಶಿಫಾರಸು ಮಾಡಲಾಗಿದೆ. ಗ್ರಾಮೀಣ ಮತ್ತು ಸಹಕಾರಿ ಬ್ಯಾಂಕುಗಳಲ್ಲಿಯೂ ಈ ರಿಯಾಯಿತಿಯನ್ನು ಕೋರಲಾಗಿದೆ. ಈಗ ಆರ್‌ಬಿಐ ಎಸ್‌ಎಲ್‌ಬಿಸಿಯ ಶಿಫಾರಸುಗಳ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ.

Trending News