ನಮೋ ಕರ್ತವ್ಯ ನಿಷ್ಠೆ : ಅಮ್ಮನ ಅಗಲಿಕೆ ನಡುವೆಯೂ ಕೆಲಸಕ್ಕೆ ʼಪ್ರಧಾನಿ ಹಾಜರ್‌ʼ..!

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್‌ ವಿಧಿವಶರಾಗಿದ್ದಾರೆ. ಅಮ್ಮನ ಅಂತ್ಯ ಸಂಸ್ಕಾರ ನೆರವೇರಿಸಿರುವ ಮೋದಿಯ, ಹೃದಯದಲ್ಲಿ ಸಾಕಷ್ಟು ನೋವು ತುಂಬಿಕೊಂಡಿದ್ದರು ಸಹ ಎಂದಿನಂತೆ ತಮ್ಮ ಕೆಲಸಕ್ಕೆ ಮುಂದಾಗಿದ್ದಾರೆ. ಇಂದು ಸಾಲು ಸಾಲು ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಪ್ರಧಾನಿ ಭಾಗವಹಿಸಿದ್ದಾರೆ. ಮೋದಿ ಕರ್ತವ್ಯ ನಿಷ್ಠೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Written by - Krishna N K | Last Updated : Dec 30, 2022, 01:40 PM IST
  • ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್‌ ವಿಧಿವಶರಾಗಿದ್ದಾರೆ.
  • ಅಮ್ಮನ ಅಂತ್ಯ ಸಂಸ್ಕಾರ ನೆರವೇರಿಸಿರುವ ಮೋದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
  • ಮೋದಿ ಕರ್ತವ್ಯ ನಿಷ್ಠೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಮೋ ಕರ್ತವ್ಯ ನಿಷ್ಠೆ : ಅಮ್ಮನ ಅಗಲಿಕೆ ನಡುವೆಯೂ ಕೆಲಸಕ್ಕೆ ʼಪ್ರಧಾನಿ ಹಾಜರ್‌ʼ..! title=

PM Narendra Modi : ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್‌ ವಿಧಿವಶರಾಗಿದ್ದಾರೆ. ಅಮ್ಮನ ಅಂತ್ಯ ಸಂಸ್ಕಾರ ನೆರವೇರಿಸಿರುವ ಮೋದಿಯ, ಹೃದಯದಲ್ಲಿ ಸಾಕಷ್ಟು ನೋವು ತುಂಬಿಕೊಂಡಿದ್ದರು ಸಹ ಎಂದಿನಂತೆ ತಮ್ಮ ಕೆಲಸಕ್ಕೆ ಮುಂದಾಗಿದ್ದಾರೆ. ಇಂದು ಸಾಲು ಸಾಲು ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಪ್ರಧಾನಿ ಭಾಗವಹಿಸಿದ್ದಾರೆ. ಮೋದಿ ಕರ್ತವ್ಯ ನಿಷ್ಠೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹೌದು.. ಮನೆಯಲ್ಲಿ ಯಾರಾದ್ರೂ ಒಬ್ಬರಿಗೆ ಆರೋಗ್ಯ ಸ್ಥಿತಿ ಸರಿಯಿಲ್ಲ ಎಂದಾಗ ಇದ್ದ ಕೆಲವನ್ನೂ ಬಿಟ್ಟು ಆಸ್ಪತ್ರೆಯಲ್ಲಿ ಅವರ ಜೊತೆ ಇದ್ದು ನೋಡಿಕೊಳ್ಳುತ್ತೇವೆ. ಅಲ್ಲದೆ, ಸ್ನೇಹಿತರಾಗಲಿ, ತಿಳಿದವರಾಗಲಿ ನಿಧನ ಹೊಂದಿದರೆ ಅಂದಿನ ದಿನವೇ ನರಕದಂತೆ ಭಾಸವಾಗುತ್ತದೆ. ಅಂತವುದರಲ್ಲಿ ʼಪ್ರಧಾನ ಮಂತ್ರಿʼ ಹುದ್ದೆ ಅಲಂಕರಿಸಿರುವ ನರೇಂದ್ರ ಮೋದಿಯವರು ತಮ್ಮ ತಾಯಿಯನ್ನು ಕಳೆದುಕೊಂಡಿದ್ದಾರೆ. ಅಂದ್ರೆ ಅವರ ಮನಸ್ಸಿನಲ್ಲಿ ಎಷ್ಟು ನೋವಿರಬಹುದು ಅರ್ಥೈಸಿಕೊಳ್ಳಿ. 

ಇದನ್ನೂ ಓದಿ: ತಾಯಿಯ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ.! ಭಾವುಕ ಕ್ಷಣಗಳ ವಿಡಿಯೋ ಇಲ್ಲಿದೆ

ಮೋದಿಯವರ ಪ್ರತಿಯೊಂದು ಕೆಲಸಕ್ಕೆ ಸ್ಪೂರ್ತಿಯಾಗಿದ್ದ ಹೀರಾಬೆನ್‌ ಅವರು ಇನ್ನಿಲ್ಲ. ಪ್ರಾಣಕ್ಕೆ ಪ್ರಾಣವಾಗಿದ್ದ ಅಮ್ಮನ ಅಗಲಿಕೆಯ ನಡುವೆಯೂ ಜವಾಬ್ದಾರಿ ಮೆರೆದಿರುವ ಮೋದಿ, ಪ್ರಧಾನಿ ಕೆಲಸಕ್ಕೆ ಹಾಜರಾಗಿ, ದಿನನಿತ್ಯದ ಅಭಿವೃದ್ಧಿ ಯೋಜನಾ ಕಾರ್ಯಕ್ರಮಗಳಲ್ಲಿ ಮುಂದಾಗಿದ್ದಾರೆ. ತಾಯಿಯ ಅಂತ್ಯಸಂಸ್ಕಾರ ನೆರವೇರಿಸಿ ಪಶ್ಚಿಮ ಬಂಗಾಳದಲ್ಲಿ ರೈಲ್ವೆ ಮತ್ತು ಮೆಟ್ರೊ ಯೋಜನೆಗಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಈ ವೇಳೆ ಸಿಎಂ ಮಮತಾ ಬ್ಯಾನರ್ಜಿ ಮೋದಿಯವರಿಗೆ ಧೈರ್ಯ ತುಂಬುವ ಮಾತುಗಳನ್ನಾಡಿದರು.

ಕೆಳಹಂತದಿಂದ ಬಂದ ನಮೋ ಇಂದು ಅಖಂಡ ಭಾರತ ದೇಶದ ಪ್ರಧಾನಿಯಾಗಿದ್ದಾರೆ ಅಂದ್ರೆ ಅದಕ್ಕೆ ಕಾರಣ ಹೀರಾಬೆನ್‌ ಎಂಬ ಅದ್ಭುತ ಶಕ್ತಿ. ಗಟ್ಟಿಗಿತ್ತಿ ಹೀರಾಬೆನ್‌ ಮೋದಿ ಸಾಧನೆಗಳಿಗೆ ಸ್ಪೂರ್ತಿಯಾಗಿದ್ದರು. ಇತ್ತೀಚಿಗಷ್ಟೆ ಹೀರಾಬೆನ್‌ ಅವರು 100ನೇ ವರ್ಷದ ಹುಟ್ಟುಹಬ್ಬವನ್ನು ಮಗನ ಜೊತೆ ಆಚರಿಸಿಕೊಂಡಿದ್ದರು. ನಿನ್ನೆ ಆನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದು, ಇಂದು ವಿಧಿವಶರಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News