ನವದೆಹಲಿ: ಚುನಾವಣಾ ಮತ ಕೇಂದ್ರದಲ್ಲಿ ಪ್ರಧಾನಿ ಮೋದಿ ಕ್ಯಾಮರಾಗಳನ್ನು ಅಳವಡಿಸಿದ್ದಾರೆ.ಆದ್ದರಿಂದ ಯಾರು ಕಾಂಗ್ರೆಸ್ ಗೆ ಮತ ಹಾಕಿದ್ದಾರೆ ಎನ್ನುವುದು ತಿಳಿಯುತ್ತದೆ ಎಂದು ಬಿಜೆಪಿ ನಾಯಕ ರಮೇಶ್ ಕತರಾ ಹೇಳಿದ್ದಾರೆ.
ಗುಜರಾತಿನಲ್ಲಿ ದಾಹೋಡ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿ ಮಾತನಾಡುತ್ತಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
BJP MLA from Fatehpura, Ramesh Katara: You'll see the photo of Jaswant Sinh Bhabhor (BJP candidate from Dahod) & Lotus symbol on the EVM, look for that & press the button. There should not be any room for error as Modi sa'ab has installed cameras this time. #Gujarat (15.04) (1/2) pic.twitter.com/bEKEYRIa4R
— ANI (@ANI) April 16, 2019
" ನೀವು ಮತಯಂತ್ರದಲ್ಲಿ ಜಸ್ವಂತ್ ಸಿಂಗ್ ಬಾಬೋರ್ ಅವರ ಫೋಟೋ ಮತ್ತು ಕಮಲದ ಚಿಹ್ನೆಯನ್ನು ನೋಡುತ್ತಿರಿ.ಅದನ್ನು ನೋಡಿ ನೀವು ಬಟನ್ ಒತ್ತಬೇಕು. ಈ ಸಾರಿ ಯಾವುದೇ ತಪ್ಪು ಆಗುವುದಿಲ್ಲ. ಏಕೆಂದರೆ ಮೋದಿ ಸಾಹೇಬ್ ಅವರು ಈ ಬಾರಿ ಕ್ಯಾಮರಾವನ್ನು ಅಳವಡಿಸಿದ್ದಾರೆ" ಎಂದು ಹೇಳಿದ್ದಾರೆ.
BJP MLA from Fatehpura, Ramesh Katara: Who voted for BJP, who for Congress, it can be seen. Aadhaar Card & all cards have your photo now, if there are less votes from your booth then he will come to know who did not cast vote & then you will not get work. #Gujarat (15.04) (2/2) pic.twitter.com/JZT4azsRBD
— ANI (@ANI) April 16, 2019
ಇನ್ನು ಮುಂದುವರೆದು " ಯಾರು ಕಾಂಗ್ರೆಸ್ ಗೆ ಮತ ಹಾಕಿದ್ದಾರೆ ಯಾರು ಬಿಜೆಪಿಗೆ ಹಾಕಿದ್ದಾರೆ ಎನ್ನುವುದು ಈಗ ನೋಡಬಹುದಾಗಿದೆ.ಈಗ ಎಲ್ಲ ಆದಾರ್ ಕಾರ್ಡ್ ಹಾಗೂ ಗುರುತಿನ ಚೀಟಿಗಳು ನಿಮ್ಮ ಫೋಟೋವನ್ನು ಹೊಂದಿವೆ. ಒಂದು ವೇಳೆ ನಿಮ್ಮ ಬೂತನಲ್ಲಿ ಕೆಲವೇ ಮಾತದಾರರಿದ್ದರೆ ಯಾರು ಮತ ಚಲಾಯಿಸಿಲ್ಲ ಎನ್ನುವುದು ತಿಳಿಯುತ್ತದೆ.ಆಗ ನಿಮಗೆ ಉದ್ಯೋಗ ಸಿಗುವುದಿಲ್ಲ" ವೆಂದು ಹೇಳಿದ್ದಾರೆ.
ಈಗ ಇವರ ಹೇಳಿಕೆಗೆ ಪ್ರತಿಪಕ್ಷಗಳು ಕಿಡಿಕಾರಿವೆ. ಲಾಲೂ ಪ್ರಸಾದ್ ಯಾದವ್ ಟ್ವೀಟ್ ಮಾಡಿ "ಅಸಹಾಯಕ ಹಾಗೂ ಧ್ವನಿ ಇಲ್ಲದ ಜನರಿಗೆ ಹೀಗೆ ಮತ ಹಾಕಲು ಹೇಳುತ್ತಿದ್ದಾರೆ. ಇಂತಹ ವಿಷಯಗಳು ಪರಿಣಾಮ ಬೀರುತ್ತವೆ ಎಂದು ಹೇಳಿದ್ದಾರೆ.