ದೆಹಲಿ ಕೆಂಪುಕೋಟೆಯಲ್ಲಿ ನೇತಾಜಿ ಮ್ಯೂಸಿಯಂ ಉದ್ಘಾಟಿಸಿದ ಪ್ರಧಾನಿ ಮೋದಿ

ನೇತಾಜಿ ಮ್ಯೂಸಿಯಂನಲ್ಲಿ ಸುಭಾಷ್ ಚಂದ್ರ ಬೋಸ್ ಬಳಸುತ್ತಿದ್ದ ಮರದ ಕುರ್ಚಿ ಮತ್ತು ಖಡ್ಗ, ಪದಕಗಳು, ಬ್ಯಾಡ್ಜ್‍ಗಳು, ಸಮವಸ್ತ್ರ ಹಾಗೂ ಸೇನೆಗೆ ಸಂಬಂಧಪಟ್ಟ ಇತರ ಅಪರೂಪದ ವಸ್ತುಗಳನ್ನು ಸಂಗ್ರಹಿಸಿಡಲಾಗಿದೆ.

Last Updated : Jan 23, 2019, 06:18 PM IST
ದೆಹಲಿ ಕೆಂಪುಕೋಟೆಯಲ್ಲಿ ನೇತಾಜಿ ಮ್ಯೂಸಿಯಂ ಉದ್ಘಾಟಿಸಿದ ಪ್ರಧಾನಿ ಮೋದಿ title=
Photo: ANI

ನವದೆಹಲಿ: ಸ್ವಾತಂತ್ರ ಸಂಗ್ರಾಮದ ವೀರ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 122ನೇ ಜನ್ಮ ಜಯಂತಿ ದೆಹಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿ ನಿರ್ಮಿಸಲಾಗಿರುವ ನೇತಾಜಿ ಮ್ಯೂಸಿಯಂ ಅನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಉದ್ಘಾಟಿಸಿದರು. 

ಗಣರಾಜ್ಯೋತ್ಸವಕ್ಕೆ ಕೆಲವೇ ದಿನಗಳಿರುವ ಹಿನ್ನೆಲೆಯಲ್ಲಿ ಯಾದ್-ಎ-ಜಲಿಯನ್ ಮ್ಯೂಸಿಯಂ(ಜಲಿಯನ್‍ವಾಲಾ ಬಾಗ್ ಮತ್ತು ಒಂದನೇ ಮಹಾಯುದ್ಧ ಕುರಿತ ವಸ್ತು ಪ್ರದರ್ಶನಾಲಯ) ಮತ್ತು 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ವಸ್ತು ಪ್ರದರ್ಶನ ಮತ್ತು ಭಾರತೀಯ ಕಲೆ ಕುರಿತ ದೃಶ್ಯ ಕಲಾ ಮ್ಯೂಸಿಯಂಗಳನ್ನೂ ಸಹ ಪ್ರಧಾನಿ ಲೋಕಾರ್ಪಣೆ ಮಾಡಿದರು.

ನೇತಾಜಿ ಮ್ಯೂಸಿಯಂನಲ್ಲಿ ಸುಭಾಷ್ ಚಂದ್ರ ಬೋಸ್ ಬಳಸುತ್ತಿದ್ದ ಮರದ ಕುರ್ಚಿ ಮತ್ತು ಖಡ್ಗ, ಪದಕಗಳು, ಬ್ಯಾಡ್ಜ್‍ಗಳು, ಸಮವಸ್ತ್ರ ಹಾಗೂ ಸೇನೆಗೆ ಸಂಬಂಧಪಟ್ಟ ಇತರ ಅಪರೂಪದ ವಸ್ತುಗಳನ್ನು ಸಂಗ್ರಹಿಸಿಡಲಾಗಿದೆ.

ಇದೇ ಸಂದರ್ಭದಲ್ಲಿ ಮ್ಯೂಸಿಯಂಗೆ ಭೇಟಿ ನೀಡುವವರು ಭಾರತ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಮಾಹಿತಿ ನೀಡುವ ಸಾಕ್ಷ್ಯಚಿತ್ರವನ್ನೂ ವೀಕ್ಷಿಸಬಹುದು. ಈ ಸಾಕ್ಷ್ಯಚಿತ್ರಕ್ಕೆ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಧ್ವನಿ ನೀಡಿದ್ದಾರೆ. 

ಅಲ್ಲದೆ, ಯಾದ್-ಎ-ಜಲಿಯನ್ ಮ್ಯೂಸಿಯಂ 13ನೇ ಏಪ್ರಿಲ್, 1919ರಲ್ಲಿ ನಡೆದ ಜಲಿಯನ್‍ವಾಲಾ ಬಾಗ್ ಘೋರ ಹತ್ಯಾಕಾಂಡದ ಇತಿಹಾಸವನ್ನು ಸಾರುತ್ತದೆ. ಇದಲ್ಲದೆ, ಪಂಜಾಬ್'ನ ಅಮೃತಸರದಲ್ಲಿರುವ ಜಲಿಯನ್ ವಾಲಾಬಾಗ್'ನಲ್ಲಿ ನಿರ್ಮಿಸಲಾದ ಸ್ಮಾರಕದ ಪ್ರತಿಕೃತಿ ಸಹ ದೆಹಲಿಯ ವಸ್ತುಸಂಗ್ರಹಾಲಯದಲ್ಲಿ ಇರಿಸಲಾಗಿದೆ. ಇದು ಬ್ರಿಟಿಷ್ ಸಾಮ್ರಾಜ್ಯಕ್ಕಾಗಿ ವಿಶ್ವ ಸಮರ I ರ ಸಮಯದಲ್ಲಿ ಮಾಡಿದ ಭಾರತೀಯ ಯೋಧರ ವೀರಸಂಪುಟ, ಶೌರ್ಯ ಮತ್ತು ತ್ಯಾಗಗಳನ್ನು ಚಿತ್ರಿಸುತ್ತದೆ. ಅಷ್ಟೇ ಅಲ್ಲದೆ, ಪ್ರವಾಸಿಗರು ಸರೋಜಿನಿ ನಾಯ್ಡು ಅವರು ಯೋಧರ ಕುರಿತು ಬರೆದಿರುವ 'ದಿ ಗಿಫ್ಟ್' ಎಂಬ ಶೀರ್ಷಿಕೆಯ ಕವಿತೆಯನ್ನೂ ಸಹ ಇಲ್ಲಿ ಓದಬಹುದು.
 

Trending News