ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ 'ವಿಶ್ವಾಸಾರ್ಹ ಮಿತ್ರ ಮತ್ತು ನೆರೆಯ' ರಾಷ್ಟ್ರವಾದ ಭೂತಾನ್ ಗೆ ಇಂದಿನಿಂದ ಎರಡು ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ.
ಭೂತಾನ್ ಪ್ರಧಾನಿ ಲೋಟೇ ತ್ಸೆರಿಂಗ್ ಅವರ ಆಹ್ವಾನದ ಮೇರೆಗೆ ಭೂತಾನ್‌ಗೆ ಭೇಟಿ ನೀಡುತ್ತಿದ್ದು, ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸುವ ವಿಷಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಇದೇ ವೇಳೆ ರಾಯಲ್ ವಿಶ್ವವಿದ್ಯಾಲಯದಲ್ಲಿ ಭೂತಾನ್ ಯುವಜನತೆಯೊಂದಿಗೆ ಸಂವಾದ ನಡೆಸಲಿದ್ದೇನೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ.
On 17th and 18th August, I will be in Bhutan for a bilateral visit that reflects the high importance attached to strong relations with our trusted friend and neighbour. I would be taking part in a wide range of programmes during this visit. https://t.co/X4LJXMscAc
— Narendra Modi (@narendramodi) August 16, 2019
ಭೂತಾನ್‌ನಲ್ಲಿ ಜಲ ಯೋಜನೆಯನ್ನು ಉದ್ಘಾಟಿಸಲಿರುವ ಪ್ರಧಾನಿ ಮೋದಿ, 'ನೆರೆಹೊರೆಯ ಮೊದಲ ನೀತಿ'(ನೈಬರ್ ಹುಡ್ ಫಸ್ಟ್)ಗೆ ಒತ್ತು ನೀಡಲಾಗುತ್ತಿದೆ. ಈ ಭೇಟಿಯ ವೇಳೆ ಪ್ರಧಾನಿ ಮೋದಿ ಅವರು ಭೂತಾನ್ ಜಿಗ್ಮೆ ಖೇಸರ್ ನಂಗೆಲ್ ವಾಂಗ್‌ಚಕ್ ಮತ್ತು ಭೂತಾನ್‌ನ ಮಾಜಿ ರಾಜ ಜಿಗ್ಮೆ ಸಿಂಗೇ ವಾಂಗ್‌ಚುಕ್ ಅವರನ್ನು ಭೇಟಿ ಮಾಡಿ ತ್ಸೆರಿಂಗ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ಹೇಳಿಕೆ ತಿಳಿಸಿದೆ.
ಈ ಭೇಟಿಯು ಉಭಯ ದೇಶಗಳ ನಡುವಿನ ಉನ್ನತ ಮಟ್ಟದ ವಿನಿಮಯದ ಸಂಪ್ರದಾಯಕ್ಕೆ ಅನುಗುಣವಾಗಿದ್ದು, ಇದೇ ಸಂದರ್ಭದಲ್ಲಿ ಆರ್ಥಿಕತೆಯಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಮತ್ತು ವೈವಿಧ್ಯಗೊಳಿಸುವ ಬಗ್ಗೆ ಚರ್ಚಿಸಲಾಗುವುದು. ಅಭಿವೃದ್ಧಿ ಸಹಕಾರ, ಜಲವಿದ್ಯುತ್ ಸಹಕಾರ, ಪ್ರಾದೇಶಿಕ ವ್ಯವಹಾರಗಳು ಮತ್ತು ಇತರ ಪರಸ್ಪರ ಸಮಸ್ಯೆಗಳಿಗೆ ಸಹ ಒತ್ತು ನೀಡಲಾಗುವುದು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.