ಮದುವೆ ಸರ್ಟಿಫಿಕೇಟ್ ಇಲ್ಲದ್ದಕ್ಕೆ ಪ್ರಧಾನಿ ಮೋದಿ ಪತ್ನಿಗಿಲ್ಲ ಪಾಸ್ ಪೋರ್ಟ್...!

ಪ್ರಧಾನಿ ನರೇಂದ್ರ ಮೋದಿಯವರ ಪತ್ನಿ ಜಶೋದಬೆನ್ ಮೋದಿಯವರು ಪಾಸ್ ಪೋರ್ಟ್ ಕೋರಿ ಸಲ್ಲಿಸಿದ್ದ ಅರ್ಜಿಗೆ ಗುಜರಾತಿನ ಪ್ರಾದೇಶಿಕ ಪಾಸ್ ಪೋರ್ಟ್ ಕಚೇರಿಯು ಅರ್ಜಿಯನ್ನು ಅಪೂರ್ಣ ಎಂದು ಹಿಂದಿರುಗಿಸಿದೆ ಎನ್ನಲಾಗಿದೆ.

Last Updated : Mar 8, 2020, 07:03 PM IST
ಮದುವೆ ಸರ್ಟಿಫಿಕೇಟ್ ಇಲ್ಲದ್ದಕ್ಕೆ ಪ್ರಧಾನಿ ಮೋದಿ ಪತ್ನಿಗಿಲ್ಲ ಪಾಸ್ ಪೋರ್ಟ್...! title=

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಪತ್ನಿ ಜಶೋದಬೆನ್ ಮೋದಿಯವರು ಪಾಸ್ ಪೋರ್ಟ್ ಕೋರಿ ಸಲ್ಲಿಸಿದ್ದ ಅರ್ಜಿಗೆ ಗುಜರಾತಿನ ಪ್ರಾದೇಶಿಕ ಪಾಸ್ ಪೋರ್ಟ್ ಕಚೇರಿಯು ಅರ್ಜಿಯನ್ನು ಅಪೂರ್ಣ ಎಂದು ಹಿಂದಿರುಗಿಸಿದೆ ಎನ್ನಲಾಗಿದೆ.

ಈ ವಿಚಾರವಾಗಿ ಸುದ್ದಿಗಾರರಿಗೆ ತಿಳಿಸಿರುವ ಪ್ರಾದೇಶಿಕ ಪಾಸ್ಪೋರ್ಟ್ ಅಧಿಕಾರಿ ಜೆಡ್.ಎ ಖಾನ್ ಅವರು ಅರ್ಜಿ ಅಪೂರ್ಣವಾಗಿದೆ ಮತ್ತು ಆದ್ದರಿಂದ ಅದನ್ನು ಸ್ವೀಕರಿಸಲಾಗಿಲ್ಲ ಎಂದು ಹೇಳಿದರು.'ನಾವು ಅರ್ಜಿಯನ್ನು ಸ್ವೀಕರಿಸಿಲ್ಲ ಏಕೆಂದರೆ ಮದುವೆ ಪ್ರಮಾಣಪತ್ರ ಅಥವಾ ಸಂಗಾತಿಯೊಂದಿಗೆ ಜಂಟಿ ಅಫಿಡವಿಟ್ ಇಲ್ಲ' ಎಂದು ಖಾನ್ ಹೇಳಿದರು, 'ಪಾಸ್ಪೋರ್ಟ್ ಪಡೆಯಲು ಮದುವೆ ಪ್ರಮಾಣಪತ್ರ ಅಥವಾ ಜಂಟಿ ಅಫಿಡವಿಟ್ ಅಗತ್ಯ ದಾಖಲೆಯಾಗಿದೆ' ಎಂದು ಹೇಳಿದರು.

ಶ್ರೀಮತಿ ಮೋದಿ ಅವರು ವಿದೇಶಕ್ಕೆ ಹೋಗಿ ಅವರ ಕುಟುಂಬ ಸ್ನೇಹಿತರು ಮತ್ತು ಸಂಬಂಧಿಕರನ್ನು ಭೇಟಿ ಮಾಡಲು ಪಾಸ್ಪೋರ್ಟ್ ಬಯಸಿದ್ದರು.'ನಾವು ವಿದೇಶದಲ್ಲಿ ಅನೇಕ ಕುಟುಂಬ ಸ್ನೇಹಿತರನ್ನು ಹೊಂದಿದ್ದೇವೆ ಮತ್ತು ಅವರು ಅವರನ್ನು ಭೇಟಿ ಮಾಡಲು ಕೇಳಿಕೊಂಡರು, ಆದ್ದರಿಂದ ಅವರು ಪಾಸ್ಪೋರ್ಟ್ಗಾಗಿ ಅರ್ಜಿ ಸಲ್ಲಿಸಿದ್ದರು ಆದರೆ ಅರ್ಜಿಯನ್ನು ತಿರಸ್ಕರಿಸಲಾಗಿದೆ" ಎಂದು ಅವರ ಸಹೋದರ ಅಶೋಕ್ ಮೋದಿ ಹೇಳಿದ್ದಾರೆ.ಈಗ ಪ್ರಧಾನಿ ಮೋದಿ ಪತ್ನಿ ಜಶೋದಾಬೇನ್ ಪಾಸ್ಪೋರ್ಟ್ ಪಡೆಯಲು ಕಾನೂನು ಆಯ್ಕೆಗಳನ್ನು ಹುಡುಕಬಹುದು, ಇದು ದೇಶದ ಪ್ರತಿಯೊಬ್ಬ ನಾಗರಿಕರ ಹಕ್ಕು ಎಂದು ಅವರು ಹೇಳಿದ್ದಾರೆ.

ಈ ಹಿಂದೆ ಅವರು ತಮ್ಮ ಭದ್ರತೆ ಮತ್ತು ಭಾರತ ಸರ್ಕಾರದ ಭದ್ರತೆಯ ವಿವರಗಳ ಕೋರಿ ಮಾಹಿತಿ ಹಕ್ಕು (ಆರ್‌ಟಿಐ) ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಆರ್‌ಟಿಐ ಅಡಿಯಲ್ಲಿ ಬಹಿರಂಗಪಡಿಸದ ಭದ್ರತೆಗೆ ಸಂಬಂಧಿಸಿದ ವಿಷಯವನ್ನು ತಿಳಿಸಲು ಮೆಹ್ಸಾನಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಮಾಹಿತಿ ನೀಡಲು ನಿರಾಕರಿಸಿದ್ದರು. ಸಂಸತ್ತಿನ ಚುನಾವಣೆಯ ಸಂದರ್ಭದಲ್ಲಿ 2014 ರಲ್ಲಿ ಸಲ್ಲಿಸಿದ ಚುನಾವಣಾ ಅಫಿಡವಿಟ್‌ನಲ್ಲಿ ಶ್ರೀ ನರೇಂದ್ರ ಮೋದಿ ಅವರು ಜಶೋದಾಬೆನ್ ಅವರ ಹೆಸರನ್ನು ತಮ್ಮ ಸಂಗಾತಿಯೆಂದು ಉಲ್ಲೇಖಿಸಿದ್ದರು. ರಾಷ್ಟ್ರೀಯ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿ ಮೋದಿ ಪ್ರಧಾನಿಯಾದ ನಂತರ, ನಾಲ್ಕು ಪೊಲೀಸ್ ಕಾನ್ಸ್ಟೇಬಲ್ ಗಳನ್ನು ಜಶೋದಾಬೆನ್ ಅವರ ನಿವಾಸಕ್ಕೆ ನಿಯೋಜಿಸಲಾಯಿತು. ಜಶೋದಾಬೆನ್ ನಿವೃತ್ತ ಶಾಲಾ ಶಿಕ್ಷಕರಾಗಿದ್ದು, ತಮ್ಮ ಸಹೋದರ ಅಶೋಕ್ ಮೋದಿ ಅವರೊಂದಿಗೆ ಉತ್ತರ ಗುಜರಾತ್‌ನ ಹಳ್ಳಿಯಲ್ಲಿ ವಾಸಿಸುತ್ತಿದ್ದಾರೆ.

Trending News