Video: ಆಂಬ್ಯುಲೆನ್ಸ್ ಗೆ ದಾರಿ ಮಾಡಲು 2 ಕಿಮೀ ಓಡಿ ಟ್ರಾಫಿಕ್ ಕ್ಲಿಯರ್ ಮಾಡಿದ ಪೊಲೀಸ್ ಪೇದೆ..!

ಆಂಬುಲೆನ್ಸ್ಗೆ ದಾರಿ ಮಾಡಿಕೊಡುವ ಸಲುವಾಗಿ ಸಂಚಾರಿ ಠಾಣೆ ಕಾನ್ಸ್ಟೇಬಲ್ ಒಬ್ಬರು 2 ಕಿಲೋಮೀಟರ್(km) ವರೆಗೆ ಓಡಿ ಟ್ರಾಫಿಕ್ ಕ್ಲಿಯರ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.ಈ ಅಪರೂಪದ ಘಟನೆ ಹೈದರಾಬಾದ್ ನ ಅಬಿಡ್ಸ್ ಜಿಪಿಒ ಜಂಕ್ಷನ್ ಬಳಿ ನಡೆದಿದೆ.

Last Updated : Nov 5, 2020, 07:15 PM IST
Video: ಆಂಬ್ಯುಲೆನ್ಸ್ ಗೆ ದಾರಿ ಮಾಡಲು 2 ಕಿಮೀ ಓಡಿ ಟ್ರಾಫಿಕ್ ಕ್ಲಿಯರ್ ಮಾಡಿದ ಪೊಲೀಸ್ ಪೇದೆ..! title=
Photo Courtesy: Twitter

ನವದೆಹಲಿ: ಆಂಬುಲೆನ್ಸ್ಗೆ ದಾರಿ ಮಾಡಿಕೊಡುವ ಸಲುವಾಗಿ ಸಂಚಾರಿ ಠಾಣೆ ಕಾನ್ಸ್ಟೇಬಲ್ ಒಬ್ಬರು 2 ಕಿಲೋಮೀಟರ್(km) ವರೆಗೆ ಓಡಿ ಟ್ರಾಫಿಕ್ ಕ್ಲಿಯರ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.ಈ ಅಪರೂಪದ ಘಟನೆ ಹೈದರಾಬಾದ್ ನ ಅಬಿಡ್ಸ್ ಜಿಪಿಒ ಜಂಕ್ಷನ್ ಬಳಿ ನಡೆದಿದೆ.

ಪೊಲೀಸ್ ಪೇದೆ ಹೆಸರು ಜಿ. ಬಾಬ್ಜಿ ಎಂಬವರು ಆಂಬುಲೆನ್ಸ್ನಲ್ಲಿದ್ದ ರೋಗಿಯ ಪ್ರಾಣ ಉಳಿಸುವುದಕ್ಕಾಗಿ 2 ಕಿಲೋಮೀಟರ್ವರೆಗೆ ಓಡಿ ಸಂಚಾರ ದಟ್ಟಣೆ ನಿಯಂತ್ರಣ ಮಾಡಿದ್ದಾರೆ.ಈ ಘಟನೆ ಸೋಮವಾರ ನಡೆದಿದ್ದು ಪೊಲೀಸರು ಈ ವಿಡಿಯೋವನ್ನ ಬುಧವಾರ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಬಳಿಕ ವಿಚಾರ ವೈರಲ್ ಆಗಿದೆ.ಅಂದಹಾಗೆ ಈ ಪೊಲೀಸ್ ಪೇದೆ ಆಂಬುಲೆನ್ಸ್ಗೆ ದಾರಿ ಮಾಡಿಕೊಡುವುದಕ್ಕಾಗಿ ತನ್ನ ಠಾಣಾ ವ್ಯಾಪ್ತಿಯನ್ನ ಮೀರಿ ಸಂಚಾರ ದಟ್ಟಣೆ ನಿಯಂತ್ರಿಸಿದ್ದಾರಂತೆ.

ಟ್ರಾಫಿಕ್ ಕಾನ್ಸಸ್ಟೇಬಲ್ ಅವರ ಕಾರ್ಯವನ್ನು ಶ್ಲಾಘಿಸಿ ಹೈದರಾಬಾದ್‍ನ ಎಸಿಪಿ (ಟ್ರಾಫಿಕ್) ಅನಿಲ್ ಕುಮಾರ್ ಹಾಗೂ ಇತರ ಹಿರಿಯ ಪೊಲೀಸ್ ಅಧಿಕಾರಿಗಳು ಟ್ವೀಟ್ ಮಾಡಿದ್ದಾರೆ.ಈ ವಿಚಾರವಾಗಿ ಮಾತನಾಡಿದ ಬಾಬ್ಜಿ" ನನಗೆ ಆಂಬುಲೆನ್ಸ್ನಲ್ಲಿ ಇದ್ದ ರೋಗಿಯ ಪರಿಚಯವಿರಲಿಲ್ಲ. ಆದರೂ ಒಂದು ಜೀವ ಕಾಪಾಡಬೇಕು ಅಂತಾ ಈ ಪ್ರಯತ್ನ ಮಾಡಿದೆ" ಅಂತಾ ಹೇಳಿದ್ದಾರೆ.

Trending News