ಆಂಬ್ಯುಲೆನ್ಸ್ ಸಿಗದೆ ಮೋಟಾರ್‌ಸೈಕಲ್‌ನಲ್ಲಿ ಆಸ್ಪತ್ರೆ ತಲುಪಿದ ಗರ್ಭಿಣಿ ಮಹಿಳೆ

ಗರ್ಭಿಣಿ ಮಹಿಳೆಯ ಸ್ಥಿತಿ ಎಷ್ಟು ಗಂಭೀರವಾಗಿತ್ತೆಂದರೆ ಆಕೆಗೆ ಒಂದು ಹೆಜ್ಜೆ ಇಡಲೂ ಕೂಡ ಆಗುತ್ತಿರಲಿಲ್ಲ ಎನ್ನಲಾಗಿದೆ.

Last Updated : Jun 27, 2019, 03:28 PM IST
ಆಂಬ್ಯುಲೆನ್ಸ್ ಸಿಗದೆ ಮೋಟಾರ್‌ಸೈಕಲ್‌ನಲ್ಲಿ ಆಸ್ಪತ್ರೆ ತಲುಪಿದ ಗರ್ಭಿಣಿ ಮಹಿಳೆ title=

ಲತೇಹರ್: ದೇಶದ ಜನತೆಗೆ ಉತ್ತಮ ಆರೋಗ್ಯ ನೀಡುವ ದೃಷ್ಟಿಯಿಂದ ಸರ್ಕಾರ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ದೇಶದ ಹಲವು ಭಾಗಗಳಲ್ಲಿ ಜನರಿಗೆ ಆಸ್ಪತ್ರೆ ತಲುಪಲು ಬೇಕಾದ ಒಂದು ಕನಿಷ್ಠ ಸೌಕರ್ಯವೂ ಇಲ್ಲದ ಸ್ಥಿತಿ ಇನ್ನೂ ಇದೆ. ಇದಕ್ಕೆ ನಿದರ್ಶನ ಎಂಬಂತೆ ಆಂಬ್ಯುಲೆನ್ಸ್ ಸಿಗದ ಕಾರಣ ಗರ್ಭಿಣಿ ಮಹಿಳೆಯನ್ನು 10 ಕಿ.ಮೀ ವರೆಗೆ ಮೋಟಾರ್‌ಸೈಕಲ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ದ ಘಟನೆ ಜಾರ್ಖಂಡ್‌ನ ಲತೇಹರ್‌ನಲ್ಲಿ ನಡೆದಿದೆ.

ಕಮತಾ ಪಂಚಾಯತ್‌ನ ಚತುವಾಗ್ ಗ್ರಾಮದ ಟೋಲಾ ಚಿರೋಖಾದ್ ನಿವಾಸಿ ಕಮಲ್ ಗಂಜು ಅವರ ಪತ್ನಿ ಶಾಂತಿ ದೇವಿ 10 ಕಿ.ಮೀ ವರೆಗೆ ಮೋಟಾರ್‌ಸೈಕಲ್‌ನಲ್ಲಿ ಆಸ್ಪತ್ರೆಗೆ ತೆರಳಿದ ಮಹಿಳೆ.

ವಾಸ್ತವವಾಗಿ, ಕಳೆದ ಮೂರು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಶಾಂತಿ ದೇವಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಆದರೆ ಗ್ರಾಮದಲ್ಲಿ ಆಸ್ಪತ್ರೆಯ ವ್ಯವಸ್ಥೆ ಇಲ್ಲದ ಕಾರಣ ಪಕ್ಕದ ಪಟ್ಟಣಕ್ಕೆ ಕರೆದೊಯ್ಯಲು ಆಂಬ್ಯುಲೆನ್ಸ್ ಗಾಗಿ ಸಾಕಷ್ಟು ಪ್ರಯತ್ನಿಸಲಾಗಿದೆ.

ಮೊದಲೇ ಜ್ವರದಿಂದ ಬಳಲುತ್ತಿದ್ದ ಗರ್ಭಿಣಿ ಮಹಿಳೆ ರಕ್ತ ಹೀನತೆಯಿಂದ ಕೂಡ ಬಳಲುತ್ತಿದ್ದರು ಎನ್ನಲಾಗಿದ್ದು, ಸಾವು-ಬದುಕಿನ ಹೋರಾಟದಲ್ಲಿದ್ದ ಮಹಿಳೆಯ ಜೀವರಕ್ಷಣೆಗಾಗಿ ಮೋಟಾರ್‌ಸೈಕಲ್‌ನಲ್ಲಿ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಹೇಳಲಾಗಿದೆ.
 

Trending News