ನವದೆಹಲಿ: ಶೆಚೆಲ್ಸ್ ಅಧ್ಯಕ್ಷ ಡೇನಿ ಫೌರ್ ಸೋಮವಾರದಂದು ಭಾರತಕ್ಕೆ ಮೊದಲ ದ್ವಿಪಕ್ಷೀಯ ಪ್ರವಾಸದಲ್ಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹೈದರಾಬಾದ್ ಹೌಸ್ ಆಯೋಜಿಸಿದ್ದ ಭೋಜನಕೂಟದಲ್ಲಿ 'ಮೊನ್ ಪೀ ಸ' ಎಂಬ ಹಾಡನ್ನು ಹಾಡಿ ರಂಜಿಸಿದರು.
Striking the notes of friendship! Impressive singing by the President of #Seychelles Danny Faure of 'O Mon Pei Sesel' at the lunch hosted by PM @narendramodi at Hyderabad House in New Delhi. @SeychellesMFA @hci_seychelles pic.twitter.com/T9sXSOw5dJ
— Raveesh Kumar (@MEAIndia) June 25, 2018
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಅವರು ಈಗ ಶೆಚೆಲ್ಸ್ ಅಧ್ಯಕ್ಷ ಹಾಡಿರುವ ವೀಡಿಯೋವೊಂದನ್ನು ಅವರು ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ. ಡೆನಿ ಫೌರ್ ಅವರು ಜೂನ್ 22 ರಂದು ಆರು ದಿನಗಳ ಭೇಟಿಗಾಗಿ ಭಾರತಕ್ಕೆ ಪ್ರವಾಸವನ್ನು ಬೆಳೆಸಿದ್ದಾರೆ.
ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ ಶೆಚಲ್ಸ್ ಅಧ್ಯಕ್ಷ ಫೌರ್ ಶಿಕ್ಷಣ, ಮಾಹಿತಿ ತಂತ್ರಜ್ಞಾನ, ಸಂಸ್ಕೃತಿ. ಡಾಟಾ ಹಂಚಿಕೆ ಕುರಿತಾದ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.