ಪಕ್ಷದ ಸಭೆಯಲ್ಲಿ ಹೈದರಾಬಾದ್ ನ್ನು ಭಾಗ್ಯನಗರ ಎಂದು ಉಲ್ಲೇಖಿಸಿದ ಪ್ರಧಾನಿ ಮೋದಿ

ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲು ಭಾನುವಾರದಂದು ಹೈದರಾಬಾದ್‌ಗೆ ಆಗಮಿಸಿದ ಪ್ರಧಾನಿ ಮೋದಿ ತಮ್ಮ ಭಾಷಣದ ವೇಳೆ ಹೈದರಾಬಾದ್ ನ್ನು ಭಾಗ್ಯನಗರ ಎಂದು ಉಲ್ಲೇಖಿಸಿದ್ದಾರೆ.

Written by - Zee Kannada News Desk | Last Updated : Jul 3, 2022, 09:48 PM IST
  • ಉತ್ತಮ ಆಡಳಿತ ಜನಪರ ಮತ್ತು ಕ್ರಿಯಾಶೀಲವಾಗಿದೆ.ಆದ್ದರಿಂದಾಗಿ ಈಗ ಬಿಜೆಪಿ ಅಧಿಕಾರದಲ್ಲಿದೆ ಮತ್ತು ಜನರು ನಮ್ಮನ್ನು ನಂಬಿದ್ದಾರೆ.
  • ನಾವು ಸ್ನೇಹ ಯಾತ್ರೆಯನ್ನು ಕೈಗೊಂಡು ಸಮಾಜದ ಎಲ್ಲಾ ವರ್ಗಗಳನ್ನು ತಲುಪಬೇಕು 'ಎಂದು ಪ್ರಧಾನಿ ಹೇಳಿದರು.
ಪಕ್ಷದ ಸಭೆಯಲ್ಲಿ ಹೈದರಾಬಾದ್ ನ್ನು ಭಾಗ್ಯನಗರ ಎಂದು ಉಲ್ಲೇಖಿಸಿದ ಪ್ರಧಾನಿ ಮೋದಿ title=
screengrab

ಹೈದರಾಬಾದ್ : ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲು ಭಾನುವಾರದಂದು ಹೈದರಾಬಾದ್‌ಗೆ ಆಗಮಿಸಿದ ಪ್ರಧಾನಿ ಮೋದಿ ತಮ್ಮ ಭಾಷಣದ ವೇಳೆ ಹೈದರಾಬಾದ್ ನ್ನು ಭಾಗ್ಯನಗರ ಎಂದು ಉಲ್ಲೇಖಿಸಿದ್ದಾರೆ.

ಭಾರತವನ್ನು ಒಂದುಗೂಡಿಸುವ ಅಭಿಯಾನವನ್ನು ಸರ್ದಾರ್ ಪಟೇಲ್ ಅವರು ಭಾಗ್ಯನಗರದಲ್ಲಿ ಪ್ರಾರಂಭಿಸಿದರು ಎಂದು ಪ್ರಧಾನಿ ಮೋದಿ ಭಾಷಣದ ವೇಳೆ ಹೇಳಿದ್ದಾರೆ.ಇದೆ ವೇಳೆ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ವಿರುದ್ಧ ಟೀಕಾಪ್ರಹಾರ ನಡೆಸುತ್ತಾ ವಂಶ ರಾಜಕಾರಣವನ್ನು ಪೋಷಿಸುವ ಪಕ್ಷಗಳಿಗೆ ಅಂತ್ಯ ಹಾಡುವ ಸಮಯ ಬಂದಿದೆ, ಯುವಕರು ಅಂತಹ ರಾಜಕೀಯವನ್ನು ತೀರಸ್ಕರಿಸುತ್ತಾರೆ ಎಂದು ಹೇಳಿದರು.

'ದೇಶವು ವಂಶ ರಾಜಕೀಯ ಮತ್ತು ವಂಶದ ರಾಜಕೀಯ ಪಕ್ಷಗಳಿಂದ ಬೇಸತ್ತಿದೆ.ಅಂತಹ ಪಕ್ಷಗಳು ಹೆಚ್ಚು ಕಾಲ ಉಳಿಯುವುದು ಕಷ್ಟ. ಭಾರತವನ್ನು ದೀರ್ಘಕಾಲ ಆಳಿದ ಪಕ್ಷಗಳು ಈಗ ಅವನತಿಯಲ್ಲಿವೆ.ನಾವು ಅವರನ್ನು ಅಪಹಾಸ್ಯ ಮಾಡಬಾರದು ಆದರೆ ಅವರ ತಪ್ಪುಗಳಿಂದ ಕಲಿಯಬೇಕು" ಎಂದು ಅವರು ಹೇಳಿದರು. 

'ನಮ್ಮ ಪಕ್ಷದ ಅಭಿವೃದ್ಧಿ ಕಾರ್ಯಸೂಚಿ, ಕಳೆದ 8 ವರ್ಷಗಳಲ್ಲಿ ಜನಪರ ಪ್ರಯತ್ನಗಳು ಮತ್ತು ಜನರೊಂದಿಗೆ ನಮ್ಮ ಸಂಪರ್ಕ ಕಲ್ಪಿಸುವ ಕೆಲಸವನ್ನು ಮಾಡಲಾಗಿದೆ ಅದನ್ನು ಇನ್ನಷ್ಟು ತೀವ್ರಗೊಳಿಸಬೇಕು ಎಂದು ಅವರು ಹೇಳಿದರು.

"ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರ ಹತ್ಯೆಯಾಗುತ್ತಿದೆ.ಉತ್ತಮ ಆಡಳಿತ ಜನಪರ ಮತ್ತು ಕ್ರಿಯಾಶೀಲವಾಗಿದೆ.ಆದ್ದರಿಂದಾಗಿ ಈಗ ಬಿಜೆಪಿ ಅಧಿಕಾರದಲ್ಲಿದೆ ಮತ್ತು ಜನರು ನಮ್ಮನ್ನು ನಂಬಿದ್ದಾರೆ. ನಾವು ಸ್ನೇಹ ಯಾತ್ರೆಯನ್ನು ಕೈಗೊಂಡು ಸಮಾಜದ ಎಲ್ಲಾ ವರ್ಗಗಳನ್ನು ತಲುಪಬೇಕು "ಎಂದು ಪ್ರಧಾನಿ ಹೇಳಿದರು.

'ಹೈದರಾಬಾದ್ ಭಾಗ್ಯನಗರ ನಮಗೆಲ್ಲರಿಗೂ ಮಹತ್ವದ್ದಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಸರ್ದಾರ್ ಪಟೇಲ್ ಅವರು ಏಕೀಕೃತ ಭಾರತದ ಅಡಿಪಾಯವನ್ನು ಇಟ್ಟುಕೊಂಡಿದ್ದಾರೆ ಮತ್ತು ಈಗ ಅದನ್ನು ಮತ್ತಷ್ಟು ಕೊಂಡೊಯ್ಯುವ ಜವಾಬ್ದಾರಿ ಬಿಜೆಪಿಯ ಮೇಲಿದೆ" ಎಂದು ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ ಉಲ್ಲೇಖಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News