ವನ್ಯಜೀವಿಯ 'ಡಿಸ್ಕವರಿ'ಯಲ್ಲಿ ಮೋದಿ ! ಏನಿದು ಪ್ರಧಾನಿಯ ಹೊಸ ಅವತಾರ ?

ಮುಂದಿನ ತಿಂಗಳು ಡಿಸ್ಕವರಿ ಚಾನೆಲ್‌ನಲ್ಲಿ  ಜನಪ್ರಿಯ ಕಾರ್ಯಕ್ರಮವಾದ "ಮ್ಯಾನ್ ವರ್ಸಸ್ ವೈಲ್ಡ್" ಎಪಿಸೋಡ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಹಸಿ ಬಿಯರ್ ಗ್ರಿಲ್ಸ್ ಅವರೊಂದಿಗೆ ಸೇರಿಕೊಳ್ಳಲಿದ್ದಾರೆ.

Last Updated : Jul 29, 2019, 06:51 PM IST
ವನ್ಯಜೀವಿಯ 'ಡಿಸ್ಕವರಿ'ಯಲ್ಲಿ ಮೋದಿ ! ಏನಿದು ಪ್ರಧಾನಿಯ ಹೊಸ ಅವತಾರ ?  title=
Photo courtesy: Discovery channel

ನವದೆಹಲಿ: ಮುಂದಿನ ತಿಂಗಳು ಡಿಸ್ಕವರಿ ಚಾನೆಲ್‌ನಲ್ಲಿ  ಜನಪ್ರಿಯ ಕಾರ್ಯಕ್ರಮವಾದ "ಮ್ಯಾನ್ ವರ್ಸಸ್ ವೈಲ್ಡ್" ಎಪಿಸೋಡ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಹಸಿ ಬಿಯರ್ ಗ್ರಿಲ್ಸ್ ಅವರೊಂದಿಗೆ ಸೇರಿಕೊಳ್ಳಲಿದ್ದಾರೆ.

180 ದೇಶಗಳ ಜನರು ಪ್ರಧಾನಿ ಮೋದಿಯವರ ಅಪರೂಪದ ಭಾಗವನ್ನು ನೋಡಲಿದ್ದಾರೆ. ಅವರು ಭಾರತೀಯ ಪ್ರಾಣಿಗಳ ಸಂರಕ್ಷಣೆ ಹಾಗೂ ಪರಿಸರದಲ್ಲಾಗುವ ಬದಲಾವಣೆಗಳ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ ಎಂದು ಎಡ್ವರ್ಡ್ ಮೈಕೆಲ್ ಗ್ರಿಲ್ಸ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟಿಸರ್ ಒಂದನ್ನು ಹಂಚಿಕೊಂಡಿದ್ದಾರೆ. ಇದು ಆಗಸ್ಟ್ 12 ರಂದು ರಾತ್ರಿ 9 ಗಂಟೆಗೆ ಪ್ರದರ್ಶನಗೊಳ್ಳಲಿದೆ.

ಡಿಸ್ಕವರಿಯ ಹೇಳಿಕೆಯ ಪ್ರಕಾರ, ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನದಲ್ಲಿ ಚಿತ್ರೀಕರಿಸಲಾದ ವಿಶೇಷ ಪ್ರಸಂಗವು ವನ್ಯಜೀವಿ ಸಂರಕ್ಷಣೆಯ ಮೇಲೆ ಬೆಳಕು ಚೆಲ್ಲುತ್ತದೆ ಎನ್ನಲಾಗಿದೆ. 45 ಸೆಕೆಂಡುಗಳ ವಿಡಿಯೋದಲ್ಲಿ, 68 ವರ್ಷದ ಪಿಎಂ ಮೋದಿ ಅವರು ಬ್ರಿಟಿಷ್ ಸಾಹಸಿಗರೊಂದಿಗೆ ಕಾಡಿನಲ್ಲಿ ನಡೆದುಕೊಂಡು ಹೋಗುತ್ತಿದ್ದಾರೆ ಮತ್ತು ರಾಫ್ಟಿಂಗ್‌ಗೆ ಸಿದ್ಧರಾಗುತ್ತಿದ್ದಂತೆ ಫ್ಲಾಸ್ಕ್ ಹಿಡಿದಿದ್ದಾರೆ. "ನೀವು ಭಾರತದ ಅತ್ಯಂತ ಪ್ರಮುಖ ವ್ಯಕ್ತಿ. ನಿಮ್ಮನ್ನು ಜೀವಂತವಾಗಿರಿಸುವುದು ನನ್ನ ಕೆಲಸ" ಎಂದು ಬಿಯರ್ ಗ್ರಿಲ್ಸ್ ಪಿಎಂ ಮೋದಿಗೆ ಹೇಳುತ್ತಾರೆ.

"ನಾನು ಹಲವಾರು ವರ್ಷಗಳಿಂದ, ಪ್ರಕೃತಿಯ ನಡುವೆ, ಪರ್ವತಗಳಲ್ಲಿ ಮತ್ತು ಕಾಡುಗಳಲ್ಲಿ ಜೀವಿಸಿದ್ದೇನೆ. ಈ ವರ್ಷಗಳು ನನ್ನ ಜೀವನದ ಮೇಲೆ ಶಾಶ್ವತ ಪರಿಣಾಮ ಬೀರುತ್ತವೆ. ಆದ್ದರಿಂದ ರಾಜಕೀಯವನ್ನು ಮೀರಿದ ಜೀವನವನ್ನು ಕೇಂದ್ರೀಕರಿಸುವ ವಿಶೇಷ ಕಾರ್ಯಕ್ರಮದ ಬಗ್ಗೆ ನನ್ನನ್ನು ಕೇಳಿದಾಗ ಮತ್ತು ಅದೂ ಪ್ರಕೃತಿಯ ಮಧ್ಯೆ, ನಾನು ಅದರಲ್ಲಿ ಪಾಲ್ಗೊಳ್ಳಲು ಆಸಕ್ತಿ ಮತ್ತು ಒಲವು ತೋರಿಸಿದೆ 'ಎಂದು ಪ್ರಧಾನಿ ಮೋದಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

"ನನಗೆ, ಈ ಪ್ರದರ್ಶನವು ವಿಶ್ವದ ಭಾರತದ ಶ್ರೀಮಂತ ಪರಿಸರ ಪರಂಪರೆ ಮತ್ತು ಪರಿಸರ ಸಂರಕ್ಷಣೆಯ ಪ್ರಾಮುಖ್ಯತೆ ಮತ್ತು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುವ ಪ್ರದರ್ಶನವನ್ನು ತೋರಿಸಲು ಉತ್ತಮ ಅವಕಾಶವನ್ನು ಒದಗಿಸುತ್ತದೆ. ಇದು ಕಾಡಿನಲ್ಲಿ ಮತ್ತೊಮ್ಮೆ ಸಮಯ ಕಳೆಯುವ ಒಂದು ಉತ್ತಮ ಅನುಭವವಾಗಿದೆ, ಈ ಬಾರಿ ಬಿಯರ್, ಅಗಾದ ಶಕ್ತಿ ಮತ್ತು ಪ್ರಕೃತಿಯನ್ನು ಅದರ ಶುದ್ಧತೆಯಲ್ಲಿ ಅನುಭವಿಸುವ ಅನ್ವೇಷಣೆಯಿಂದ ಆಶೀರ್ವದಿಸಲ್ಪಟ್ಟಿದ್ದಾರೆ "ಎಂದು ಅವರು ಹೇಳಿದರು.

 

Trending News