IND vs ENG Semi-finals, Virat Kohli: T20 ವಿಶ್ವಕಪ್ 2024ನಲ್ಲಿ ವಿರಾಟ್ ಕೊಹ್ಲಿ ಸದ್ದು ಮಾಡಿಯೇ ಇಲ್ಲ. ಈ ಟೂರ್ನಿಯಲ್ಲಿ ಫಾರ್ಮ್ ಕಾಯ್ದುಕೊಳ್ಳಲು ಕೊಹ್ಲಿ ಹೋರಾಡುತ್ತಿದ್ದಾರೆ. ಇದೀಗ ಇಂದು ಸೆಮಿಫೈನಲ್’ನಲ್ಲಿ ಇಂಗ್ಲೆಂಡ್ ವಿರುದ್ಧವೂ ಕಿಂಗ್ ಕೊಹ್ಲಿ ಅವರ ಬ್ಯಾಟ್ ಕೆಲಸ ಮಾಡಲಿಲ್ಲ.
ಇದನ್ನೂ ಓದಿ: ಕೆಂಪು ಬಣ್ಣದ ಈ ಸೊಪ್ಪು ಮಧುಮೇಹಿಗಳಿಗೆ ಅಮೃತವಿದ್ದಂತೆ: ಬ್ಲಡ್ ಶುಗರ್ ನಾರ್ಮಲ್ ಮಾಡುತ್ತೆ!
ಮಳೆಯಿಂದಾಗಿ ಪಂದ್ಯದಲ್ಲಿ ಟಾಸ್ ಸುಮಾರು 1.30 ಗಂಟೆ ತಡವಾಯಿತು. ಆ ಬಳಿಕ ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಕೊಹ್ಲಿ, ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಓಪನರ್ಸ್ ಆಗಿ ಬಂದರು. ಆದರೆ ಮೂರನೇ ಓವರ್’ನಲ್ಲಿ ವಿರಾಟ್ ಪೆವಿಲಿಯನ್’ಗೆ ಮರಳಿದರು. ರೀಸ್ ಟೋಪ್ಲಿ ಎಸೆದ ಈ ಓವರ್’ನ ಎರಡನೇ ಎಸೆತದಲ್ಲಿ ಅದ್ಭುತ ಸಿಕ್ಸರ್ ಬಾರಿಸಿದ್ದರೂ ಸಹ, ಆ ಬಳಿಕ ನಾಲ್ಕನೇ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು.
ಕೊಹ್ಲಿ ತಮ್ಮ ವೃತ್ತಿಜೀವನದಲ್ಲಿ ನಾಲ್ಕನೇ ಬಾರಿಗೆ ಟಿ20 ವಿಶ್ವಕಪ್’ನ ಸೆಮಿಫೈನಲ್’ನಲ್ಲಿ ಬ್ಯಾಟಿಂಗ್’ಗೆ ಆಗಮಿಸಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ವಿಫಲರಾಗಿರುವುದು. ಇದಕ್ಕೂ ಮುನ್ನ ಕೊಹ್ಲಿ ಮೂರು ಬಾರಿ 50ಕ್ಕೂ ಹೆಚ್ಚು ರನ್ ಗಳಿಸಿದ್ದರು. 2014 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ 44 ಎಸೆತಗಳಲ್ಲಿ ಅಜೇಯ 72 ರನ್ ಗಳಿಸಿದರು. ಅದರ ನಂತರ, 2016 ರಲ್ಲಿ, ವೆಸ್ಟ್ ಇಂಡೀಸ್ ವಿರುದ್ಧ 47 ಎಸೆತಗಳಲ್ಲಿ 89 ರನ್’ಗಳ ಅಜೇಯ ಇನ್ನಿಂಗ್ಸ್ ಅನ್ನು ಆಡಿದ್ದರು. 2022ರ ಟಿ20 ವಿಶ್ವಕಪ್’ನ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ 40 ಎಸೆತಗಳಲ್ಲಿ 50 ರನ್ ಗಳಿಸಿ ಔಟಾದರು. ಇದೀಗ ಆಂಗ್ಲರ ತಂಡದ ವಿರುದ್ಧ 9 ಎಸೆತಗಳಲ್ಲಿ 9 ರನ್ ಗಳಿಸಿ ಪೆವಿಲಿಯನ್’ಗೆ ಮರಳಿದ್ದಾರೆ.
ಈ ಬಾರಿಯ ಐಪಿಎಲ್ ಆರಂಭದ ವೇಳೆ ಕೊಹ್ಲಿ ರನ್ ಮಳೆ ಸುರಿಸಿದ್ದರು. ಈ ಕಾರಣಕ್ಕಾಗಿ, ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಬದಲು ಅವರನ್ನು ಓಪನಿಂಗ್ ಮಾಡಲು ಟೀಮ್ ಮ್ಯಾನೇಜ್ಮೆಂಟ್ ನಿರ್ಧರಿಸಿತ್ತು. ಆದರೆ ಈ ಕ್ರಮಾಂಕದಲ್ಲಿ ನಿರಂತರವಾಗಿ ವಿಫಲರಾಗುತ್ತಿದ್ದಾರೆ.
ಇದನ್ನೂ ಓದಿ: ಟೂರ್ನಿಯುದ್ದಕ್ಕೂ ಒಂದೇ ಒಂದು ಸೋಲು ಕಾಣದೆ ವಿಶ್ವಕಪ್ ಗೆದ್ದಿರುವುದು ಈ 2 ತಂಡಗಳು ಮಾತ್ರ: ಯಾವುವವು ಗೊತ್ತಾ?
ಐರ್ಲೆಂಡ್ ವಿರುದ್ಧ 1 ರನ್ ಗಳಿಸಿ ವಿರಾಟ್ ಔಟಾದರೆ, ಪಾಕಿಸ್ತಾನ ವಿರುದ್ಧ 4 ರನ್ ಗಳಿಸಿ ಪೆವಿಲಿಯನ್’ಗೆ ಮರಳಿದ್ದರು. ಆ ಬಳಿಕ ಅಮೆರಿಕ ವಿರುದ್ಧ ಖಾತೆ ತೆರೆಯಲು ಸಾಧ್ಯವಾಗಿರಲಿಲ್ಲ. ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ 24 ಎಸೆತಗಳಲ್ಲಿ 24 ರನ್ ಗಳಿಸಿದ್ದರು. ಆ ನಂತರ ಬಾಂಗ್ಲಾದೇಶದ ವಿರುದ್ಧ 28 ಎಸೆತಗಳಲ್ಲಿ 37 ರನ್’ಗಳ ಇನ್ನಿಂಗ್ಸ್ ಆಡಿದರು. ಇನ್ನು ಆಸ್ಟ್ರೇಲಿಯಾ ತಂಡ ಅವರನ್ನು ಶೂನ್ಯಕ್ಕೆ ಔಟ್ ಮಾಡಿತ್ತು.
<
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.