ಪ್ರಯಾಗ್​ರಾಜ್​ನಲ್ಲಿಂದು ಪಕ್ಷದ ಸೋಲಿನ ಬಗ್ಗೆ ಪ್ರಿಯಾಂಕ ಗಾಂಧಿ ಪರಾಮರ್ಶೆ

ಸ್ವರಾಜ್ ಭವನ ತಲುಪಲಿರುವ ಪ್ರಿಯಾಂಕ ಗಾಂಧಿ ಸಂಜೆ ಪಕ್ಷದ ಉನ್ನತ ಮುಖಂಡರನ್ನು ಭೇಟಿಯಾಗಿ ಸಮಾಲೋಚನೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೆ, 2022ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಬಗ್ಗೆಯೂ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.

Last Updated : Jun 7, 2019, 01:00 PM IST
ಪ್ರಯಾಗ್​ರಾಜ್​ನಲ್ಲಿಂದು ಪಕ್ಷದ ಸೋಲಿನ ಬಗ್ಗೆ ಪ್ರಿಯಾಂಕ ಗಾಂಧಿ ಪರಾಮರ್ಶೆ title=
Pic Courtesy: inc.in

ಪ್ರಯಾಗ್​ರಾಜ್: ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿನ ನಂತರ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಪೂರ್ವ ಉತ್ತರ ಪ್ರದೇಶದ ಉಸ್ತುವಾರಿ ಪ್ರಿಯಾಂಕ ಗಾಂಧಿ ಇಂದು ಪ್ರಯಾಗ್​ರಾಜ್​ಗೆ ಭೇಟಿ ನೀಡಲಿದ್ದಾರೆ. ಶುಕ್ರವಾರ ಸಂಜೆ ಪ್ರಯಾಗ್​ರಾಜ್​ನಲ್ಲಿರುವ್ ಸ್ವರಾಜ್ ಭವನ ತಲುಪಲಿರುವ ಪ್ರಿಯಾಂಕ ಗಾಂಧಿ ಅಲ್ಲಿ ಪಕ್ಷದ ಉನ್ನತ ಮುಖಂಡರೊಂದಿಗೆ ಚುನಾವಣಾ ಸೋಲಿನ ಬಗ್ಗೆ ಪರಾಮರ್ಶೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.

ಸ್ವರಾಜ್ ಭವನದಲ್ಲಿ ಪಕ್ಷದ ಮುಖಂಡರೊಂದಿಗೆ ಚುನಾವಣಾ ಫಲಿತಾಂಶದ ಬಗ್ಗೆ ಸಮಾಲೋಚನೆ ನಡೆಸಲಿರುವ ಪ್ರಿಯಾಂಕ, ಅದೇ ಸಮಯದಲ್ಲಿ  2022ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಬಗ್ಗೆಯೂ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.

ಈ ಸಭೆಯಲ್ಲಿ, ಚುನಾವಣೆಯಲ್ಲಿ ಪೂರ್ವ ಉತ್ತರ ಪ್ರದೇಶದಿಂದ ಸ್ಪರ್ಧಿಸಿದ್ದ ಎಲ್ಲ 40 ಅಭ್ಯರ್ಥಿಗಳು ಪ್ರಿಯಾಂಕಾ ಗಾಂಧಿಯವರೊಂದಿಗೆ ಚರ್ಚೆ ನಡೆಸಲಿದ್ದಾರೆ. ಅದೇ ಸಮಯದಲ್ಲಿ, ಪೂರ್ವ ಉತ್ತರಪ್ರದೇಶದ ಎಲ್ಲಾ ಜಿಲ್ಲಾ ಮುಖ್ಯಸ್ಥರೂ ಉಪಸ್ಥಿತರಿರಲಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಹಲವರು ಪಕ್ಷದ ವಿರುದ್ಧ ಕೆಲಸ ಮಾಡಿದ್ದರು ಮತ್ತು ಹಲವೆಡೆ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಕಾರ್ಯಕರ್ತರು ಸಹಕಾರ ನೀಡಲಿಲ್ಲ ಎಂದು ನಂಬಲಾಗಿದೆ. ಇಂತಹ ಬಂಡಾಯ ನಾಯಕರ ಪಟ್ಟಿ ಕೂಡ ಕೇಳಲಾಗಿದೆ.

ಗಮನಾರ್ಹವಾಗಿ, ಪ್ರಿಯಾಂಕಾ ಗಾಂಧಿಯವರು ಸಕ್ರಿಯ ರಾಜಕೀಯ ಪ್ರವೇಶಿಸಿದ ಬಳಿಕವೂ ಕಾಂಗ್ರೆಸ್ ಒಂದು ದೊಡ್ಡ ಸೋಲಿಗೆ ಸಾಕ್ಷಿಯಾಗಿದೆ. ಉತ್ತರ ಪ್ರದೇಶದಲ್ಲಿ  ಕಾಂಗ್ರೆಸ್ ಕೇವಲ ಒಂದು ಸ್ಥಾನವನ್ನು ಗೆದ್ದಿದೆ. ಇದಲ್ಲದೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸ್ವತಃ ಅಮೇತಿಯಿಂದ ಸೋತರು. 
 

Trending News