ತಮಿಳುನಾಡಿನಲ್ಲಿ ಐಪಿಎಲ್ ಗೆ 'ಕಾವೇರಿ'ದ ಪ್ರತಿಭಟನೆ

      

Last Updated : Apr 10, 2018, 06:41 PM IST
ತಮಿಳುನಾಡಿನಲ್ಲಿ ಐಪಿಎಲ್ ಗೆ 'ಕಾವೇರಿ'ದ ಪ್ರತಿಭಟನೆ

ಚೆನ್ನೈ: ತಮಿಳುನಾಡಿನಲ್ಲಿ ಎಲ್ಲ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಚೆನ್ನೈ ನಲ್ಲಿ ನಡೆಯುವ ಎಲ್ಲ ಏಳು ಐಪಿಎಲ್ ಪಂದ್ಯಗಳನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿವೆ.

ಈ ಎಲ್ಲ ರಾಜಕೀಯ ಪಕ್ಷಗಳು ಕಾವೇರಿ ನೀರು ನಿರ್ವಹಣಾ ಮಂಡಳಿಯನ್ನು ರಚಿಸುವಂತೆ ಆಗ್ರಹಿಸುತ್ತಿವೆ.ಅದು ರಚನೆಯಾಗುವವರೆಗೂ ಎಲ್ಲ ಪಂದ್ಯಗಳನ್ನು ರದ್ದುಗೊಳಿಸಬೇಕು ಅಥವಾ ಮುಂದೂಡಲ್ಪಡಬೇಕು ಎಂದು ಆಗ್ರಹಿಸಿವೆ ಅಲ್ಲದೆ ಎಲ್ಲ ಕ್ರಿಕೆಟ್ ಪ್ರೇಮಿಗಳನ್ನು ಪಂದ್ಯವನ್ನು ಬಹಿಷ್ಕರಿಸುವಂತೆ ಕೋರಿವೆ. 

ಈಗಾಗಲೇ ತಮಿಜಗಾ ವಜ್ಯವುರಿಮೈ ಕಟ್ಚಿ ಮುಖ್ಯಸ್ಥ ವೆಳಮುರುಗನ್ ನೇತೃತ್ವದಲ್ಲಿ ಗುಂಪು ಚೆನ್ನೈ ನ ಚಿದಂಬರಂ ಸ್ಟೇಡಿಯಂ ಹತ್ತಿರ ಕಪ್ಪೂ ಬಲೂನ್ ಗಳನ್ನೂ ತೂರಿ ಬಿಡುವ ಮೂಲಕ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಅವರನ್ನು ತಮಿಳುನಾಡಿನ ಪೊಲೀಸರು ಬಂಧಿಸಿದ್ದಾರೆ.

ಇತ್ತೀಚಿಗೆ ನಟ ಮತ್ತು ರಾಜಕಾರಣಿ ರಜನಿಕಾಂತ್ ಸಹಿತ ಕಾವೇರಿ ಪ್ರತಿಭಟನೆ ಸಂದರ್ಭದಲ್ಲಿ ಚೆನ್ನೈ ನಲ್ಲಿ ಐಪಿಎಲ್ ಪಂದ್ಯಗಳು ನಡೆಯುತ್ತಿರುವುದು ಮುಜುಗರ ತಂದಿದೆ ಎಂದು ಹೇಳಿಕೆ ನೀಡಿದ್ದರು. 

 

More Stories

Trending News