ಪುಲ್ವಾಮಾ ದಾಳಿಯ ಬಗ್ಗೆ ಪಾಕ್ ನೀಡಿರುವ ಹೇಳಿಕೆ ವಿಪಕ್ಷಗಳ ಬಣ್ಣ ಬಯಲು ಮಾಡಿದೆ-ಪ್ರಧಾನಿ ಮೋದಿ

ನವದೆಹಲಿ: ಪುಲ್ವಾಮಾ ದಾಳಿಯ (Pulwama attack) ಬಗ್ಗೆ ಪಾಕಿಸ್ತಾನ ಸಂಸದ ಪಾಕ್ ಸಂಸತ್ತಿನಲ್ಲಿ ನೀಡಿದ ಹೇಳಿಕೆಯ  ನಂತರ ಇದೇ ಮೊದಲ ಬಾರಿಗೆ  ಪ್ರಧಾನಿ ನರೇಂದ್ರ ಮೋದಿ (PM Narendra Modi) ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

ಪುಲ್ವಾಮಾ ದಾಳಿಯಲ್ಲಿ ನಮ್ಮ ಸೈನಿಕರು ಹುತಾತ್ಮರಾದಾಗಲೂ ಕೆಲವರು ರಾಜಕೀಯ ಮಾಡುವುದರಲ್ಲೇ ನಿರತರಾಗಿದ್ದರು. ಅಂಥವರನ್ನು ದೇಶದ ಜನತೆ ಎಂದಿಗೂ ಮರೆಯುವುದಿಲ್ಲ ಎಂದು ಪ್ರಧಾನಮಂತ್ರಿ  ಹೇಳಿದ್ದಾರೆ.ಗುಜರಾತ್ ನ ಕೇವಾಡಿಯಲ್ಲಿ ನಡೆದ ಸರ್ದಾರ್ ವಲ್ಲಭಬಾಯಿ ಪಟೇಲ್ ಜನ್ನ ಜಯಂತಿ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಮಾತನಾಡುತ್ತಿದ್ದರು.

ಘಟನೆಯ ಸಂದರ್ಭದಲ್ಲಿ ವಿರೋಧ ಪಕ್ಷಗಳು ಹೊರಿಸಿರುವ ಎಲ್ಲಾ ಆರೋಪಗಳನ್ನು ಕೇಳಿ ಸಹಿಸಿಕೊಂಡೆ. ಅವರುಗಳ ಎಲ್ಲಾ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದೆ. ನನ್ನ ಮನಸ್ಸು ಅತಿಯಾಗಿ ಘಾಸಿಗೊಂಡಿತ್ತು. ಆದರೆ ಇದೀಗ ಘಟನೆಯ ಬಗ್ಗೆ ನಮ್ಮ ನೆರೆಯ ದೇಶ ನೀಡಿರುವ ಹೇಳಿಕೆ ಎಲ್ಲರೂ ಗೊತ್ತಿದೆ. ಘಟನೆಗೆ ದೇಶವೇ  ಕಾರಣ ಎಂಬ ಸತ್ಯ ಹೊರಬಂದಿದೆ. ಘಟನೆಯ ಬಗ್ಗೆ ಇಲ್ಲ ಸಲ್ಲದ ಆರೋಪ ಹೊರಿಸುತ್ತಿದ್ದವರ ನಿಜವಾದ ಮುಖ ಈಗ ಅನಾವರಣಗೊಂಡಿದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.

ಪುಲ್ವಾಮಾ ಉಗ್ರರ ದಾಳಿಯಲ್ಲಿ ಪಾಕ್ ನ ಯಾವುದೇ ಪಾತ್ರವಿಲ್ಲ- ಪಾಕ್ ಪ್ರಧಾನಿ ಇಮ್ರಾನ್ ಖಾನ್

ನೆರೆಯ ದೇಶದ ಸಂಸದ ಸತ್ಯ ಒಪ್ಪಿಕೊಳ್ಳುವ ಮೂಲಕ ಇವರುಗಳ ನಿಜ ಬಣ್ಣ ಬಯಲು ಮಾಡಿದ್ದಾರೆ. ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಈ ಜನ ಯಾವ ಮಟ್ಟಕ್ಕೆ ಬೇಕಾದರೂ ಇಳಿಯಬಲ್ಲರು ಎನ್ನುವುದನ್ನು ಪುಲ್ವಾಮಾ ದಾಳಿಯ ನಂತರ ಇವರುಗಳು ಮಾಡಿರುವ ಕೀಳುಮಟ್ಟದ ರಾಜಕೀಯವೇ ಸಾಕ್ಷಿ ಎಂದು ವಿಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

ಇದೇ ವೇಳೆ, ದೇಶದ ಸುರಕ್ಷತೆಯ ದೃಷ್ಟಿಯಿಂದ, ದೇಶದ ಮನೋಬಲ ಹೆಚ್ಚಿಸುವುದಕ್ಕಾಗಿ ದಯವಿಟ್ಟು ಇಂಥಹ ಕೆಳಮಟ್ಟದ ರಾಜಕಾರಣ ನಡೆಸಬಾರದು ಎಂದು ವಿಪಕ್ಷಗಳಲ್ಲಿ ಮನವಿಮಾಡಿಕೊಂಡರು. ತಮ್ಮ ಸ್ವಾರ್ಥ ಸಾಧನೆಗಾಗಿ ತಿಳಿದೋ ತಿಳಿಯದೆಯೋ ನೀವು ನಮ್ಮ ದೇಶದ ವಿರೋಧಿಗಳಿಗೆ ಬೇಕಾದಂತೆ ನಡೆದುಕೊಳ್ಳುತ್ತಿದ್ದೀರಿ. ಇದರಿಂದ ನಮ್ಮ ದೇಶದ ಉದ್ದಾರವೂ ಸಾಧ್ಯವಿಲ್ಲ ನಿಮ್ಮ ಪಕ್ಷಗಳ ಉದ್ಧಾರವೂ ಸಾಧ್ಯವಿಲ್ಲ ಎಂದು ವಿರೊಧ ಪಕ್ಷಗಳಿಗೆ ಕಿವಿ ಮಾತು ಹೇಳಿದರು.

ಪುಲ್ವಾಮ ದಾಳಿ: 100 ಗಂಟೆಯೊಳಗೆ ಕಾಶ್ಮೀರದಲ್ಲಿ JeM ನಾಯಕರನ್ನು ಹೊಡೆದುರುಳಿಸಿದ ಸೇನೆ  

ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಲು ಪ್ರಯತ್ನಿಸುತ್ತಿರವ ಹೊತ್ತಲ್ಲೇ ಕೆಲವು ಸವಾಲುಗಳನ್ನು ಭಾರತ ಮಾತ್ರವಲ್ಲ ಇಡೀ ವಿಶ್ವವೇ ಎದುರಿಸುತ್ತಿದೆ. ಭಯೋತ್ಪಾದನೆಯನ್ನು (Terrorism) ಸಮರ್ಥಿಸುವ ಹೇಳೀಕೆಗಳನ್ನು ಕೆಲವರು ನೀಡುತ್ತಿದ್ದು, ಇದು ವಿಶ್ವವೇ ಕಳವಳ ಪಡುವಂತದ್ದಾಗಿದೆ.ಇಂದಿನ ಪರಿಸ್ಥಿತಿಯಲ್ಲಿ ಇಡೀ ಜಗತ್ತಿನ ಲ್ಲಾ ರಾಷ್ಟ್ರಗಳು, ಎಲ್ಲಾ ಸರಕಾರಗಳು, ಭಯೋತ್ಪಾದನೆಯ ವಿರುದ್ಧ ಒಗ್ಗಟ್ಟಾಗಿ ಹೋರಾಡುವ ಅಗತ್ಯವಿದೆ. ಶಾಂತಿ, ಸಹೋದರತೆ, ಪರಸ್ಪರ ಗೌರವದಿಂದ ರುವುದೇ ನಿಜವಾದ ಮಾನವೀಯತೆ ಎಂದು ಮೊದಿ ಹೇಳಿದ್ದಾರೆ. ಭಯೋತ್ಪಾದನೆಯಿಂದ ಎಲ್ಲೂ ಯಾವ ದೃಷ್ಟಿಯಿಂದಲೂ ಕಲ್ಯಾಣವಾಗಲು ಸಾಧ್ಯವಿಲ್ಲ ಎಂದಿದ್ದಾರೆ.

ಗುರುವಾರ ಪಾಕಿಸ್ತಾನ ಸಂಸತ್ತಿನಲ್ಲಿ ಮಾತನಾಡಿದ ವಿಜ್ಞಾನ  ಮತ್ತು ತಂತ್ರಜ್ಞಾನ  ಸಚಿವ ಫವಾದ್ ಚೌಧರಿ, ಪುಲ್ವಾಮಾ ದಾಳಿಯಲ್ಲಿ ಪಾಕಿಸ್ಥಾನದ ಕೈವಾಡವನ್ನು ಬಯಲು ಮಾಡಿದ್ದರು. 2019 ರ ಪುಲ್ವಾಮಾ ದಾಳಿಯನ್ನು (Pulwama Attack) ಮಾಡಿದ್ದು ತಾನೇ ಎಂದು ಸಂಸತ್ತಿನಲ್ಲೇ ಖುಲ್ಲಂ ಖುಲ್ಲಾ ಒಪ್ಪಿಕೊಂಡಿದ್ದರು. ಅಷ್ಟೇ ಅಲ್ಲ, ಪುಲ್ವಾಮಾ ದಾಳಿಯು ಇಮ್ರಾನ್ ಖಾನ್ ಸರ್ಕಾರದ ಮಹತ್ವದ ಸಾಧನೆ ಎಂದಿದ್ದರು.

Section: 
English Title: 
Pulwama truth has exposed opposition now says PM Modi
News Source: 
Home Title: 

ಪುಲ್ವಾಮಾ ದಾಳಿಯ ಬಗ್ಗೆ ಪಾಕ್ ನೀಡಿರುವ ಹೇಳಿಕೆ ವಿಪಕ್ಷಗಳ ಬಣ್ಣ ಬಯಲು ಮಾಡಿದೆ-ಪ್ರಧಾನಿ ಮೋದಿ

ಪುಲ್ವಾಮಾ ದಾಳಿಯ ಬಗ್ಗೆ ಪಾಕ್ ನೀಡಿರುವ ಹೇಳಿಕೆ ವಿಪಕ್ಷಗಳ ಬಣ್ಣ ಬಯಲು ಮಾಡಿದೆ-ಪ್ರಧಾನಿ ಮೋದಿ
Caption: 
Photo Courtesy: Twitter
Yes
Is Blog?: 
No
Facebook Instant Article: 
Yes
Mobile Title: 
ಪುಲ್ವಾಮಾ ದಾಳಿಯ ಬಗ್ಗೆ ಪಾಕ್ ನೀಡಿರುವ ಹೇಳಿಕೆ ವಿಪಕ್ಷಗಳ ಬಣ್ಣ ಬಯಲು ಮಾಡಿದೆ-ಪ್ರಧಾನಿ ಮೋದಿ
Publish Later: 
No
Publish At: 
Saturday, October 31, 2020 - 12:40
Created By: 
Manjunath Naragund
Updated By: 
Manjunath Naragund
Published By: 
Manjunath Naragund