'ಸಾಕು ಪ್ರಾಣಿ'ಗಳಿಗೆ ತೆರಿಗೆ ವಿಧಿಸಿದ ಪಂಜಾಬ್ ಸರ್ಕಾರ

ಪಂಜಾಬ್ ಜನತೆ ಇನ್ನು ಮುಂದೆ ಸಾಕು ಪ್ರಾಣಿಗಳಿಗೂ ತೆರಿಗೆ ಪಾವತಿಸಬೇಕಿದೆ.

Last Updated : Oct 24, 2017, 01:32 PM IST
'ಸಾಕು ಪ್ರಾಣಿ'ಗಳಿಗೆ ತೆರಿಗೆ ವಿಧಿಸಿದ ಪಂಜಾಬ್ ಸರ್ಕಾರ title=

ಪಂಜಾಬ್: ಇನ್ನು ಮುಂದೆ 'ಸಾಕು ಪ್ರಾಣಿ'ಗಳಿಗೂ ತೆರಿಗೆ ಕಟ್ಟುವಂತೆ ಆದೇಶಿಸಿ ಪಂಜಾಬ್ ಸರ್ಕಾರ ಸುತ್ತೋಲೆ ಹೊರಡಿಸಿದೆ.

 

ಆದೇಶದಂತೆ ಪ್ರತಿ ವರ್ಷಕ್ಕೆ, ನಾಯಿ, ಬೆಕ್ಕು, ಹಂದಿ, ಕುರಿ, ಕರಡಿ ಅಂತಹ ಪ್ರಾಣಿಗಳಿಗೆ ರೂ.250 ಹಾಗೂ ಹಸು, ಎಮ್ಮೆ, ಒಂಟೆ, ಕುದುರೆ, ಆನೆಯಂತಹ ಪ್ರಾಣಿಗಳಿಗೆ ರೂ.500 ವಾರ್ಷಿಕ ತೆರಿಗೆ ಪಾವತಿಸಬೇಕಿದೆ.

ಪಂಜಾಬ್ ಸರ್ಕಾರದ ನೂತನ ಆದೇಶದಂತೆ ಪಂಜಾಬ್ ನ್ನು ಮುಂದೆ ಸಾಕು ಪ್ರಾಣಿಗಳಿಗೂ ತೆರಿಗೆ ಪಾವತಿಸಬೇಕಿದೆ. "ಬ್ರ್ಯಾಂಡಿಂಗ್ ಕೋಡ್", ಕೋಡ್ ಬ್ರ್ಯಾಂಡಿಂಗ್ ಅಥವಾ ಪ್ರಾಣಿಗಳಲ್ಲಿ ಸ್ಥಾಪಿಸಲಾದ ಮೈಕ್ರೋಚಿಪ್ನಲ್ಲಿ ಪ್ರತಿ ಪ್ರಾಣಿಗಳಿಗೆ ಗುರುತಿಸುವ ಗುರುತು ಅಥವಾ ಸಂಖ್ಯೆಯನ್ನು ಪಂಜಾಬ್ ಸರ್ಕಾರ ನೀಡಲಿದೆ. 

 

 

 

Trending News