ನವದೆಹಲಿ: ಕೊರೊನಾ ವೈರಸ್‍ಗೆ ಭಾರತದಲ್ಲಿ 4.7 ಮಿಲಿಯನ್‍ಗೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆಂಬ WHO ವರದಿ ಉಲ್ಲೇಖಿಸಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಶುಕ್ರವಾರ ಟ್ವೀಟ್ ಮಾಡಿರುವ ರಾಹುಲ್, ‘ವಿಜ್ಞಾನ ಸುಳ್ಳು ಹೇಳುವುದಿಲ್ಲ, ಆದರೆ ಪ್ರಧಾನಿ ನರೇಂದ್ರ ಮೋದಿ ಸುಳ್ಳು ಹೇಳುತ್ತಾರೆ’ ಎಂದು ಟೀಕಿಸಿದ್ದಾರೆ. ದೇಶದಲ್ಲಿ ಕೊರೊನಾ ಸಾಂಕ್ರಾಮಿಕ ವ್ಯಾಪಿಸಿದ ಬಳಿಕ ಲಕ್ಷಾಂತರ ಜನರು ಮಾರಕ ವೈರಸ್‍ಗೆ ಬಲಿಯಾಗಿದ್ದಾರೆ. ಈ ವೇಳೆ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ಕಡ್ಡಾಯವಾಗಿ 4 ಲಕ್ಷ ರೂ. ಪರಿಹಾರ ನೀಡುವ ಮೂಲಕ ಸರ್ಕಾರ ಅವರಿಗೆ ಆಸರೆಯಾಗಬೇಕು’ ರಾಹುಲ್ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: Viral News: ಬಿರಿಯಾನಿ ಜೊತೆಗೆ ಚಿನ್ನದ ಸರ ನುಂಗಿದ ವ್ಯಕ್ತಿ..!
ಕೊರೊನಾ ಸಾಂಕ್ರಾಮಿಕ ರೋಗದಿಂದ 47 ಲಕ್ಷ ಭಾರತೀಯರು ಸಾವನ್ನಪ್ಪಿದ್ದಾರೆ. ಬಿಜೆಪಿ ಸರ್ಕಾರ ಹೇಳಿಕೊಂಡಂತೆ ಕೇವಲ 4.8 ಲಕ್ಷ ಅಲ್ಲ. ವಿಜ್ಞಾನ ಸುಳ್ಳು ಹೇಳುವುದಿಲ್ಲ, ಆದರೆ ಮೋದಿ ಸುಳ್ಳು ಹೇಳುತ್ತಾರೆ’ ಎಂದು ರಾಹುಲ್ ಗಾಂಧಿ ಕುಟುಕಿದ್ದಾರೆ.
ಶಾಶ್ವತ ಸುಳ್ಳುಗಾರ ಏನು ಹೇಳುತ್ತಾರೆ?
Could you please furnish the details of the 47 lakh Indians who died during the Chinese Virus pandemic?
Let us start with scientific data from States ruled by CONgress & its friends.
Do you believe your Government or that WHO?
What say PERPETUAL LIAR @RahulGandhi? https://t.co/sDwIlhIXpS
— BJP Karnataka (@BJP4Karnataka) May 6, 2022
ರಾಹುಲ್ ಗಾಂಧಿ ಟ್ವೀಟ್‍ಗೆ ತಿರುಗೇಟು ನೀಡಿರುವ ಬಿಜೆಪಿ, ಶಾಶ್ವತ ಸುಳ್ಳುಗಾರ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದೆ. ‘ಚೀನೀ ವೈರಸ್ ಸಾಂಕ್ರಾಮಿಕ ಸಮಯದಲ್ಲಿ ಸಾವನ್ನಪ್ಪಿದ 47 ಲಕ್ಷ ಭಾರತೀಯರ ವಿವರಗಳನ್ನು ದಯವಿಟ್ಟು ಒದಗಿಸುವಿರಾ? ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ಆಳ್ವಿಕೆಯ ರಾಜ್ಯಗಳ ವೈಜ್ಞಾನಿಕ ಮಾಹಿತಿಯೊಂದಿಗೆ ನಾವು ಪ್ರಾರಂಭಿಸೋಣ. ನಿಮ್ಮ ಸರ್ಕಾರವನ್ನು ನಂಬುತ್ತೀರಾ? ಅಥವಾ WHOವನ್ನು ನಂಬುತ್ತೀರಾ? ಶಾಶ್ವತ ಸುಳ್ಳುಗಾರ ಏನು ಹೇಳುತ್ತಾರೆ ರಾಹುಲ್ ಗಾಂಧಿ..?’ ಎಂದು ಬಿಜೆಪಿ ಪ್ರಶ್ನಿಸಿ ಟ್ವೀಟ್ ಮಾಡಿದೆ.
ಇದನ್ನೂ ಓದಿ: Aadhar Card ನಲ್ಲಿ ಎಷ್ಟು ಬಾರಿ ಹೆಸರು - ವಿಳಾಸ ಬದಲಾಯಿಸಬಹುದು, ಇಲ್ಲಿದೆ UIDAI ನಿಯಮಗಳು
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.