Viral News: ಬಿರಿಯಾನಿ ಜೊತೆಗೆ ಚಿನ್ನದ ಸರ ನುಂಗಿದ ವ್ಯಕ್ತಿ..!

ಮೇ 3ರಂದು ಆಯೋಜಿಸಿದ್ದ ಈದ್ ಪಾರ್ಟಿಯಲ್ಲಿ ವ್ಯಕ್ತಿ ಚಿನ್ನದ ಸರ ನುಂಗಿದ್ದು, ವೈದ್ಯರು ಎನಿಮಾ(Enema)ವನ್ನು ಬಳಸಿ ಅದನ್ನು ಹೊರತೆಗೆದಿದ್ದಾರೆ.

Written by - Puttaraj K Alur | Last Updated : May 6, 2022, 07:41 PM IST
  • ಈದ್ ಪಾರ್ಟಿ ವೇಳೆ ಬಿರಿಯಾನಿ ಜೊತೆಗೆ ಚಿನ್ನದ ಸರ ನುಂಗಿದ ವ್ಯಕ್ತಿ
  • ಹೊಟ್ಟೆ ಸ್ಕ್ಯಾನ್ ಮಾಡಿದಾಗ 1.45 ಲಕ್ಷ ರೂ. ಮೌಲ್ಯದ ಆಭರಣ ಪತ್ತೆ
  • ಹರಸಾಹಸ ಪಟ್ಟು ಹೊಟ್ಟೆಯಿಂದ ಬೆಲೆಬಾಳುವ ಆಭರಣ ಹೊರತೆಗೆದ ವೈದ್ಯರು
Viral News: ಬಿರಿಯಾನಿ ಜೊತೆಗೆ ಚಿನ್ನದ ಸರ ನುಂಗಿದ ವ್ಯಕ್ತಿ..! title=
ಬಿರಿಯಾನಿ ಜೊತೆಗೆ ಚಿನ್ನದ ಸರ ನುಂಗಿದ ವ್ಯಕ್ತಿ!

ಚೆನ್ನೈ: ಸ್ನೇಹಿತೆಯೊಂದಿಗೆ ಈದ್ ಪಾರ್ಟಿಗೆ ಹೋಗಿದ್ದ ವ್ಯಕ್ತಿಯೊಬ್ಬ ಬಿರಿಯಾನಿ ಜೊತೆಗೆ ಚಿನ್ನದ ಸರ ನುಂಗಿರುವ ಘಟನೆ ಚೆನ್ನೈನಲ್ಲಿ ನಡೆದಿದೆ. 32 ವರ್ಷದ ವ್ಯಕ್ತಿಯೊಬ್ಬರು ತಮ್ಮ ಗೆಳತಿ ಜೊತೆಗೆ ಈದ್ ಪಾರ್ಟಿಗೆ ತೆರಳಿದ್ದರು. ಈ ವೇಳೆ ಬಿರಿಯಾನಿ ಜೊತೆಗೆ ಬರೋಬ್ಬರಿ 1.45 ಲಕ್ಷ ರೂ. ಮೌಲ್ಯದ ಚಿನ್ನದ ಸರ ಸೇರಿದಂತೆ ಆಭರಣವನ್ನು ನುಂಗಿದ್ದಾನೆ. ಚಿನ್ನದ ಆಭರಣ ಕಾಣೆಯಾದ ಬಳಿಕ ಈದ್ ಪಾರ್ಟಿ ಆಯೋಜಿಸಿದ್ದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ವ್ಯಕ್ತಿಯ ಹೊಟ್ಟೆ ಸ್ಕ್ಯಾನ್ ಮಾಡಿದಾಗ ಒಳಗಡೆ ಚಿನ್ನದ ಸರ ಪತ್ತೆಯಾಗಿದೆ.

ಮೇ 3ರಂದು ಆಯೋಜಿಸಿದ್ದ ಈದ್ ಪಾರ್ಟಿಯಲ್ಲಿ ವ್ಯಕ್ತಿ ಚಿನ್ನದ ಸರ ನುಂಗಿದ್ದು, ವೈದ್ಯರು ಎನಿಮಾ(Enema)ವನ್ನು ಬಳಸಿ ಅದನ್ನು ಹೊರತೆಗೆದಿದ್ದಾರೆ. ಪಾರ್ಟಿ ಆಯೋಜಿಸಿದ್ದ ಮಹಿಳೆ ಜ್ಯುವೆಲ್ಲರಿ ಶಾಪ್‍ನಲ್ಲಿ ಕೆಲಸ ಮಾಡುತ್ತಿದ್ದರಂತೆ. ತಾವು ಆಯೋಜಿಸಿದ್ದ ಈದ್ ಪಾರ್ಟಿಗೆ ತಮ್ಮ ಗೆಳತಿ ಹಾಗೂ ಆಕೆಯ ಬಾಯ್‍ಫ್ರೆಂಡ್‍ಗೆ ಆಹ್ವಾನ ನೀಡಿದ್ದರು. ಪಾರ್ಟಿ ವೇಳೆ ಬಿರಿಯಾನಿ ಸೇವಿಸುವುದರ ಜೊತೆಗೆ ಆಕೆಯ ಬಾಯ್‍ಫ್ರೆಂಡ್ 1.45 ಲಕ್ಷ ರೂ. ಮೌಲ್ಯದ ಚಿನ್ನದ ಸರವನ್ನೂ ನುಂಗಿದ್ದಾನೆ. ಹೀಗೆ ಚಿನ್ನದ ಸರ ನುಂಗುವಾಗ ಆತ ಪಾನಮತ್ತನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Viral Video : ಮದುವೆ ಮಂಟಪದಲ್ಲಿ ವಧು ಮಾಡಿದ ಈ ತಪ್ಪಿಗೆ ವೇದಿಕೆ ಮೇಲೆಯೇ ಸೇಡು ತೀರಿಸಿಕೊಂಡ ವರ

ಪಾರ್ಟಿ ಮುಗಿದ ಬಳಿಕ ಎಲ್ಲಾ ಅತಿಥಿಗಳು ತೆರಳಿದ್ದು, ಕಾರ್ಯಕ್ರಮ ಆಯೋಜಿಸಿದ್ದವರಿಗೆ ಬಿರುವಿನಲ್ಲಿಟ್ಟಿದ್ದ ತಮ್ಮ ಡೈಮಂಡ್ ನೆಕ್ಲೇಸ್, ಚಿನ್ನದ ಸರ ಮತ್ತು ವಜ್ರದ ಪೆಂಡೆಂಟ್ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಪರಿಶೀಲನೆ ನಡೆಸಿದಾಗ ಗೆಳತಿಯ ಬಾಯ್‍ಫ್ರೆಂಡ್ ಮೇಲೆ ಸಂಶಯ ಬಂದಿದೆ. ಬಳಿಕ ಆತನ ವಿರುದ್ಧ ವಿರುಗಂಬಕ್ಕಮ್‌ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.

ಮೇ 4ರಂದು ಪೊಲೀಸರು ಆತನನ್ನು ಕರೆದು ಪ್ರಶ್ನಿಸಿದಾಗ ತಾನು ಚಿನ್ನದ ಸರ ನುಂಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಬಳಿಕ ಆತನ ದೇಹವನ್ನು ಸ್ಕ್ಯಾನ್ ಮಾಡಿದಾಗ ಚಿನ್ನದ ಆಭರಣ ಆತನ ಹೊಟ್ಟೆಯಲ್ಲಿರುವುದು ತಿಳಿದುಬಂದಿದೆ. ಬಳಿಕ ವೈದ್ಯರು ಆತನಿಗೆ ಎನಿಮಾ ನೀಡಿದ್ದಾರೆ. ಪರಿಣಾಮ 95 ಸಾವಿರ ರೂ. ಮೌಲ್ಯದ ನೆಕ್ಲೇಸ್ ಮತ್ತು 25 ಸಾವಿರ ರೂ. ಮೌಲ್ಯದ ಚಿನ್ನದ ಆಭರಣವನ್ನು ಆತನ ದೇಹದಿಂದ ಹೊರತೆಗೆಯಲಾಗಿದೆ.  

ಇದನ್ನೂ ಓದಿ: 'ಧಾರ್ಮಿಕ ಸ್ಥಳಗಳಲ್ಲಿ ಲೌಡ್ ಸ್ಪೀಕರ್ ಗಳನ್ನು ಹಾಕುವುದು ಮೂಲಭೂತ ಹಕ್ಕಲ್ಲ'

ಆದರೆ, ವಜ್ರದ ಪೆಂಡೆಂಟ್ ಆತನ ದೇಹದೊಳಗೆ ಉಳಿದಿದೆ. ಬಳಿಕ ಅದನ್ನು ಹೊರತೆಗೆಯಲು ವೈದ್ಯರು ಆತನಿಗೆ ಲಕ್ಸ್‍ಟಿವ್ ನೀಡಿದ್ದಾರೆ. ಆಭರಣಗಳ ಮಾಲಕಿ ಆಕೆಯ ಗೆಳತಿಯ ಪ್ರೇಮಿ ವಿರುದ್ಧ ಪ್ರಕರಣ ದಾಖಲು ಬಯಸಿಲ್ಲ. ಹೀಗಾಗಿ ತಾವು ನೀಡಿದ್ದ ದೂರನ್ನು ಹಿಂಪಡೆದುಕೊಂಡಿದ್ದಾರೆಂದು ವರದಿಯಾಗಿದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News