Watch: ಪುಟ್ಟ ಬಾಲಕಿಗೆ ಚಪ್ಪಲಿ ಧರಿಸಲು ನೆರವಾದ ರಾಹುಲ್ ಗಾಂಧಿ..!

ಭಾನುವಾರ ಕೇರಳದ ಹರಿಪಾಡ್‌ನಿಂದ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ ಪುನರಾರಂಭಗೊಂಡಿದ್ದು, ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಡಿ ಸತೀಶನ್, ಕೋಡಿಕುನ್ನಿಲ್ ಸುರೇಶ್, ಕೆ ಮುರಳೀಧರನ್, ಕೆಸಿ ವೇಣುಗೋಪಾಲ್ ಮತ್ತು ರಮೇಶ್ ಚೆನ್ನಿತ್ತಲ ಸೇರಿದಂತೆ ನೂರಾರು ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಭಾಗವಹಿಸಿದ್ದರು.

Last Updated : Sep 18, 2022, 07:27 PM IST
  • ಈ ವಿಡಿಯೋ ಅಲಪ್ಪುಳ ಜಿಲ್ಲೆಯ ಅಂಬಲಪುಳ ಪಟ್ಟಣದ್ದು ಎಂದು ಹೇಳಲಾಗುತ್ತಿದೆ.
  • ರಾಹುಲ್ ಗಾಂಧಿ ಪಕ್ಷದ ಇತರ ನಾಯಕರೊಂದಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು.
Watch: ಪುಟ್ಟ ಬಾಲಕಿಗೆ ಚಪ್ಪಲಿ ಧರಿಸಲು ನೆರವಾದ ರಾಹುಲ್ ಗಾಂಧಿ..!  title=

ನವದೆಹಲಿ: ಭಾನುವಾರ ಕೇರಳದ ಹರಿಪಾಡ್‌ನಿಂದ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ ಪುನರಾರಂಭಗೊಂಡಿದ್ದು, ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಡಿ ಸತೀಶನ್, ಕೋಡಿಕುನ್ನಿಲ್ ಸುರೇಶ್, ಕೆ ಮುರಳೀಧರನ್, ಕೆಸಿ ವೇಣುಗೋಪಾಲ್ ಮತ್ತು ರಮೇಶ್ ಚೆನ್ನಿತ್ತಲ ಸೇರಿದಂತೆ ನೂರಾರು ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಭಾಗವಹಿಸಿದ್ದರು.

ಬೆಳಗ್ಗೆ 6.30ರ ನಂತರ ಆರಂಭವಾದ ಯಾತ್ರೆ 11ನೇ ದಿನಕ್ಕೆ ಕಾಲಿಟ್ಟಿದೆ. ಏತನ್ಮಧ್ಯೆ, ರಾಹುಲ್ ಗಾಂಧಿ ಅವರ ಹೃದಯ ಸ್ಪರ್ಶಿ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ, ಅದರಲ್ಲಿ ಅವರು ಹುಡುಗಿಗೆ ಚಪ್ಪಲಿ ಧರಿಸಲು ಸಹಾಯ ಮಾಡುತ್ತಿದ್ದಾರೆ.

ಇದನ್ನೂ ಓದಿ: "ಎಸ್.ಸಿ ,ಎಸ್ಟಿಯವರಿಗೆ 75 ಯೂನಿಟ್ ಉಚಿತ ವಿದ್ಯುತ್ ಯೋಜನೆ ಹಿಂಪಡೆದಿಲ್ಲ"

ಈ ವಿಡಿಯೋ ಅಲಪ್ಪುಳ ಜಿಲ್ಲೆಯ ಅಂಬಲಪುಳ ಪಟ್ಟಣದ್ದು ಎಂದು ಹೇಳಲಾಗುತ್ತಿದೆ. ರಾಹುಲ್ ಗಾಂಧಿ ಪಕ್ಷದ ಇತರ ನಾಯಕರೊಂದಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಒಬ್ಬ ವ್ಯಕ್ತಿ ಚಿಕ್ಕ ಹುಡುಗಿಯ ಕೈಯನ್ನು ಹಿಡಿದುಕೊಂಡು ಅವರಿಗಿಂತ ಸ್ವಲ್ಪ ಮುಂದೆ ನಡೆಯುತ್ತಿದ್ದಾನೆ. ಇದೆ ವೇಳೆ ಬಾಲಕಿಯ ಚಪ್ಪಲಿ ಬಿಚ್ಚಿರುವುದನ್ನು ಗಮಣಿಸಿದ ರಾಹುಲ್ ಗಾಂಧಿ ಅದನ್ನು ಸರಿಪಡಿಸಲು ಮುಂದಾಗಿದ್ದಾರೆ. ಈಗ ರಾಹುಲ್ ಗಾಂಧಿ ಅವರ ಈ ಸರಳತೆ ಸಾಕಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಇದನ್ನೂ ಓದಿ: ಮಾಜಿ ಸಿಎಂ ಯಡಿಯೂರಪ್ಪ, ಸಚಿವ ಎಸ್.ಟಿ.ಸೋಮಶೇಖರ್ ಗೆ ಬಂಧನದ ಭೀತಿ

ಭಾರತ್ ಜೋಡೋ ಯಾತ್ರೆ 150 ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾದ ಪಾದಯಾತ್ರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಕೊನೆಗೊಳ್ಳಲಿದೆ. ಸೆಪ್ಟೆಂಬರ್ 10 ರ ಸಂಜೆ ಕೇರಳವನ್ನು ಪ್ರವೇಶಿಸಿದ ಭಾರತ್ ಜೋಡೋ ಯಾತ್ರೆಯು ಅಕ್ಟೋಬರ್ 1 ರಂದು ಕರ್ನಾಟಕವನ್ನು ಪ್ರವೇಶಿಸುವ ಮೊದಲು 19 ದಿನಗಳ ಅವಧಿಯಲ್ಲಿ ಏಳು ಜಿಲ್ಲೆಗಳ ಮೂಲಕ 450 ಕಿಮೀ ದೂರವನ್ನು ರಾಜ್ಯದ (ಕೇರಳ) ವಿವಿಧ ಭಾಗಗಳಲ್ಲಿ ಹಾದು ಹೋಗಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News