ಓಕಿ ಚಂಡಮಾರುತ ಸಂತ್ರಸ್ತರನ್ನು ಭೇಟಿ ಮಾಡಿದ ರಾಹುಲ್ ಗಾಂಧಿ

ಓಕಿ ಚಂಡಮಾರುತದಿಂದಾಗಿ ತಮ್ಮ ಪ್ರಾಣ ಕಳೆದುಕೊಂಡ ದಕ್ಷಿಣ ಕೇರಳದ ಮೀನುಗಾರರ ಕುಟುಂಬಗಳನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇಂದು ಭೇಟಿ ಮಾಡಿದರು. ಅವರು ಮೀನುಗಾರರ ಕುಟುಂಬಗಳನ್ನು ಭೇಟಿ ಮಾಡಿದರು. ಅವರು ರಾಜ್ಯದಲ್ಲಿ 66 ಜನರ ಸಾವಿಗೆ ಕಾರಣವಾದ ಚಂಡಮಾರುತ ಪೀಡಿತ ಪ್ರದೇಶಗಳಿಗೂ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. 

Last Updated : Dec 14, 2017, 03:51 PM IST
ಓಕಿ ಚಂಡಮಾರುತ ಸಂತ್ರಸ್ತರನ್ನು ಭೇಟಿ ಮಾಡಿದ ರಾಹುಲ್ ಗಾಂಧಿ title=

ಪೂನ್ಥುರ : ಓಕಿ ಚಂಡಮಾರುತದಿಂದಾಗಿ ತಮ್ಮ ಪ್ರಾಣ ಕಳೆದುಕೊಂಡ ದಕ್ಷಿಣ ಕೇರಳದ ಮೀನುಗಾರರ ಕುಟುಂಬಗಳನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇಂದು ಭೇಟಿ ಮಾಡಿದರು. ಅವರು ಮೀನುಗಾರರ ಕುಟುಂಬಗಳನ್ನು ಭೇಟಿ ಮಾಡಿದರು. ಅವರು ರಾಜ್ಯದಲ್ಲಿ 66 ಜನರ ಸಾವಿಗೆ ಕಾರಣವಾದ ಚಂಡಮಾರುತ ಪೀಡಿತ ಪ್ರದೇಶಗಳಿಗೂ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. 

ಇದೇ ಸಂದರ್ಭದಲ್ಲಿ ಸಂತ್ರಸ್ಥರನ್ನು ಕುರಿತು ಮಾತನಾಡಿದ ಅವರು, ಗುಜರಾತ್ ಚುನಾವಣೆಗೆ ಸಂಬಂಧಿಸಿದಂತೆ ಮೊದಲು ನಿಗದಿಪಡಿಸಲಾದ ಕಾರ್ಯಕ್ರಮಗಳ ಕಾರಣದಿಂದ ಇಲ್ಲಿಗೆ ಭೇಟಿ ನೀಡಲಾಗಿರಲಿಲ್ಲ. ಆದರೆ ನನ್ನ ಗಮನವೆಲ್ಲಾ ಇಲ್ಲೇ ಇದ್ದಿದ್ದರಿಂದ ಇಂದು ಪ್ರಾಣತೆತ್ತ ಮೀನುಗಾರರಿಗೆ ಶ್ರದ್ಧಾಂಜಲಿ ಅರ್ಪಿಸಲು ಬಂದಿರುವುದಾಗಿ ಹೇಳಿದರು.  

ನಿಧನರಾದವರ ಕುಟುಂಬಗಳನ್ನು ಸಮಾಧಾನಪಡಿಸುತ್ತಾ, "ನಿಮ್ಮಲ್ಲಿ ಕೆಲವರು ಪುತ್ರರನ್ನು ಕಳೆದುಕೊಂಡಿದ್ದೀರ, ಮತ್ತೆ ಕೆಲವರು ಗಂಡನನ್ನು ಕಳೆದುಕೊಂದಿದ್ದೀರ, ಸಾಧ್ಯವಾದಷ್ಟು ನಿಮ್ಮ ಜೀವನವನ್ನು ಆರಾಮದಾಯಕವಾಗಿಸಲು ನಾವು ಪ್ರಯತ್ನಿಸುತ್ತೇವೆ, ಆದರೆ ನೀವು ಕಳೆದುಕೊಂದಿರುವವರನ್ನು ಹಣದಿಂದಾಗಲೀ, ಪದಗಳಿಂದಾಗಲಿ ಭರಿಸಲಾಗುವುದಿಲ್ಲ ಎಂಬುದು ತಿಳಿದಿದೆ ಎಂದು ರಾಹುಲ್ ಹೇಳಿದರು. 

ಈ ಭಾಗದ ಪ್ರತಿಯೊಬ್ಬರಿಗೂ ಅಗತ್ಯ ವಸ್ತುಗಳ ಪೂರೈಕೆಗೆ ಹಾಗೂ ಪರಿಹಾರಕ್ಕಾಗಿ ಕೇಂದ್ರದ ಆಡಳಿತ ಪಕ್ಷದ ಮೇಲೆ ಒತ್ತಡ ಹೇರಲಾಗುವುದು. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪ್ರಮುಖ ಪಾತ್ರ ವಹಿಸಲಿದೆ ಎಂದು ರಾಹುಲ್ ಭರವಸೆ ನೀಡಿದರು. 

ನವೆಂಬರ್ 30 ರಂದು ಅಪ್ಪಳಿಸಿದ ಓಕಿ ಚಂಡಮಾರುತದಿಂದ ಕೇರಳ ಮತ್ತು ನೆರೆಯ ತಮಿಳುನಾಡಿನಲ್ಲಿ 66 ಜನರು ಸಾವನ್ನಪ್ಪಿ, ಹಲವು ಮೀನುಗಾರರು ಕಾಣೆಯಾಗಿದ್ದರು. 

Trending News