ನವದೆಹಲಿ: ರಾಹುಲ್ ಗಾಂಧಿಯವರು ತಮ್ಮ ಸಂಸತ್ ಕ್ಷೇತ್ರದ ಅಮೇಥಿಗೆ ಎರಡು ದಿನಗಳ ಭೇಟಿಗಾಗಿ ಆಗಮಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕವಾದ ನಂತರ ಇದೆ ಮೊದಲ ಬಾರಿಗೆ ಸ್ವಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ.
Amethi: Congress President Rahul Gandhi offers prayer, participates in 'Khichdi daan' #MakarSankranti pic.twitter.com/f7HmHHlWOE
— ANI UP (@ANINewsUP) January 15, 2018
ಗುಜರಾತ್ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ರಾಹುಲ್ ತಮ್ಮ ನಾಯಕತ್ವದಿಂದ ಕಾಂಗ್ರೆಸ್ ಪಕ್ಷದ ಫಲಿತಾಂಶದಲ್ಲಿ ಗಮನಾರ್ಹ ಬದಲಾವಣೆಯಾಗಿದ್ದು, ಆದ್ದರಿಂದ ಹೊಸ ಪಕ್ಷದ ಹುದ್ದೆಯಿಂದ ಕ್ರಿಯಾಶೀಲವಾಗಿರುವ ಅವರು. ಈಗ ಉತ್ತರ ಪ್ರದೇಶದತ್ತ ಗಮನ ಹರಿಸಿದ್ದಾರೆ ಆ ಮೂಲಕ 2019 ಲೋಕಸಭೆರ ಚುನಾವಣೆಗೆ ಪಕ್ಷದ ಕಾರ್ಯಕರ್ತರನ್ನು ಸಿದ್ದಗೊಳಿಸಲು ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ.
ಕಳೆದ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ ಏಳು ಸೀಟುಗಳನ್ನು ಗೆಲ್ಲಲು ಮಾತ್ರ ಶಕ್ತವಾಗಿತ್ತು. ಗಾಂಧಿ ಕುಟುಂಬದ ಭದ್ರಕೋಟೆಯಾಗಿದ್ದ ಅಮೇಥಿ ಮತ್ತು ರಾಯ್ಬರೇಲಿಯಲ್ಲಿ ಮೋದಿ ಪ್ರಭಾವದಿಂದಾಗಿ 10 ವಿಧಾನಸಭಾ ಸ್ಥಾನಗಳಲ್ಲಿ ಕೇವಲ ಎರಡು ಸೀಟುಗಳನ್ನು ಗೆಲ್ಲಲು ಸಾಧ್ಯವಾಗಿತ್ತು, ಇನ್ನುಳಿದ ಎಂಟು ಸೀಟುಗಳಲ್ಲಿ ಆರು ಬಿಜೆಪಿ, ಎರಡು ಸಮಾಜವಾದಿ ಪಕ್ಷದ, ಪಾಲಾಗಿದ್ದವು. ಕಾಂಗ್ರೆಸ್ ಅಮೇಠಿಯಲ್ಲಿ ಎಲ್ಲ ಐದು ಸ್ಥಾನಗಳನ್ನು ಕಳೆದುಕೊಂಡಿತು ಮತ್ತು ಸೋನಿಯಾ ಗಾಂಧಿಯವರ ರಾಯ್ ಬರೇಲಿ ಕ್ಷೇತ್ರದಲ್ಲಿ ಮಾತ್ರ ಐದರಲ್ಲಿ ಕೇವಲ ಎರಡು ಸ್ಥಾನಗಳಲ್ಲಿ ಗೆಲುವು ಸಾಧಿಸಿತು