ನಾಗಾಲ್ಯಾಂಡ್, ಅಸ್ಸಾಂಗೆ ರಾಹುಲ್ ಗಾಂಧಿ ಭೇಟಿ; ಇಲ್ಲಿದೆ ಪೂರ್ಣ ವೇಳಾಪಟ್ಟಿ

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮೊದಲಿಗೆ ನಾಗಾಲ್ಯಾಂಡ್ ಗೆ ಭೇಟಿ ನೀಡಲಿದ್ದು, ಅಲ್ಲಿಂದ ಅಸ್ಸಾಂಗೆ ತೆರಳಲಿದ್ದಾರೆ.

Last Updated : Apr 3, 2019, 11:03 AM IST
ನಾಗಾಲ್ಯಾಂಡ್, ಅಸ್ಸಾಂಗೆ ರಾಹುಲ್ ಗಾಂಧಿ ಭೇಟಿ; ಇಲ್ಲಿದೆ ಪೂರ್ಣ ವೇಳಾಪಟ್ಟಿ title=
Pic Courtesy: ANI

ನವದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ನಾಗಾಲ್ಯಾಂಡ್ ಮತ್ತು ಅಸ್ಸಾಂಗೆ ಭೇಟಿ ನೀಡಲಿದ್ದಾರೆ. ಬೆಳಿಗ್ಗೆ ನಾಗಾಲ್ಯಾಂಡ್ನ ದಿಮಾಪುರ್ ಡಿಸ್ಟ್ರಿಕ್ಟ್ ಸ್ಪೋರ್ಟ್ಸ್ ಕ್ರೀಡಾಂಗಣದಲ್ಲಿ ಸಾರ್ವಜನಿಕ ಸಭೆ ನಡೆಸಲಿರುವ ರಾಹುಲ್, ಅಲ್ಲಿಂದ ಅಸ್ಸಾಂಗೆ ತೆರಳಲಿದ್ದಾರೆ.

ಏಪ್ರಿಲ್ 3 ರಂದು ರಾಹುಲ್ ಗಾಂಧಿ ಅವರ ನಾಗಾಲ್ಯಾಂಡ್ ಮತ್ತು ಅಸ್ಸಾಂ ಭೇಟಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.

  • ಬೆಳಗ್ಗೆ 10:45 ಕ್ಕೆ : ನಾಗಾಲ್ಯಾಂಡ್ನ ದಿಮಾಪುರ್ ಡಿಸ್ಟ್ರಿಕ್ಟ್ ಸ್ಪೋರ್ಟ್ಸ್ ಸ್ಟೇಡಿಯಂನಲ್ಲಿ ಸಾರ್ವಜನಿಕ ಸಭೆ.
  • ಮಧ್ಯಾಹ್ನ 12:45 ಕ್ಕೆ: ಅಸ್ಸಾಂನ ಗೋಲಾಘಾಟ್ ಜಿಲ್ಲೆಯ ಬೊಖಾಖತ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಗ್ರೌಂಡ್ನಲ್ಲಿ ಸಾರ್ವಜನಿಕ ಸಭೆ.
  • ಮಧ್ಯಾಹ್ನ 3:00 ಗಂಟೆಗೆ : ಅಸ್ಸಾಂನ ಉತ್ತರ ಲಖಿಮ್ಪುರ್ ನ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಸಾರ್ವಜನಿಕ ಸಭೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಉತ್ತರ ಪ್ರದೇಶದ ಅಮೇಥಿ ಮತ್ತು ಕೇರಳದ ವಯನಾಡ್ ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸಲಿದ್ದಾರೆ.

Trending News