ಪ್ರಯಾಣಿಕರೇ ಗಮನಿಸಿ! ಇಂದಿನಿಂದ ಬದಲಾಗಲಿದೆ ಹಲವು ರೈಲುಗಳ ವೇಳಾಪಟ್ಟಿ

ಉತ್ತರ ರೈಲ್ವೆ 267 ರೈಲುಗಳ ಸಮಯವನ್ನು ಬದಲಾಯಿಸಿದೆ. ಹೊಸ ವೇಳಾಪಟ್ಟಿ ಸೋಮವಾರದಿಂದ ಜಾರಿಗೆ ಬರಲಿದೆ.

Last Updated : Jul 1, 2019, 09:44 AM IST
ಪ್ರಯಾಣಿಕರೇ ಗಮನಿಸಿ! ಇಂದಿನಿಂದ ಬದಲಾಗಲಿದೆ ಹಲವು ರೈಲುಗಳ ವೇಳಾಪಟ್ಟಿ title=

ನವದೆಹಲಿ: ಜುಲೈ 1 ರಿಂದ ಜಾರಿಗೆ ಬರುವಂತೆ ಹೊಸ ವೇಳಾಪಟ್ಟಿಯನ್ನು ಪರಿಚಯಿಸಲಿದ್ದೇವೆ ಎಂದು ರೈಲ್ವೆ ಇಲಾಖೆ ಭಾನುವಾರ ತಿಳಿಸಿದೆ. ಉತ್ತರ ರೈಲ್ವೆ ತನ್ನ 267 ರೈಲುಗಳ ಸಮಯವನ್ನು ಬದಲಾಯಿಸಿದ್ದು, ಹೊಸ ವೇಳಾಪಟ್ಟಿ ಸೋಮವಾರದಿಂದ ಜಾರಿಗೆ ಬರಲಿದೆ.

ಉತ್ತರ ರೈಲ್ವೆ ವಲಯವು ನವದೆಹಲಿ-ಚಂಡೀಗಢ, ಚಂಡೀಗಢ- ನವದೆಹಲಿ ಮತ್ತು ನವದೆಹಲಿ-ಲಕ್ನೋ-ನವದೆಹಲಿ ಮಾರ್ಗದಲ್ಲಿ ಎರಡು ಹೊಸ ತೇಜಸ್ ಎಕ್ಸ್‌ಪ್ರೆಸ್ ರೈಲನ್ನು ಪರಿಚಯಿಸಿದೆ.

ಇದಲ್ಲದೆ ನಾಲ್ಕು ರೈಲುಗಳ ಸಂಚಾರವನ್ನು ವಿಸ್ತರಿಸಲಾಗಿದೆ. ಡೆಹ್ರಾಡೂನ್-ನವದೆಹಲಿ ನಂದಾ ದೇವಿ ಎಕ್ಸ್‌ಪ್ರೆಸ್ ಕೋಟಾ ಜಂಕ್ಷನ್ ಮತ್ತು ಅಲಿಗಮುರಾದ್ ಪ್ಯಾಸೆಂಜರ್ ಗಜ್ರೌಲಾ ತಲುಪಲಿದೆ. ರೈಲ್ವೆ ವಲಯವು 148 ರೈಲುಗಳ ನಿರ್ಗಮನ ಸಮಯವನ್ನು ಬದಲಾಯಿಸಿದ್ದು, 93 ರೈಲುಗಳ ಹೊರಡುವ ಸಮಯವನ್ನು ಈ ಮೊದಲೇ ಬದಲಾಯಿಸಿತ್ತು.

Trending News