ನವದೆಹಲಿ: ಕಳೆದ ಬಾರಿ ರಾಜಸ್ತಾನದಲ್ಲಿ 2013ರ ವಿಧಾನಸಭೆ ಮತ್ತು 2014ರ ಲೋಕಸಭೆಯಲ್ಲಿ ಜಯಭೇರಿ ಸಾಧಿಸಿದ್ದ ಬಿಜೆಪಿಗೆ ಭಾರಿ ಹಿನ್ನಡೆಯಾಗಿದೆ. ಈ ಬಾರಿಯ ರಾಜಸ್ತಾನದಲ್ಲಿನ ಉಪಚುನಾವಣೆಯನ್ನು ಈ ವರ್ಷ ನಡೆಯುವ ರಾಜ್ಯ ಚುನಾವಣೆಗೆ ಸೆಮಿಫೈನಲ್ ಎಂದೇ ಬಹುತೇಕರು ಪರಿಗಣಿಸಲಾಗಿದೆ.
ಸಧ್ಯ ಬಂದಿರುವ ವರದಿಯ ಪ್ರಕಾರ ಅಜ್ಮೀರ್,ಅಲ್ವಾರ್ ಲೋಕಸಭಾ ಕ್ಷೇತ್ರ ಮತ್ತು ಮತ್ತು ಮಂದಾಳಗಡ್ ನ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಭಾರಿ ಮುನ್ನಡೆ ಸಾಧಿಸಿದೆ. ಆ ಮೂಲಕ ಎಲ್ಲ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವತ್ತ ಕಾಂಗ್ರೆಸ್ ದಿಟ್ಟ ಇಟ್ಟಿದೆ.ಒಂದು ಕಡೆ ಅಜ್ಮೀರ್ ಲೋಕಸಭಾ ಕ್ಷೇತ್ರವು ಸಚಿನ್ ಪೈಲೆಟ್ ಗೆ ಪ್ರತಿಷ್ಠೆಯ ಸಂಗತಿಯಾಗಿದೆ ಈ ಹಿಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ಸೋಲನ್ನು ಅನುಭವಿಸಿದ್ದರು.ಈಗ ಈ ಕ್ಷೇತ್ರದಲ್ಲಿ ಕಾಂಗ್ರೆಸ್ 70 ಸಾವಿರ ಮತಗಳಿಂದ ಮುನ್ನಡೆ ಕಾಯ್ದುಕೊಂಡಿದೆ.
ಅದೇ ರೀತಿಯಾಗಿ ಅಲ್ವಾರ್ ನಲ್ಲಿಯೂ ಈ ಕೂಡ ಕಾಂಗ್ರೆಸ್ 72 ಸಾವಿರ ಮತಗಳಿಂದ ಮುನ್ನಡೆ ಸಾಧಿಸಿದೆ. ಕಳೆದ ವರ್ಷ ಏಪ್ರಿಲ್ ನಲ್ಲಿ ಪೆಹ್ಲು ಖಾನ್ ಎನ್ನುವ ವ್ಯಕ್ತಿಯನ್ನು ಗೊರಕ್ಷಕರು ಹತ್ಯೆಗೈದಿದ್ದರು. ಹೀಗೆ ಕೋಮು ಗಲಭೆಗಳನ್ನು ನಿಯಂತ್ರಿಸುವಲ್ಲಿ ವಿಫಲವಾದ ವಸುಂದರಾರಾಜೆ ಸರ್ಕಾರ್ ಈ ಬಾರಿ ಬೆಲೆ ತೆರಬೇಕಾಗಿದೆ.
ಮಂದಾಲಗಡ್ ವಿಧಾನ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಜಸ್ವಂತ್ ಯಾದವ್ ವಿರುದ್ದ ಕಾಂಗ್ರೆಸ್ ಅಭ್ಯರ್ಥಿ ಕರಣಸಿಂಗ್ ಯಾದವ್ 12 ಸಾವಿರ ಮತಗಳ ಅಂತರದಿಂದ ಜಯಶಾಲಿಯಾಗಿದ್ದಾರೆ.
ಪಶ್ಚಿಮ ಬಂಗಾಳ ದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷವು ಈಗಾಗಲೇ ನಪಾರಾ ವಿಧಾನಸಭಾ ಸೀಟನ್ನು ಗೆದ್ದುಕೊಂಡಿದೆ ಮತ್ತು ಉಲುಬೇರಿಯಾ ಕ್ಷೇತ್ರದಲ್ಲಿ ಅದು ಮುನ್ನಡೆ ಕಾಯ್ದುಕೊಂಡಿದೆ.