ನವದೆಹಲಿ: Ranjit Savarkar On Mahatma Gandhi - 'ಭಾರತದಂತಹ ದೇಶದಲ್ಲಿ ಯಾರೂ ರಾಷ್ಟ್ರಪಿತರಾಗಲು ಸಾಧ್ಯವಿಲ್ಲ' ಎಂದು ವಿನಾಯಕ್ ದಾಮೋದರ್ ಸಾವರ್ಕರ್ (Vinayak Damodar Savarkar) ಅವರ ಮೊಮ್ಮಗ (Grand Son) ರಂಜಿತ್ ಸಾವರ್ಕರ್ (Ranjit Savarkar) ಹೇಳಿದ್ದಾರೆ. 'ಭಾರತದಂತಹ ದೇಶದಲ್ಲಿ, ಈ ದೇಶವನ್ನು ನಿರ್ಮಿಸಲು ಸಹಾಯ ಮಾಡಿದ ಸಾವಿರಾರು ಮಹಾನ್ ವ್ಯಕ್ತಿಗಳನ್ನು ಮರೆತುಬಿಡಲಾಗಿದೆ. ಈ ದೇಶದ ಇತಿಹಾಸ 5000 ವರ್ಷಗಳಷ್ಟು ಹಳೆಯದು. ನನ್ನ ಪ್ರಕಾರ ಮಹಾತ್ಮಾ ಗಾಂಧಿ ರಾಷ್ಟ್ರಪಿತ ಅಲ್ಲ. ಈ ದೇಶ ಕೇವಲ ನಲವತ್ತೈದು ವರ್ಷಗಳಷ್ಟು ಹಳೆಯದಲ್ಲ. ನಾನು ಕೂಡ ರಾಷ್ಟ್ರಪಿತನ ಕಲ್ಪನೆಯನ್ನು ನಂಬುವುದಿಲ್ಲ' ಎಂದು ಅವರು ಹೇಳಿದ್ದಾರೆ.
ವೀರ ಸಾವರ್ಕರ್ ಅವರ ಕುರಿತು ಪುಸ್ತಕ ಅನಾವರಣಗೊಂಡ ಬಳಿಕ ವೀರ ಸಾವರ್ಕರ್ ಬಗ್ಗೆ ಹೊಸ ಚರ್ಚೆ ಆರಂಭವಾಗಿದೆ. ಇದಕ್ಕೂ ಮುನ್ನ ಮಂಗಳವಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಸರ್ಸಂಘಚಾಲಕ ಮೋಹನ್ ಭಾಗವತ್ (Mohan Bhagwat)ಅವರು ದೇಶದಲ್ಲಿ ಇಂದು ವೀರ ಸಾವರ್ಕರ್ ಬಗ್ಗೆ ಸರಿಯಾದ ಮಾಹಿತಿಯ ಕೊರತೆಯಿದೆ ಎಂದು ಹೇಳಿದ್ದರು. ಸಾವರ್ಕರ್ ಅವರ ಚಿಂತನೆಗಳು ದೇಶಕ್ಕೆ ಅಗತ್ಯವಿದೆ ಎಂದು ಅವರು ಹೇಳಿದ್ದರು. ದೇಶದಲ್ಲಿ ಸಾವರ್ಕರ್‌ರನ್ನು ಅವಹೇಳನ ಮಾಡುವ ಅಭಿಯಾನ ನಡೆಯುತ್ತಿದೆ ಎಂದು ಭಾಗವತ್ ಹೇಳಿದ್ದರು. ಸಾವರ್ಕರ್ ಹೆಸರು ದೇಶವನ್ನು ಜೋಡಿಸುವ ಹೆಸರಾಗಿದೆ ಎಂದು ಅವರು ಹೇಳಿದ್ದರು.
ಇದನ್ನೂ ಓದಿ-Indian Economy: ಆರ್ಥಿಕತೆಯ ವಿಷಯದಲ್ಲಿ ಡ್ರ್ಯಾಗನ್ ಹಿಂದಿಕ್ಕಿದ ಭಾರತ
ಭಾರತೀಯ ಪರಂಪರೆಯಲ್ಲಿ ಧರ್ಮದ ಅರ್ಥ ಜೋಡಿಸುವವ ಎಂದಾಗುತ್ತದೆ. ಇದನ್ನು ಪೂಜೆಯ ಜೊತೆಗೆ ಜೋಡಿಸಲು ಸಾಧ್ಯವಿಲ್ಲ. ಇಂದಿನ ಭಾಷೆಯಲ್ಲಿ ಹೇಳುವುದಾದರೆ ಮಾನವತೆ ಆಗುತ್ತದೆ. ಅವರೂ ಕೂಡ ಹಿಂದುತ್ವ ಪದ ಬಳಕೆ ಮಾಡುತ್ತಿದ್ದರು. ಆದರೆ, ಅದನ್ನು ಈ ರೀತಿ ಅರ್ಥೈಸಲಾಗುತ್ತಿರಲಿಲ್ಲ ಎಂದು ಭಾಗವತ್ ಹೇಳಿದ್ದರು.
ಇದನ್ನೂ ಓದಿ-ಪ್ರತಿ ಭಾರತೀಯರಿಗೂ ಸಿಗಲಿದೆ ವೈದ್ಯಕೀಯ ವಿಮಾ ರಕ್ಷಣೆ, ಈ ಯೋಜನೆಯ ವಿಸ್ತಾರಕ್ಕೆ ಸರ್ಕಾರದ ಸಿದ್ಧತೆ!
ಸಂಘದ ಮುಖ್ಯಸ್ಥರು ಹೇಳಿದ್ದೇನು?
ಸರ್ ಸಯ್ಯದ್ ಅಹ್ಮದ್ ಖಾನ್ ಅವರನ್ನು ಹಿಂದೂ ಮಹಾಸಭಾ ಮೂಲಕ ಸ್ವಾಗತಿಸಲಾಗಿತ್ತು ಮತ್ತು ಆಗ ಅವರನ್ನು ಮೊದಲ ಮುಸ್ಲಿಂ ಬ್ಯಾರಿಸ್ಟರ್ ಎಂದು ಉಲ್ಲೇಖಿಸಿದಾಗ ಅವರು ನಾನು ಇತರರಿಗಿಂತ ಭಿನ್ನವಾಗಿದ್ದೆನೆಯೇ? ಎಂದು ಪ್ರಶ್ನಿಸಿದ್ದರು. ಇನ್ನೊಂದೆಡೆ ನನಗೆ ಒಂದು ವೇಳೆ ಮರುಜನ್ಮವಿದ್ದರೆ ಅದು ಭಾರತದಲ್ಲಿರಬೇಕು ಎಂದು ಬಿಸ್ಮಿಲ್ (Bismil) ಹೇಳಿದ್ದರು. ಭಾರತದಿಂದ ಹೋದ ಮುಸ್ಲಿಮರಿಗೆ ಪಾಕಿಸ್ತಾನದಲ್ಲಿಯೋ ಪ್ರತಿಷ್ಠೆ ಇಲ್ಲ. ಭಾರತದಲ್ಲಿ, ಪ್ರತಿಯೊಬ್ಬರ ಪೂರ್ವಜರು ಒಂದೇ ಆಗಿದ್ದಾರೆ. ತಮ್ಮ ಲೂಟಿಯನ್ನು ಮುಂದುವರಿಸಲು ಬ್ರಿಟಿಷರು ವಿಭಜನೆಯಲ್ಲಿ ನಂಬಿಕೆ ಇಟ್ಟಿದ್ದರು ಎಂದು ಆರ್ ಎಸ್ ಎಸ್ ಮುಖ್ಯಸ್ಥರು ಹೇಳಿದ್ದರು. ನಾವು ಒಂದಲ್ಲ ನಾವು ಬೇರೆ ಬೇರೆಯಾಗಿದ್ದೇವೆ ಎಂಬ ಗಲಾಟೆ ನಡೆದಾಗ, ನಾವು ಪೂಜೆಯ ಹೆಸರಿನಲ್ಲಿ ತಾರತಮ್ಯ ಮಾಡುವುದು ಸರಿಯಲ್ಲ ಮತ್ತು ಅದಕ್ಕಾಗಿಯೇ ಸಾವರ್ಕರ್ ಕಟುವಾಗಿ ಮಾತನಾಡಿದ್ದರು ಎಂದು ಭಾಗವತ್ ಹೇಳಿದ್ದಾರೆ.
ಇದನ್ನೂ ಓದಿ-ಈಗ 2 ರಿಂದ 18 ವರ್ಷದ ಮಕ್ಕಳಿಗೂ ಭಾರತದಲ್ಲಿ ಕರೋನಾ ಲಸಿಕೆ, ಅನುಮೋದನೆ ನೀಡಿದ ಡಿಸಿಜಿಐ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.