Coronavirus ಪೀಡಿತ ಇರಾನ್‌ನಲ್ಲಿ ಸಿಲುಕಿದ್ದ 53 ಭಾರತೀಯರು ಸ್ವದೇಶಕ್ಕೆ ವಾಪಸ್

ಕಳೆದ ಕೆಲವು ದಿನಗಳಲ್ಲಿ, ಭಾರತವು ಇರಾನ್‌ನಿಂದ ಭಾರತೀಯರನ್ನು ಸ್ಥಳಾಂತರಿಸುವ ಹಲವಾರು ಕಾರ್ಯಗಳನ್ನು ನಡೆಸಿದೆ.

Last Updated : Mar 16, 2020, 10:21 AM IST
Coronavirus ಪೀಡಿತ ಇರಾನ್‌ನಲ್ಲಿ ಸಿಲುಕಿದ್ದ 53 ಭಾರತೀಯರು ಸ್ವದೇಶಕ್ಕೆ ವಾಪಸ್ title=
Image Courtesy: PTi

ನವದೆಹಲಿ: ಕೊರೊನಾವೈರಸ್ ಪೀಡಿತ ಇರಾನ್‌ನಲ್ಲಿ ಸಿಲುಕಿದ್ದ 53 ಭಾರತೀಯರ ನಾಲ್ಕನೇ ಬ್ಯಾಚ್ ದೇಶಕ್ಕೆ ಆಗಮಿಸಿದೆ. 53 ಭಾರತೀಯರಲ್ಲಿ 52 ವಿದ್ಯಾರ್ಥಿಗಳು ಮತ್ತು ಒಬ್ಬರು ಶಿಕ್ಷಕರು ಸೇರಿದ್ದಾರೆ. ಇದರೊಂದಿಗೆ ಒಟ್ಟು 389 ಭಾರತೀಯರು ಇರಾನ್‌ನಿಂದ ಭಾರತಕ್ಕೆ ಮರಳಿದ್ದಾರೆ.

ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಸೋಮವಾರ ಮುಂಜಾನೆ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ ಮತ್ತು "ನಾಲ್ಕನೇ ಬ್ಯಾಚ್ 53 ಭಾರತೀಯರಲ್ಲಿ  - 52 ವಿದ್ಯಾರ್ಥಿಗಳು ಮತ್ತು ಒಬ್ಬ ಶಿಕ್ಷಕ - ಟೆಹ್ರಾನ್ ಮತ್ತು ಶಿರಾಜ್, # ಇರಾನ್ ನಿಂದ ಆಗಮಿಸಿದ್ದಾರೆ. ಇದರೊಂದಿಗೆ ಒಟ್ಟು 389 ಭಾರತೀಯರು ಭಾರತಕ್ಕೆ ಮರಳಿದ್ದಾರೆ @India_in_Iran  ಮತ್ತು ಇರಾನಿನ ಅಧಿಕಾರಿಗಳ ಪ್ರಯತ್ನಕ್ಕೆ ಧನ್ಯವಾದಗಳು" ಎಂದವರು ಬರೆದಿದ್ದಾರೆ.

ಕರೋನವೈರಸ್ ಪೀಡಿತ ಇರಾನ್‌ನಲ್ಲಿ ಸಿಕ್ಕಿಬಿದ್ದ ಜನರಲ್ಲಿ 234 ಭಾರತೀಯರು ಭಾರತಕ್ಕೆ ಆಗಮಿಸಿದ್ದಾರೆ ಎಂದು ಜೈಶಂಕರ್ ಭಾನುವಾರ ಮುಂಜಾನೆ ಹೇಳಿದ್ದಾರೆ.

ಕಳೆದ ಕೆಲವು ದಿನಗಳಲ್ಲಿ, ಭಾರತವು ಇರಾನ್‌ನಿಂದ ಭಾರತೀಯರನ್ನು ಸ್ಥಳಾಂತರಿಸುವ ಹಲವಾರು ಕಾರ್ಯಗಳನ್ನು ನಡೆಸಿದೆ. 58 ಪ್ರಜೆಗಳನ್ನು ಒಳಗೊಂಡ ಮೊದಲ ಬ್ಯಾಚ್ ಅನ್ನು ಮಂಗಳವಾರ ಸಿ 17 ಮಿಲಿಟರಿ ಸಾರಿಗೆ ವಿಮಾನದಲ್ಲಿ ಮರಳಿ ತರಲಾಯಿತು ಮತ್ತು ಶುಕ್ರವಾರ 44 ಜನರನ್ನು ಸ್ಥಳಾಂತರಿಸಲಾಯಿತು.

ಕರೋನವೈರಸ್ ಪೀಡಿತ ದೇಶಗಳಲ್ಲಿ ಇರಾನ್ ಸಹ ಒಂದು, ಸಾವಿನ ಸಂಖ್ಯೆ 724 ರಷ್ಟಿದೆ. ಮಾರಕ ಸೋಂಕಿನ ಪ್ರಕರಣಗಳು 14,000 ಕ್ಕೆ ತಲುಪಿದೆ ಎಂದು ಅಲ್ ಜಜೀರಾ ತಿಳಿಸಿದೆ.

Trending News