ಜೀವಂತವಾಗಿ ಹೊರತೆಗೆಯಲಾದರೂ ಬದುಕುಳಿಯಲಿಲ್ಲ ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಬಾಲಕ

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್‌) ತಂಡ ನಿರಂತರವಾಗಿ ಕಾರ್ಯಾಚರಣೆ ನಡೆಸಿ ಸತತ 110 ಗಂಟೆಗಳ ಬಳಿಕ 150 ಅಡಿ ಆಳದ ಕೊಳವೆ ಬಾವಿಯಲ್ಲಿ ಜೂನ್ 6 ರಂದು ಬಿದ್ದಿದ್ದ ಎರಡು ವರ್ಷದ ಮಗು ಫತೇವಿರ್ ಸಿಂಗ್ ನನ್ನು ಜೀವಂತವಾಗಿ ರಕ್ಷಿಸಿತ್ತು.

Last Updated : Jun 11, 2019, 10:24 AM IST
ಜೀವಂತವಾಗಿ ಹೊರತೆಗೆಯಲಾದರೂ ಬದುಕುಳಿಯಲಿಲ್ಲ ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಬಾಲಕ title=
Pic Courtesy: ANI

ಸಂಗ್ರೂರ್ (ಪಂಜಾಬ್): ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್‌) ತಂಡ ನಿರಂತರವಾಗಿ ಕಾರ್ಯಾಚರಣೆ ನಡೆಸಿ ಸತತ 110 ಗಂಟೆಗಳ ಬಳಿಕ 150 ಅಡಿ ಆಳದ ಕೊಳವೆ ಬಾವಿಯಲ್ಲಿ ಜೂನ್ 6 ರಂದು ಬಿದ್ದಿದ್ದ ಎರಡು ವರ್ಷದ ಮಗು ಫತೇವಿರ್ ಸಿಂಗ್‌ನನ್ನು ಜೀವಂತವಾಗಿ ರಕ್ಷಿಸಿತ್ತಾದರೂ ಬದುಕುಳಿಯಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಜೂನ್ 6 ರಂದು ಗುರುವಾರ ಫತೇವೀರ್ ಸಿಂಗ್ ಭವಾವಾನ್ಪುರ ಗ್ರಾಮದ ತನ್ನ ಮನೆಯಲ್ಲಿ ಆಟವಾಡುತ್ತಿದ್ದ ಸಮಯದಲ್ಲಿ ಸಂಜೆ 4 ಗಂಟೆಯ ಹೊತ್ತಿಗೆ ಆಕಸ್ಮಿಕವಾಗಿ ಕೊಳವೆ ಬಾವಿಗೆ ಬಿದ್ದಿದ್ದ. ಬಳಿಕ  ಸ್ಥಳೀಯರು ಹಾಗೂ ಪೊಲೀಸರ ಸಹಕಾರದಿಂದ ಮಗುವನ್ನು ರಕ್ಷಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ನಿರಂತರ ಕಾರ್ಯಾಚರಣೆ ನಡೆಸಿತ್ತು. 

ಮಗು ಇರುವ ಸ್ಥಳಕ್ಕೆ ಆಮ್ಲಜನಕ ಒದಗಿಸಲು ಅಧಿಕಾರಿಗಳು ಯಶಸ್ವಿಯಾದರು. ಆದರೂ ಎರಡು ವರ್ಷದ ಮಗುವಿಗೆ ಸತತ 110 ಗಂಟೆ ನೀರು ಆಹಾರ ಒದಗಿಸಲು ಸಾಧ್ಯವಾಗಲಿಲ್ಲ. ಸತತ ನಾಲ್ಕು ದಿನಗಳ ಕಾರ್ಯಾಚರಣೆ ಬಳಿಯ ಕೊಳವೆ ಬಾವಿಯಿಂದ ಫತೇಹ್‌ವಿರ್ ಸಿಂಗ್‌ನನ್ನು ಜೀವಂತವಾಗಿ ಹೊರ ತೆಗೆದಾಗ ಅವನ ಆರೋಗ್ಯ ತೀವ್ರ ಗಂಭೀರವಾಗಿತ್ತು, ತಕ್ಷಣ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅದಾಗ್ಯೂ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Trending News