ನವದೆಹಲಿ: ಬಿಜೆಪಿ ಅಭ್ಯರ್ಥಿ ಪ್ರಗ್ಯಾ ಸಿಂಗ್ ಠಾಕೂರ್ ಭಾನುವಾರದಂದು 72 ಗಂಟೆಗಳವರೆಗೆ ಚುನಾವಣಾ ಆಯೋಗದಿಂದ ನಿಷೇಧಿಸಲ್ಪಟ್ಟಿದ್ದಕ್ಕೆ ಕಾಂಗ್ರೆಸ್ ಪಕ್ಷದ ಮೇಲೆ ದೂರಿದ್ದಾರೆ.
ಬಾಬರಿ ಮಸೀದಿ ಕುರಿತ ಅವರ ಹೇಳಿಕೆಗಳಿಗಾಗಿ 72 ಗಂಟೆಗಳ ಕಾಲ ಅವರನ್ನು ಚುನಾವಣಾ ಪ್ರಚಾರದಿಂದ ಚುನಾವಣಾ ಆಯೋಗ ನಿಷೇಧಿಸಿತ್ತು.ಈ ಹಿನ್ನಲೆಯಲ್ಲಿ ಈಗ ತಮ್ಮ ಮೇಲಿನ ನಿಷೇಧಕ್ಕೆ ಕಾಂಗ್ರೆಸ್ ಪಕ್ಷವೇ ಕಾರಣವೆಂದು ಟೀಕಿಸಿದ್ದಾರೆ.
Madhya Pradesh: BJP's candidate from Bhopal, Pragya Singh Thakur campaigns for elections; On May 1, Election Commission of India had banned her from campaigning for 72 hours for her remarks on Babri Masjid. #LokSabhaElections2019 pic.twitter.com/YOXWAPHLmp
— ANI (@ANI) May 5, 2019
"ಅವರು ನನ್ನ ಮೇಲೆ 72 ಗಂಟೆಗಳ ನಿಷೇಧವನ್ನು ಹೇರಿದ್ದರು, ಅದರ ಹಿಂದೆ ಯಾವುದೇ ಕಾರಣವಿರಲಿಲ್ಲ ಮತ್ತು ನಾನು ದೇಶ ಭಕ್ತಿಯ ಕುರಿತು ಮಾತನಾಡಿದ ಕಾರಣ ಅದು ಅವರಿಗೆ ಸರಿ ಬಂದಿರಲಿಲ್ಲ.ಇದರಿಂದ ಅವರು ಹೆದರಿ ನನ್ನ ಮೇಲೆ 72 ಗಂಟೆಗಳ ಕಾಲ ನಿಷೇಧವನ್ನು ಹೇರಿದ್ದಾರೆ" ಎಂದು ಪ್ರಗ್ಯಾ ಆರೋಪಿಸಿದ್ದಾರೆ.
ಪ್ರಗ್ಯಾ ಏಪ್ರಿಲ್ 20 ರಂದು ಖಾಸಗಿ ವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡುತ್ತಾ " ನಾವು ಭವ್ಯವಾದ ರಾಮ ಮಂದಿರವನ್ನು ನಿರ್ಮಿಸುತ್ತೇವೆ. ನಾವು ಮಸೀದಿಯನ್ನು ಕೆಡವಲು ಹೋಗಿದ್ದೇವು, ಅದರ ಬಗ್ಗೆ ನಮಗೆ ಹೆಮ್ಮೆ ಇದೆ" ಎಂದು ಹೇಳಿಕೆ ನೀಡಿದ್ದರು.ಈ ವಿವಾದಾತ್ಮಕ ಹೇಳಿಕೆಗೆ ಪ್ರಗ್ಯಾ ವಿರುದ್ಧ ಐಪಿಸಿ ಸೆಕ್ಷನ್ 188 ಅಡಿಯಲ್ಲಿ ಮಧ್ಯಪ್ರದೇಶ ಪೊಲೀಸರು ಎಫ್ಐಆರ್ ದಾಖಲಿಸಿದ್ದಲ್ಲದೆ ಚುನಾವಣಾ ಆಯೋಗವು ಮೂರು ದಿನಗಳ ಕಾಲ ಚುನಾವಣಾ ಪ್ರಚಾರದಿಂದ ನಿಷೇಧ ಹೇರಿತ್ತು.
ಮಾಲೆಗಾಂ ಸ್ಪೋಟದ ಆರೋಪಿಯಾಗಿರುವ ಪ್ರಗ್ಯಾ ಸಿಂಗ್ ಈಗ ಭೂಪಾಲ್ ನಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಮುಂಬೈ 26/11 ದಾಳಿಯ ವೇಳೆ ಮೃತಪಟ್ಟಿದ್ದ ಹಿರಿಯ ಪೋಲಿಸ್ ಅಧಿಕಾರಿ ಹೇಮಂತ್ ಕರ್ಕರೆ ತಮ್ಮ ಶಾಪದಿಂದಾಗಿ ಸತ್ತರು ಎಂದು ಪ್ರಗ್ಯಾ ವಿವಾದಾತ್ಮಕ ಹೇಳಿಕೆ ನೀಡಿದ್ದರು.