ನವದೆಹಲಿ: ಮಹಾರಾಷ್ಟ್ರದ ನೂತನ ಸಿಎಂ ಆಗಿ ಏಕನಾಥ್ ಸಿಂಧೆ ನೇಮಕವಾಗಿರುವ ಬೆನ್ನಲ್ಲೇ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಆದಿತ್ಯ ಠಾಕ್ರೆ 'ಪಕ್ಷದಲ್ಲಿ ಹೆಚ್ಚಿನ ಆಕಾಂಕ್ಷೆಯನ್ನು ಹೊಂದಿರುವ ಜನರು ಇದ್ದಾರೆ ಎನ್ನುವುದು ನನಗೆ ನಮ್ಮ ತಂದೆಗೆ ತಿಳಿದಿತ್ತು ಎಂದು ಅವರು ಹೇಳಿದರು.
'ಕೆಲವರು ತಮ್ಮ ಸ್ವಂತ ಪಕ್ಷಕ್ಕೆ ಮತ್ತು ತಮ್ಮ ಸ್ವಂತ ಕುಟುಂಬಕ್ಕೆ ಹೀಗೆ ಮಾಡುತ್ತಾರೆ ಎಂದು ಊಹಿಸುವುದು ಕೂಡ ಕಷ್ಟ, ನಿಮ್ಮನ್ನು ಕುಟುಂಬದಂತೆ ಪರಿಗಣಿಸಿದ ವ್ಯಕ್ತಿಯೇ ಕುಟುಂಬದ ವಿರುದ್ಧ ಹೋಗುವುದಾದರೂ ಹೇಗೆ? ಎಂದು ಅವರು ಪ್ರಶ್ನಿಸಿದ್ದಾರೆ.
'ಈ ಇಡೀ ನಾಟಕ ಪ್ರಾರಂಭವಾಗುವ ಒಂದು ತಿಂಗಳ ಮೊದಲು ನಮಗೆ ಕೆಲವು ಜನರ ಮಹತ್ವಾಕಾಂಕ್ಷೆಗಳು ಮತ್ತು ಅವರು ಏನಾಗಬೇಕೆಂದು ಬಯಸುತ್ತಾರೆ ಎಂಬುದರ ಬಗ್ಗೆ ಒಂದು ನಿರ್ದಿಷ್ಟ ಕಲ್ಪನೆಯನ್ನು ಹೊಂದಿದ್ದೆವು'ಎಂದು ಅವರು ಹೇಳಿದರು.
ಇದನ್ನೂ ಓದಿ-Ration Card: ರೇಶನ್ ಕಾರ್ಡ್ ಧಾರಕರಿಗೆ ಬಿಗ್ ಶಾಕ್! ಸರ್ಕಾರದಿಂದ ಬೆಚ್ಚಿಬೀಳಿಸುವ ನಿರ್ಧಾರ
'ನಾವು ಎಲ್ಲರಿಗೂ ಸಾಕಷ್ಟು ಗೌರವವನ್ನು ನೀಡಿದ್ದೇವೆ, ನೀವು 10-12 ವರ್ಷ ವಯಸ್ಸಿನಿಂದ ನೋಡಿದವರು ಒಳ್ಳೆಯ ಕೆಲಸ ಮಾಡುತ್ತಿದ್ದರೆ, ಜನರಿಂದ ಮೆಚ್ಚುಗೆ ಪಡೆದರೆ ಮತ್ತು ನೀವು ಅದನ್ನು ನೋಡಿ ಸಂತೋಷ ಪಡುವ ಬದಲು ಅಸೂಹೆಯನ್ನು ವ್ಯಕ್ತಪಡಿಸುತ್ತಿದ್ದರೆ ಅದು ಮಾನವೀಯತೆಯಲ್ಲಿನ ನೈತಿಕ ಮೌಲ್ಯಗಳ ಮಟ್ಟವನ್ನು ತೋರಿಸುತ್ತದೆ ಎಂದು ಅವರು ಹೇಳಿದರು
'ನನ್ನ ತಂದೆ, ಅಜ್ಜ ಮತ್ತು ಅವರ ತಂದೆ ಎಲ್ಲರೂ ಕೂಡ ಈಗ ಅಧಿಕಾರ ಇರುತ್ತೆ ಹೋಗುತ್ತೆ, ಆದರೆ ಒಬ್ಬರ ಖ್ಯಾತಿ ಮತ್ತು ಗೌರವವನ್ನು ಎಂದಿಗೂ ಕೂಡ ಕಳೆದುಕೊಳ್ಳಬಾರದು ಎಂದು ಬಲವಾಗಿ ನಂಬಿದವರು, ಹಾಗಾಗಿ ನಾವು ಇಲ್ಲಿ ಸೇವೆಯನ್ನು ಮಾಡಲು ಬಂದಿದ್ದೇವೆ. ಈಗ ಪರಿಸ್ಥಿತಿಗಳು ಹೇಗೆ ನಡೆಯುತ್ತವೆ ಎನ್ನುವುದನ್ನು ನಾವು ನೋಡುತ್ತೇವೆ ಎಂದು ಅವರು ಹೇಳಿದರು.
ಇದನ್ನೂ ಓದಿ-24-06-2022 Today Vegetable Price: ಇಂದು ತರಕಾರಿ-ಹಣ್ಣಿನ ಬೆಲೆ ಹೀಗಿದೆ
ಇದೆ ವೇಳೆ ತಮ್ಮ ತಂದೆ ಉದ್ದವ್ ಠಾಕ್ರೆ ಅವರು ಮುಖ್ಯಮಂತ್ರಿ ಸ್ಥಾನದಿಂದ ಇಳಿಯುವ ಸಂದರ್ಭದಲ್ಲಿ ಪ್ರಬುದ್ಧರಾಗಿ ವರ್ತಿಸಿದ್ದಾರೆ ಎಂದು ಆದಿತ್ಯ ಠಾಕ್ರೆ ಹೇಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ