ಎಸ್‍ಬಿಐನಿಂದ ಬಡ್ಡಿ ದರ ಕಡಿತ; ಇಂದಿನಿಂದ ಗೃಹ, ವಾಹನ, ವೈಯಕ್ತಿಕ ಸಾಲ ಮತ್ತಷ್ಟು ಅಗ್ಗ!

ಎಲ್ಲಾ ಎಂಸಿಎಲ್ಆರ್ ಸಂಬಂಧಿತ ಸಾಲಗಳ ಬಡ್ಡಿದರವು ಜುಲೈ 10, 2019 ರಿಂದ ಐದು ಪಾಯಿಂಟ್ಗಳಷ್ಟು ಕಡಿತವಾಗಲಿದೆ" ಎಂದು ಎಸ್ಬಿಐ ಹೇಳಿಕೆಯಲ್ಲಿ ತಿಳಿಸಿದೆ. 

Last Updated : Jul 10, 2019, 11:46 AM IST
ಎಸ್‍ಬಿಐನಿಂದ ಬಡ್ಡಿ ದರ ಕಡಿತ; ಇಂದಿನಿಂದ ಗೃಹ, ವಾಹನ, ವೈಯಕ್ತಿಕ ಸಾಲ ಮತ್ತಷ್ಟು ಅಗ್ಗ! title=

ನವದೆಹಲಿ: ಕಳೆದ ಎರಡು ದಿನಗಳ ಹಿಂದಷ್ಟೇ ಗ್ರಾಹಕರಿಗೆ ರೆಪೋ ದರ ಕಡಿತಗೊಳಿಸುವ ಬಗ್ಗೆ ಆರ್‌ಬಿಐ ಗವರ್ನರ್ ದಾಸ್ ಬ್ಯಾಂಕುಗಳಿಗೆ ತಿಳಿಸಿದ್ದ ಬೆನ್ನಲ್ಲೇ ಸಾರ್ವಜನಿಕ ವಲಯದ ದೇಶದ ಅತಿದೊಡ್ಡ ಬ್ಯಾಂಕ್ ಎಸ್‌ಬಿಐ, ಎಂಸಿಎಲ್‌ಆರ್ನಲ್ಲಿ 5 ಪಾಯಿಂಟ್‌ಗಳನ್ನು ಕಡಿತಗೊಳಿಸಿದೆ. 

ಈ ಕಡಿತದ ಬಳಿಕ, ಗೃಹ ಸಾಲ, ಕಾರು ಸಾಲ, ವೈಯಕ್ತಿಕ ಸಾಲ ಸೇರಿದಂತೆ ಇತರ ಸಾಲಗಳ ಮೇಲಿನ ಬಡ್ಡಿದರವನ್ನು ಬ್ಯಾಂಕ್ ಕಡಿತಗೊಳಿಸಿದೆ. ಹೀಗಾಗಿ ಒಂದು ವರ್ಷದ ಸಾಲಗಳ ಮೇಲಿನ ಬಡ್ಡಿದರ ವಾರ್ಷಿಕ ಶೇ.8.45 ರಿಂದ ಶೇ.8.40ಕ್ಕೆ ಇಳಿದಿದೆ.

"ಎಲ್ಲಾ ಎಂಸಿಎಲ್ಆರ್ ಸಂಬಂಧಿತ ಸಾಲಗಳ ಬಡ್ಡಿದರವು ಜುಲೈ 10, 2019 ರಿಂದ ಐದು ಪಾಯಿಂಟ್ಗಳಷ್ಟು ಕಡಿತವಾಗಲಿದೆ" ಎಂದು ಎಸ್ಬಿಐ ಹೇಳಿಕೆಯಲ್ಲಿ ತಿಳಿಸಿದೆ. ಇದು 2019-20ರ ಆರ್ಥಿಕ ವರ್ಷದಲ್ಲಿ ಮೂರನೇ ದರ ಕಡಿತವಾಗಿದ್ದು, 2019 ರ ಏಪ್ರಿಲ್ 10 ರ ನಂತರ ಗೃಹ ಸಾಲವು ಶೇ. 0.20ರಷ್ಟು ಅಗ್ಗವಾಗಿದೆ.

ಇಲ್ಲಿಯವರೆಗೆ ರೆಪೋ ದರದಲ್ಲಿ 75 ಅಂಕಗಳನ್ನು ಕಡಿತಗೊಳಿಸಲಾಗಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ. 

Trending News