ಗೋ ರಕ್ಷಣೆ ಹೆಸರಲ್ಲಿ ಹಿಂಸಾಚಾರ ತಡೆಗೆ ಹೊಸ ಕಾನೂನು ರೂಪಿಸಲು ಸುಪ್ರೀಂ ಆದೇಶ

ದೇಶದಲ್ಲಿ ಹಿಂಸಾಚಾರ ತಡೆಗೆ ಕಠಿಣ ಕಾನೂನು ರಚಿಸುವಂತೆ ಸಂಸತ್ತಿಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. 

Last Updated : Jul 17, 2018, 01:29 PM IST
ಗೋ ರಕ್ಷಣೆ ಹೆಸರಲ್ಲಿ ಹಿಂಸಾಚಾರ ತಡೆಗೆ ಹೊಸ ಕಾನೂನು ರೂಪಿಸಲು ಸುಪ್ರೀಂ ಆದೇಶ title=

ನವದೆಹಲಿ: ಗೋರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಮಂಗಳವಾರ ನಿರ್ಣಾಯಕ ತೀರ್ಪು ನೀಡಿದ ಸುಪ್ರೀಂ ಕೋರ್ಟ್, ದೇಶದಲ್ಲಿ ಹಿಂಸಾಚಾರ ತಡೆಗೆ ಕಠಿಣ ಕಾನೂನು ರಚಿಸುವಂತೆ ಸಂಸತ್ತಿಗೆ ಆದೇಶ ನೀಡಿದೆ. 

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರಾದ ದೀಪಕ್ ಮಿಶ್ರಾ, ಎ.ಎಂ. ಖಾನ್ ವಿಲ್ಕಾರ್ ಹಾಗೂ ಡಿ.ವೈ. ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠ ಈ ಆದೇಶ ನೀಡಿದ್ದು, ಗೋರಕ್ಷಣೆಯ ಹೆಸರಿನಲ್ಲಿನ ಹಿಂಸೆ ಹಾಗೂ ಗುಂಪು ದಾಳಿಯನ್ನು ಮಟ್ಟಹಾಕುವಲ್ಲಿ ಹೊಸ ಕಾನೂನನ್ನು ರಚಿಸಬೇಕಾದ ಅಗತ್ಯವಿದ್ದು, ಭವಿಷ್ಯದಲ್ಲಿ ಇಂತಹ ಘಟನೆ ಮರುಕಳಿಸದಂತೆ ತಡೆಯುವ ನಿಟ್ಟಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಕಠಿಣ ಕಾನೂನು ರಚಿಸಬೇಕಾಗಿದೆ ಎಂದು ಹೇಳಿದ್ದಾರೆ. 

ಅನಾವಶ್ಯಕವಾಗಿ ಸುಳ್ಳು ಸುದ್ದಿಗಳ ಆಧಾರದ ಮೇಲೆ ಹಲ್ಲೆ ಹತ್ತು ಹತ್ಯೆ ಮಾಡುವ ಕೃತ್ಯಗಳು ಸಾರ್ವಜನಿಕರಲ್ಲಿ ಹೆಚ್ಚಾಗುತ್ತಿದೆ. ಇದು ಪ್ರಜಾಪ್ರಭುತ್ವಕ್ಕೇ ಮಾರಕ. ದೇಶದ ಯಾವೊಬ್ಬ ನಾಗರಿಕನೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಇದರ ವಿರುದ್ಧ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರ ಕೂಡ ನಿಯಮ ಜಾರಿಗೊಳಿಸಬೇಕಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. 

Trending News