ನಾಲ್ಕು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ

ಪೋಷಕರು ನೀಡಿದ ದೂರಿನ ಅನ್ವಯ ಆರೋಪಿ ಶಂಭು ಎಂಬಾತನನ್ನು ಪೋಕ್ಸೋ ಕಾಯಿದೆ(Protection of Children From Sexual Offences-POCSO) ಅಡಿಯಲ್ಲಿ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿತ್ತು. 

Last Updated : Dec 12, 2018, 06:00 PM IST
ನಾಲ್ಕು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ title=

ಗುರುಗ್ರಾಮ: ಎರಡು ವರ್ಷಗಳ ಹಿಂದೆ 4 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಶಾಲಾ ಬಸ್ ನಿರ್ವಾಹಕನಿಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. 

2016ರ ಆಗಸ್ಟ್ ತಿಂಗಳಲ್ಲಿ ಈ ಘಟನೆ ನಡೆದಿತ್ತು. ಅಂದು ದಿನ ಕಿಂಡರ್ ಗಾರ್ಡನ್‌ನಿಂದ ಬಸ್‌ನಲ್ಲಿ ಮರಳುತ್ತಿದ್ದ ಬಾಲಕಿ ಮೇಲೆ ನಿರ್ವಾಹಕ ಶಂಭು ಎಂಬಾತ ಅತ್ಯಾಚಾರ(Digital Rape) ಎಸಗಿದ್ದ. ಬಳಿಕ ಆ ಮಗು ಮನೆಯಲ್ಲಿ ಪೋಷಕರಿಗೆ ಈ ವಿಚಾರ ತಿಳಿಸಿದ್ದರಿಂದ ಪೋಷಕರು ಆತನ ವಿರುದ್ಧ ದೂರು ದಾಖಲಿಸಿದ್ದರು. ಅಷ್ಟೇ ಅಲ್ಲದೆ, ಈ ಘಟನೆ ಹಲವು ಪೋಷಕರಲ್ಲಿ ಆತಂಕ ಸೃಷ್ಟಿಸಿದ್ದಲ್ಲದೆ, ಮಕ್ಕಳ ಸುರಕ್ಷತೆ ಬಗ್ಗೆ ಸಾಕಷ್ಟು ಜಾಗೃತಿ ಕಾರ್ಯಕ್ರಮ, ಅಭಿಯಾನಗಳೂ ನಡೆದಿದ್ದವು.

ಪೋಷಕರು ನೀಡಿದ ದೂರಿನ ಅನ್ವಯ ಆರೋಪಿ ಶಂಭು ಎಂಬಾತನನ್ನು ಪೋಕ್ಸೋ ಕಾಯಿದೆ(Protection of Children From Sexual Offences-POCSO) ಅಡಿಯಲ್ಲಿ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿತ್ತು. 2 ವರ್ಷಗಳ ಕಾಲ ನಡೆದ ವಿಚಾರಣೆಯಲ್ಲಿ ಆರೋಪ ಸಾಬೀತಾಗಿದ್ದು ಆತನಿಗೆ ನ್ಯಾಯಾಲಯ 20 ವರ್ಷಗಳ ಜೈಲು ಶಿಕ್ಷೆ ಮತ್ತು 50,000 ರೂ. ದಂಡ ವಿಧಿಸಲಾಗಿದೆ. 
 

Trending News