ಬುಲಂದ್‌ಶಹರ್‌ನಲ್ಲಿ ಭೀಕರ ಅಪಘಾತ: ಭಕ್ತರ ಮೇಲೆ ಬಸ್ ಹರಿದು 7 ಮಂದಿ ದುರ್ಮರಣ

ಮೃತರಲ್ಲಿ ನಾಲ್ವರು ಮಹಿಳೆಯರು ಮತ್ತು ಮೂವರು ಮಕ್ಕಳು ಸೇರಿದ್ದಾರೆ ಎನ್ನಲಾಗಿದೆ. 

Updated: Oct 11, 2019 , 09:13 AM IST
ಬುಲಂದ್‌ಶಹರ್‌ನಲ್ಲಿ ಭೀಕರ ಅಪಘಾತ: ಭಕ್ತರ ಮೇಲೆ ಬಸ್ ಹರಿದು 7 ಮಂದಿ ದುರ್ಮರಣ

ಬುಲಂದ್‌ಶಹರ್‌: ಉತ್ತರ ಪ್ರದೇಶದ ಬುಲಂದಹರ್ನಲ್ಲಿ ರಸ್ತೆ ಬದಿಯಲ್ಲಿ ಮಲಗಿದ್ದ ಯಾತ್ರಾರ್ಥಿಗಳ ಮೇಲೆ ಬಸ್ ಹರಿದ ಪರಿಣಾಮ ಏಳು ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ. 

ಮೃತರಲ್ಲಿ ನಾಲ್ವರು ಮಹಿಳೆಯರು ಮತ್ತು ಮೂವರು ಮಕ್ಕಳು ಸೇರಿದ್ದಾರೆ ಎನ್ನಲಾಗಿದೆ. 

ಆರಂಭಿಕ ವರದಿಗಳ ಪ್ರಕಾರ, ಮೃತ ಯಾತ್ರಾರ್ಥಿಗಳು ವೈಷ್ಣೋ ದೇವಿಯಿಂದ ಹಿಂದಿರುಗುತ್ತಿದ್ದು, ಗಂಗಾದಲ್ಲಿ ಸ್ನಾನ ಮಾಡಲು ಬುಲಂದ್‌ಶಹರ್‌ನ ನರರಾ ಘಾಟ್‌ಗೆ ತೆರಳಿದ್ದರು ಎನ್ನಲಾಗಿದೆ. ಮಾರ್ಗ ಮಧ್ಯೆ ವಿಶ್ರಾಂತಿಗಾಗಿ ರಸ್ತೆ ಬದಿಯಲ್ಲಿ ಮಲಗಿದ್ದಾಗ ಅಪಘಾತ ಸಂಭವಿಸಿದೆ.

ಕೂಡಲೇ ಸ್ಥಳಕ್ಕಾಗಮಿಸಿದ ಭಾರಿ ಪೊಲೀಸ್ ಪಡೆ ಸ್ಥಳಕ್ಕೆ ತಲುಪಿ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಸದ್ಯ ಪೊಲೀಸರು ಮೃತರ ಕುಟುಂಬದ ಸದಸ್ಯರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ. ಅಪಘಾತದ ಬಳಿಕ ಬಸ್ ಚಾಲಕ ಪರಾರಿಯಾಗಿದ್ದು, ಆತನಿಗಾಗಿ ಹುಡುಕಾಟ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.